ಶಿವಾಜಿ ಮಹಾರಾಜರು ದೇಶಕಂಡ ಅಪ್ರತಿಮ ನಾಯಕ: ಶ್ರೀಮಂತ ಪಾಟೀಲ್
Shivaji Maharaj was an unparalleled leader of the country: Shrimant Patil
ಸಂಬರಗಿ 12: ಶಿವಾಜಿ ಮಹಾರಾಜರು ದೇಶಕಂಡ ಅಪ್ರತಿಮ ನಾಯಕರಾಗಿದ್ದರು ಶಿವಾಜಿ ಮಹಾರಾಜ್ ಅವರ ಧೈರ್ಯ ಶೌರ್ಯ ದೇಶದ ಯುವಕರಿಗೆ ಮಾದರಿಯಾಗಿದೆ. ಶಿವಾಜಿ ಮಹಾರಾಜರ ನೈತಿಕ ಮೌಲ್ಯಗಳನ್ನು ಇಂದಿನ ಯುವಕರಲ್ಲಿ ಮೈಗೂಡಿಸಬೇಕು, ಶಿವಾಜಿ ಮಹಾರಾಜರು ಹಿಂದೂ ಧರ್ಮದ ಪ್ರತೀಕವಾಗಿದ್ದಾರೆ. ಅವರು ಭಾರತದಲ್ಲಿ ಮೊದಲ ನೌಕಾಪಡೆಯನ್ನು ಸ್ಥಾಪಿಸಿದರು. ಅವರನ್ನು ಜನತೆಯ ರಾಜನೆಂದು ಕರೆಯುತ್ತಿದ್ದರು ಅವರು ತಮ್ಮ ಜೀವನದ ಬಗ್ಗೆ ಯೋಚಿಸಲೇ ಇಲ್ಲ. ಮಹಿಳೆಯರ ಸಂರಕ್ಷಣೆಗೆ ಕಟಿಬದ್ಧರಾಗಿದ್ದರು. ಅಥಣಿ ಸಕ್ಕರೆ ಅಧ್ಯಕ್ಷ ಮಾಜಿ ಸಚಿವ, ಶ್ರೀಮಂತ ಪಾಟೀಲ್ ಅವರು ಹೇಳಿದರು. ಶಿನಾಳ ಗ್ರಾಮದಲ್ಲಿ ಮರಾಠ ಸಮಾಜದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಅಥಣಿಯಲ್ಲಿ ನಡೆದ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಿದ್ದನ್ನು ಪರಿಗಣಿಸಿ ಅದಕ್ಕೆ ಎಲ್ಲೇ ವಸ್ತುವನ್ನು ಮಾಡಿರತಕ್ಕಂತ ಶ್ರೀಮಂತ ಪಾಟೀಲರನ್ನು ಸರಮಾಣಿಸುವ ಸಂದರ್ಭದಲ್ಲಿ ಉದ್ದೇಶ ಮಾತನಾಡಿದರು.
ಶಿವಾಜಿ ಮಹಾರಾಜರು ಮರಾಠ ಸಮಾಜವನ್ನು ಅಷ್ಟೇ ಪ್ರತಿನಿಧಿಸದೆ ಸಮಸ್ತ ಹಿಂದೂ ಧರ್ಮವನ್ನು ಪ್ರತಿನಿಧಿಸುವ ಏಕೈಕ ಧೀಮಂತ ನಾಯಕನಾಗಿದ್ದರು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಎಲ್ಲರ ಸಹಕಾರದೊಂದಿಗೆ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಅದಕ್ಕಾಗಿ ನಾನು ಎಲ್ಲರಿಗೂ ಋಣಿಯಾಗಿದ್ದೇನೆ. ಎಲ್ಲರ ಸಹಕಾರವು ಹೀಗೆಯೇ ಮುಂದುವರಿಯಲಿ. ಸಮಾಜಕ್ಕಾಗಿ ಯಾವುದೇ ಕೆಲಸವಿದ್ದರೆ, ಸಮಾಜವು ಯಾವಾಗಲೂ ಸಮಾಜದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು. ಶ್ರೀನಿವಾಸ ಪಾಟೀಲ, ಆರ್.ಎಂ.ಪಾಟೀಲ, ಬಾವುಸಾಹೇಬ ಜಾಧವ, ಪ್ರಭಾಕರ ಚವ್ಹಾಣ, ಉತ್ತಮ ಪಾಟೀಲ, ವಿಕ್ರಾಂತ ಪವಾರ, ದೇಸಾಯಿ, ಅಪ್ಪಾಸಾಹೇಬ, ಅವತಾಡೆ, ನಾನಾಸಾಹೇಬ, ಅವತಾಡೆ, ದಾಮು ಪಾಟೀಲ, ತಂಗಡಿ ಗ್ರಾ.ಪಂ.ಸದಸ್ಯ ಅಶೋಕ ಪಾಟೀಲ, ಮಲಿಕಾರ್ಜುನ ಅದಾನಿ ಡಾ.ಭೋಸಲೆ ಸೇರಿದಂತೆ ಎಲ್ಲ ಗ್ರಾಮಗಳವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 