ಶಿಗ್ಗಾವಿ ಏಕಾದಶಿ ವೈಷ್ಣವ ಸಂಪ್ರದಾಯದ ಅತ್ಯಂತ ಪವಿತ್ರ ದಿನ ಹಿ ಕೇದಾರ್ಪ ಬಗಾಡೆ
Shiggaon Ekadashi is a highly sacred day in the Vaishnava tradition — Kedarpa Bagade
ಶಿಗ್ಗಾವಿ, ಜು.25: ಏಕಾದಶಿಯು ವೈಷ್ಣವ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ದಿನವಾಗಿದ್ದು, ಭಗವಂತನ ಆರಾಧನೆ, ಉಪವಾಸ ಹಾಗೂ ಭಜನೆಯ ಮೂಲಕ ಭಕ್ತರು ಆತ್ಮಶುದ್ಧಿ ಮತ್ತು ದೈವಕೃಪೆಯನ್ನು ಪಡೆಯುವ ದಿನವಾಗಿದೆ ಎಂದು ಸಿಂಪಿ ಸಮಾಜದ ಅಧ್ಯಕ್ಷ ಕೇದಾರ್ಪ ಬಗಾಡೆ ಹೇಳಿದರು.
ಪಟ್ಟಣದ ವಿಠ್ಠಲ ಹರಿ ಮಂದಿರದಲ್ಲಿ ಪ್ರಥಮ ಏಕಾದಶಿ ಅಂಗವಾಗಿ ನಾಮದೇವ ಸಿಂಪಿ ಸಮಾಜದ ವತಿಯಿಂದ ಆಯೋಜಿಸಿದ್ದ ಮಹಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಷಾಢ ಏಕಾದಶಿಯನ್ನು ದೇವಶಯನಿ ಏಕಾದಶಿ ಅಥವಾ ಶಯನಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ದಿನ ಶ್ರೀ ಮಹಾವಿಷ್ಣು ಯೋಗನಿದ್ರೆಗೆ ತೆರಳುತ್ತಾರೆ ಎಂಬುದು ಪುರಾಣ ಪ್ರಸಿದ್ಧ ನಂಬಿಕೆಯಾಗಿದೆ. ಭಕ್ತರು ಉಪವಾಸ, ಪೂಜೆ, ಜಪ, ಭಜನೆ ಹಾಗೂ ಸೇವೆಯ ಮೂಲಕ ಶ್ರೀ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೃಷ್ಣ ಮೂಳೆ, ಏಕನಾಥ ಮಾಳವದೆ, ಮಹಿಳಾ ಅಧ್ಯಕ್ಷೆ ರೂಪಾ ಬಗಾಡೆ, ಮುರಳೀಧರ ಮಾಳವದೆ, ವಿನಾಯಕ ಗಂಜೀಗಟ್ಟಿ, ವಿನೋಬಾ ಮಾಳವದೆ, ನಾರಾಯಣ ಬಗಾಡೆ, ಪರಶುರಾಮ ಮಾಳವದೆ, ಗುರುನಾಥ ಬಗಾಡೆ, ಗೋಪಾಲ ಮಾಳವದೆ, ಪರಶುರಾಮ ಮೀರಜಕರ, ಶಂಕರ್ಪ ಕೂಪಳೆ, ಪ್ರಕಾಶ ಆತಡಕರ, ಭಾಗೀರಥಿ ಉರಣಕರ, ಹೇಮಾ ಮಾಳವದೆ, ವಿಜಯಲಕ್ಷ್ಮೀ ಗಂಜೀಗಟ್ಟಿ, ವಿಜ್ಜಕ್ಕ ಗಂಜೀಗಟ್ಟಿ ಸೇರಿದಂತೆ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 