ಕೊಪ್ಪಳದಲ್ಲಿ ಕುರಿಗಾರರ ಕಾರ್ಯಗಾರ: ಪೂರ್ವಭಾವಿ ಸಿದ್ಧತಾ ಸಭೆ
Shepherds' Workshop in Koppal: Preliminary Preparation Meeting
ಕೊಪ್ಪಳ ಮೇ 27, ಬರುವ ತಿಂಗಳ ಜೂನ್ 19ರಂದು ಕೊಪ್ಪಳದಲ್ಲಿ ಕುರಿಗಾರರಿಗೆ ಕುರಿ ಮತ್ತು ಮೇಕೆ ಸಾಗಾಣಿಕೆಯ ಆಧುನಿಕ ತಂತ್ರಜ್ಞಾನ ವ ಮೌಲ್ಯವರ್ಧಿತ ಮಾಂಸ ಉತ್ಪಾದನೆ ಹಾಗೂ ಪ್ರಧಾನ ಮಂತ್ರಿ ಗಳ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಹಾಯ ಧನದ ಸಾಲ ಸೌಲಭ್ಯ ಒದಗಿಸುವ ಕುರಿತು ತರಬೇತಿ ಕಾರ್ಯಗಾರ ನಡೆಸಲು ನಿರ್ಣಯಿಸಲಾಯಿತು.
ಮಂಗಳವಾರ ಕೊಪ್ಪಳದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಕುರಿ ಮತ್ತು ಉಣ್ಣೆ ಸಹಕಾರಿ ಸಂಘ ಹಲಗೇರಿಯ ಅಧ್ಯಕ್ಷರಾದ ಗುಡದಪ್ಪ ಬಾನಪ್ಪನವರ ಹಲಗೇರಿ ಯವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು, ಶೀಘ್ರ ಕೊಪ್ಪಳದಲ್ಲಿ ಇನ್ನೊಮ್ಮೆ ಪೂರ್ವಭಾವಿ ಸಿದ್ಧತಾ ಸಭೆ ಏರಿ್ಡಸಿ ಬಾಳು ಮಾಮ ಕುರಿಗಾಯಿ ಸಂಗೋಪನಾ ಸೇವಾ ಧಾರ್ಮಿಕ ಟ್ರಸ್ಟ್ ಧಾರವಾಡನ ಸಂಪನ್ಮೂಲ ವ್ಯಕ್ತಿ ಡಾ, ಮಹಮ್ಮದ್ ರಫಿಕ ಮೀರಾ ನಾಯಕ್ ರವರ ಉಪಸ್ಥಿತಿ ಮತ್ತು ನೇತೃತ್ವ ದಲ್ಲಿ ಸಭೆ ಸೇರಿ ಮತ್ತೊಮ್ಮೆ ಚರ್ಚಿಸಿ ಕಾರ್ಯಗಾರದ ರೂಪರೇಷಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗುವುದು ಎಂದು ಟ್ರಸ್ಟಿನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಪುರಾಣಿಕ ಮಠ ರವರು ಪ್ರಕಟಿಸಿದರು, ಕುರಿಗಾಹಿಗಳಿಗೆ ಸರಕಾರದಿಂದ ಸಿಗಬಹುದಾದ ಸಹಾಯ ಸೌಕರ್ಯ ಸಾಲ ಇತ್ಯಾದಿ ಯೋಜನೆಗಳ ಲಾಭ ಸಿಗಲು ಕುರಿಗಾರರಿಗೆ ಕಾರ್ಯಗಾರದ ಮೂಲಕ ತರಬೇತಿ ನೀಡಿ ಜಾಗೃತಿಗೊಳಿಸಲಾಗುವುದು ಎಂದು ವಿವರಿಸಿದರು.
ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿ ಗಳಾದ ಅವಿನಾಶ್ ಮತ್ತು ಶಿವಯ್ಯ ಸ್ವಾಮಿ ನವಲಿ ಹಾಗೂ ಕುರಿಗಾಹಿ ಮಾಂತಪ್ಪ ತೋಟದ್ ಮತ್ತು ಈರ್ಪ ಮುದ್ದಾ ಬಳ್ಳಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಲ್ಲದೆ ಅನೇಕರು ಉಪಸಿತರಿದ್ದರು,
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 