ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿ ದೇಣಿಗೆ
Shivaji Maharaja Co-op. Credit Society Donation
ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿ ದೇಣಿಗೆ
ವಿಜಯಪುರ 25: ಜಿಲ್ಲೆಯ ಪ್ರತಿಷ್ಠಿತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿಯಲ್ಲಿ ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸಂಘದ ಧರ್ಮಾರ್ಥ ನಿಧಿಯಿಂದ ದೇಣಿಗೆ ನೀಡುವ ಕಾರ್ಯಕ್ರಮವನ್ನು ದಿ. 24ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಂಕರ ಕನಸೆ ವಹಿಸಿದ್ದರು. ಕಾಖಂಡಕಿ ಗ್ರಾಮದ ಕ್ಷತ್ರೀಯ ಮರಾಠಾ ಸಮಾಜದ ವತಿಯಿಂದ ನಿರ್ಮಿಸುತ್ತಿರುವ ವಿಠ್ಠಲ ರುಕ್ಮೀಣಿ ದೇವಸ್ಥಾನಕ್ಕೆ ಸಂಘದ ವತಿಯಿಂದ ರೂ. 51,000 ಗಳ ಚೆಕ್ಕನ್ನು ಗ್ರಾಮದ ಮರಾಠಾ ಸಮಾಜದ ಅಧ್ಯಕ್ಷ ರಾಮು ಜಾಧವ ಇವರಿಗೆ ನೀಡಲಾಯಿತು.
ನಗರದ ಬಿ.ಡಿ.ಈ ಸಂಸ್ಥೆಯ ಪಿ.ಡಿ.ಜೆ. ಪದವಿಪೂರ್ವ ಮಹಾವಿದ್ಯಾಲಯಕ್ಕೆ ಸಂಘದ ವತಿಯಿಂದ 20ಗೋಡೆ ಗಡಿಯಾರಗಳನ್ನು ಉಪ-ಪ್ರಾಂಶುಪಾಲ ಮುಕುಂದ ಆಲೂರ ಇವರಿಗೆ ನೀಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಹಿರಿಯ ನಿರ್ದೇಶಕ ಡಾ. ಸದಾಶಿವ ಪವಾರ ಕಳೆದ 28 ವರ್ಷಗಳಿಂದ ನಮ್ಮ ಸಂಸ್ಥೆಯು ಕೇವಲ ಲಾಭದ ಉದ್ದೇಶದಿಂದ ಮಾತ್ರ ಕೆಲಸ ನಿರ್ವಹಿಸದೇ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಅವಿರತ ಸೇವೆಯನ್ನು ಮಾಡುತ್ತ ಬಂದಿದ್ದು, ಜಿಲ್ಲೆಯ ವಿವಿಧ ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳಿಗೆ ತನ್ನ ಧರ್ಮಾರ್ಥ ನಿಧಿಯಿಂದ ದೇಣಿಗೆಯನ್ನು ನೀಡುತ್ತಾ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಸಂಜಯ ಜಂಬೂರೆ ಮಾತನಾಡಿ ನಮ್ಮ ಸಂಸ್ಥೆಯು ಪ್ರಾರಂಭದಿಂದಲೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು ಪ್ರತಿವರ್ಷ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ರೂಪದಲ್ಲಿ ಗೌರವಧನವನ್ನು ನೀಡುತ್ತ ಬಂದಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿ ಸದಸ್ಯ ಬಿ. ಟಿ. ತರಸೆ, ಡಾ. ಸದಾಶಿವ ಪವಾರ, ಮಹಾದೇವ ಪವಾರ, ಪ್ರವೀಣ ಬೋಡಕೆ, ರಾಮಚಂದ್ರ ಚವ್ಹಾಣ, ರವಿ ಮಧಬಾವಿ, ಭಾರತ ದೇವಕುಳೆ, ಪಾಂಡುರಂಗ ರೋಹಿಟೆ, ಸರೋಜನಿ ನಿಕ್ಕಮ್, ಅಂಬುತಾಯಿ ಜಾಧವ, ಸುರೇಖಾ ಕದಂ, ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ, ಸಹಾಯಕ ವ್ಯವಸ್ಥಾಪಕ ಅಂಬಾದಾಸ ಚವ್ಹಾಣ ಹಾಗೂ ಸಿಬ್ಬಂದಿ ಸದಸ್ಯರು ಮತ್ತು ಕಾಖಂಡಕಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 