ಲೋಕದರ್ಶನ
ವರದಿ
ಶಿಗ್ಗಾವಿ 14
: ದೇವಿಯ ಆಶರ್ಿವಾದವಿದ್ದರೆ ಏನೂ ಬೇಕಾದರೂ ಸಾಧನೆ
ಮಾಡಬಹುದು ಅದಕ್ಕೆ ಉದಾಹರಣೆ ಶಿಗ್ಗಾವಿ ತಾಲೂಕಿನ ಸುಧಾಮೂತರ್ಿಯವರು ಇಂದು ಮೈಸೂರ ದಸರಾ
ಉದ್ಘಾಟನೆ ನೇರವೇರಿಸಿದ್ದು ನಮಗೆಲ್ಲ ಸಾಕ್ಷಿ ಎಂದು ಮಾಜಿ ಸಂಸದ
ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ
ಸಮಿತಿ ಶಿಗ್ಗಾವಿ ಗಂಜೀಗಟ್ಟಿ ಶರನ್ನವರಾತ್ರಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಸುಧಾಮೂತರ್ಿಯವರು ಇಷ್ಟು
ಎತ್ತರಕ್ಕೆ ಬೆಳೆಯಲು ಶಿಗ್ಗಾವಿ ಗ್ರಾಮದೇವತೆಯ ಆಶರ್ಿವಾದದ ಜೊತೆಗೆ ಅವರ ಪ್ರಯತ್ನ ಕಾರಣ
ಆದ್ದರಿಂದ ದೇವಿಯ ಪುರಾಣದ ವಿಚಾರಗಳನ್ನು ನಾವು ದೈನಂದಿನ ವಿಚಾರಗಳಲ್ಲಿ
ಅಳವಡಿಸಿಕೊಂಡು ಕಾರ್ಯರೂಪಕ್ಕೆ ತರಬೇಕೆಂದರು.
ಮಾಜಿ ವಿ.ಪ.ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ ಮೊದಲಿಗೆ ಪ್ರತಿ ಗ್ರಾಮದಲ್ಲಿಯೂ ಒಂದೊಂದು ಗ್ರಾಮದೇವತೆಯ ಮುಖಾಂತರ ತಮ್ಮ ಆರೋಗ್ಯದ ಸಮಸ್ಯೆಗಳನ್ನು
ಪರಿಹರಿಸಿಕೊಳ್ಳುತ್ತಿದ್ದರು
ಆದರೆ ಇಂದಿನ ಒತ್ತಡದ ಬದುಕಿನ ದಿನಗಳಿಗೆ ಹೊಂದಾಣಿಕೆ ಮಾಡಿಕೊಂಡು ಆಸ್ಪತ್ರೆಯ ಮೊರೆ ಹೋಗುತ್ತಾರೆ ಮತ್ತು
ಸಮಿತಿಯ ಕೆಲಸ ಕಾರ್ಯಗಳನ್ನು ಪ್ರಶಂಸಿದರು.
ಪುರಸಭೆ ಅಧ್ಯಕ್ಷ ಸುರಗಿಮಠ ಮಾತನಾಡಿ ದುಷ್ಟ ವಿಚಾರಗಳನ್ನು ಹೋಗಲಾಡಿಸಿ ಒಳ್ಳೆಯ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕಾದರೆ
ದೇವಿಯ ಮೊರೆ ಹೋಗಬೇಕಾಗುತ್ತದೆ
ಮತ್ತು ದೇವಿಯ ಪುರಾಣ ಪಠಣ ಮತ್ತು ಪ್ರವಚನ
ಮಾಡಿ ದೇವಿಯ ಕೃಫೆಗೆ ಪಾತ್ರರಾಗಬೇಕೆಂದರು.
ಜಾ.ಉ.ಸಮಿತಿ
ಉಪಾಧ್ಯಕ್ಷರಾದ ಎಸ್.ವ್ಹಿ. ದೇಶಪಾಂಡೆ
ಮಾತನಾಡಿ ತಾಲೂಕಿನ ಪುಣ್ಯದ ಫಲದಿಂದ ನಾವು 2003 ರಿಂದ ಇಲ್ಲಿಯವರೆಗೆ ಸಮಿತಿಯ
ಮುಖಾಂತರ ದೇವಿಯ ಆರಾಧನೆ ಮಾಡುತ್ತಾ ಕಳೆದ 16 ವರ್ಷಗಳಿಂದ ದೇವಿ ಪುರಾಣ ಪಠಣ
ಮಾಡಿಸಿ ಎಲ್ಲ ಸದ್ಬಕ್ತರಿಗೂ ದೇವಿ
ಶಕ್ತಿ ಆರಾಧಿಸುವಂತೆ ಮಾಡಿ ಅದರ ಜೊತೆಗೆ
ದೇವಸ್ಥಾನಕ್ಕೆ ಸಂಪನ್ಮೂಲ ಕ್ರೋಡಿಕರಣ ಮಾಡಿ ಆಥರ್ಿಕವಾಗಿ ಭದ್ದತೆಯನ್ನು
ಹೊಂದಲು ಕಾರಣವಾಗಿದೆ. ಬೇಜಾರದ ಸಂಗತಿ ಯುವಕರು ಮುಂದೆ ಬರದೇ ಇರುವುದು.
ಜಾ.ಉ.ಸಮಿತಿ ಅಧ್ಯಕ್ಷರಾದ ಶಂಕರಗೌಡ್ರು
ಪಾಟೀಲ ಮಾತನಾಡಿ
ಗ್ರಾಮದೇವತೆಯು ಒಂದೇ ಸಮುದಾಯಕ್ಕೆ ಸೀಮಿತವಾಗದೇ
ಸರ್ವಜನಾಂಗಕ್ಕೂ ಆಶ್ರಯದಾತಳಾಗಿದ್ದಾಳೆ ಆ ದೇವಿ ಗ್ರಾಮದೇವಿ. ಸಾರ್ವಜನಿಕರ
ಸಹಾಯ ಸಹಕಾರದಿಂದ ದೇವಿಯ ದೇವಸ್ಥಾನ ಹಂತ ಹಂತವಾಗಿ ಅಭಿವೃದ್ಧಿ
ಹೊಂದುತ್ತಿರುವುದು ಸಂತೋಷದ ಸಂಗತಿ ಎಂದರು.
ದಿವ್ಯ
ಸಾನಿಧ್ಯವನ್ನ ವೈಜನಾಥ ಶಿವಲಿಂಗೇಶ್ವರ ಶಿವಾಚರ್ಾಯ ಮಹಾಸ್ವಾಮಿಗಳು ಹಾಗೂ ಸಮ್ಮುಖವನ್ನ ವಿರಕ್ತಮಠದ
ಸಂಗನಬಸವ ಮಹಾಸ್ವಾಮಿಗಳು ವಹಿಸಿ ಆಶರ್ಿವದಿಸಿದರು.
ಪ್ರಾಸ್ತಾವಿಕವಾಗಿ ಎಸ.ಪಿ.ಜೋಷಿ
ಮಾತನಾಡಿದರು. ಪ್ರವಚನಕಾರರಾದ ವೇದಮೂತರ್ಿ ಕುಮಾರಸ್ವಾಮಿ ಶಾಸ್ತ್ರೀ ಹಿರೇಮಠ, ಶರಣಬಸಯ್ಯ ಹಿರೇಮಠ, ಬಸವರಾಜ ಚಳಕೇರಿ, ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ, ಟಿ.ವ್ಹಿ.ಸುರಗಿಮಠ,
ಜಯಣ್ಣ ಹೆಸರೂರ,ದತ್ತಣ್ಣಾ ವೆಣರ್ೇಕರ, ಬಿ.ಎಮ್.ಹಿರೂಲಾಲ,
ಅಶೋಕ ಕಾಳೆ, ಸಿದ್ರಾಮಣ್ಣ ಯಲಿಗಾರ, ದಾರವಾಢ ಉಪಸ್ಥಿತರಿದ್ದರು. ಮಲ್ಲಪ್ಪ ರಾಮಗೇರಿ ಸ್ವಾಗತಿಸಿ ವಂದಿಸಿದರು.