ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಶಿವಾಜಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಆಯ್ಕೆ

ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಶಿವಾಜಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಆಯ್ಕೆ Shivaji PU College student selected for international sports meet

ಧಾರವಾಡ 28: ಮರಾಠ ವಿದ್ಯಾ ಪ್ರಸಾರಕ ಮಂಡಳಿಯ ಛತ್ರಪತಿ ಶಿವಾಜಿ ಮಹಾರಾಜ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ (ಶಿವಾಜಿ ಪಿಯು ಕಾಲೇಜು) ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕುಮಾರಿ ನಫೀಸಾ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.  ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ನಫೀಸಾ, ಥೈಲ್ಯಾಂಡ್ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಕಾಲೇಜಿನ ಆಡಳಿತ ಮಂಡಳಿ ವೈಯಕ್ತಿಕವಾಗಿ ?38 ಸಾವಿರ ಪ್ರೋತ್ಸಾಹಧನ ನೀಡಿದೆ.  ಇದೇ ವೇಳೆ, ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಅಮೋಘ ಶಿರೋಡ್ಕರ್ ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.  

ಇಬ್ಬರು ಕ್ರೀಡಾಪಟುಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಮನೋಹರ ಎನ್‌. ಮೋರೆ, ಉಪಾಧ್ಯಕ್ಷ ಪ್ರಕಾಶ್ ಘಾಟಗೆ, ಕಾರ್ಯಾಧ್ಯಕ್ಷ ಮಹೇಶ್ ಅರ್ಜುನರಾವ್ ಶಿಂಧೆ, ಗೌರವ ಕಾರ್ಯದರ್ಶಿಗಳಾದ ವಿಠ್ಠಲ್ ವೆಂಕಟೇಶ್ ಪಾಟೀಲ ಹಾಗೂ ಈಶ್ವರ ಪಾಟೀಲ, ನಿರ್ದೇಶಕರು, ಕಾಲೇಜು ಸುಧಾರಣಾ ಸಮಿತಿಯ ಮುಖ್ಯಸ್ಥ ವಿಜಯ ಭೋಸಲೆ, ನಿರ್ದೇಶಕರಾದ ಆನಂದ ಜಾಧವ್, ರಾಜು ಬಿರಜೆ, ಶಂಕರ ಶೇಳಕೆ, ಮಂಜುನಾಥ ಜಾಧವ್, ಸುನೀಲ ಮೋರೆ, ಪ್ರಾಚಾರ್ಯೆ ಶೈಲಶ್ರೀ ಎಂ. ಸಂಕೋಜಿ, ದೈಹಿಕ ಶಿಕ್ಷಣ ಶಿಕ್ಷಕ ವಿನಾಯಕ ದವಣೆ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.