ಶಿರಹಟ್ಟಿ : ಲಾರ್ವ ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ

ಲೋಕದರ್ಶನ ವರದಿ

ಶಿರಹಟ್ಟಿ 01: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೀಟ ಜನ್ಯ ರೋಗಗಳ ನಿಯಂತ್ರಣ ಕಾಯರ್ಾಲಯ ಗದಗ ಮತ್ತು ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪಟ್ಟಣದಲ್ಲಿ ಶನಿವಾರ ನಡೆದ ಡೆಂಗು, ಚಿಕನ್ ಗುನ್ಯಾ, ಮಲೇರಿಯಾ ನಿಯಂತ್ರಣಕ್ಕಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಲಾರ್ವ ಸಮೀಕ್ಷೆ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಚಂದ್ರು ಲಮಾಣಿ ಮಾತನಾಡಿ. ಶಹರದಲ್ಲಿ ಒಟ್ಟು 30 ತಂಡಗಳನ್ನು ರಚಿಸಲಾಗಿದ್ದು, ಪ್ರತಿಯೊಬ್ಬ ಸದಸ್ಯರು ಮನೆ ಮನೆಗೆ ತೆರಳಿ ಲಾರ್ವ ಸಮೀಕ್ಷೆ ಕೈಗೊಂಡು ಸೊಳ್ಳೆಯ ನಿಯಂತ್ರಣ ಕುರಿತು ಮಾಹಿತಿ ನೀಡುತ್ತಾರೆ. ಡೆಂಗು ಮತ್ತು ಚಿಕನ್ ಗುನ್ಯಾ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ವಾರಕ್ಕೆ ಎರಡು ಬಾರಿ ನೀರಿನ ಪರಕರಗಳನ್ನು ಸ್ವಚ್ಛೆವಾಗಿ ತೊಳೆದು ಸೊಳ್ಳೆ ಆಗದಂತೆ ನೋಡಿಕೊಳ್ಳುವುದು ಮನೆಯ ಪ್ರತಿಯೊಬ್ಬ ಸದಸ್ಯರ ಜಾವಾಬ್ದಾರಿಯಾಗಿದೆ. ಏಕೆಂದರೆ ಗಲಿಜು ನೀರಿನ ಪರಿಕರಗಳಲ್ಲಿ ಸೊಳ್ಳೆಗಳು ತಮ್ಮ ಸಂತಾನೋತ್ಪತ್ತೆ ಮಾಡಲು ನೀರಿನಲ್ಲಿ ಮೊಟ್ಟೆಗಳನ್ನಿಟ್ಟು ತನ್ನ ಸಂತಾನೋತ್ಪತ್ತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತದೆ. ಇದರಿಂದ ಲಾರ್ವ ಉತ್ಪತ್ತಿಯಾಗಿ ಚಿಕನ್ ಗುನ್ಯಾ, ಡೆಂಗ್ಯು, ಮಲೇರಿಯಾ ರೋಗಗಳು ಹರಡಲು ಅನುಕೂಲವಾಗುತ್ತದೆ. ಆದ್ದರಿಂದ ಪಟ್ಟಣದ ಸರ್ವ ಸದಸ್ಯರು ತಮ್ಮ ನೀರಿನ ಪರಿಕರಗಳನ್ನು ಮುಚ್ಚಿಟ್ಟು, ಸುರಕ್ಷಿತವಾಗಿಟ್ಟುಕೊಂಡಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಎಂ.ಎಚ್. ವೈ.ಡಿ. ಚನ್ನಮ್ಮನವರ, ಆರ್.ಡಿ. ತಳವಾರ, ಎಲ್.ಎಫ್. ನಾಸರ್ಿ, ಪ್ರಭಾ ಭಟ  ಸೇರಿದಂತೆ ಎಲ್ಲ ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.