ಬಡವರಿಗೆ ಆಶ್ರಯ ನಿವೇಶನ ಪತ್ರ ವಿತರಿಸಲಾಗುವುದು: ಶಾಸಕ ಶಿವಣ್ಣನವರ

ಬಡವರಿಗೆ ಆಶ್ರಯ ನಿವೇಶನ ಪತ್ರ ವಿತರಿಸಲಾಗುವುದು: ಶಾಸಕ ಶಿವಣ್ಣನವರ Shelter certificates will be distributed to the poor: MLA Shivannavara

ಬ್ಯಾಡಗಿ 20: ಕಳೆದ ಎಂಟು ವರ್ಷಗಳಿಂದ ಇಲ್ಲಿವರೆಗೂ ಯಾವುದೇ ಆಶ್ರಯ ನಿವೇಶನಗಳು ಹಂಚಿಕೆ ಆಗಿರುವುದಿಲ್ಲ ಆದರೆ ನಾಳೆ ಆಗಸ್ಟ್‌ 15ರ ಆಸು ಪಾಸಿನಲ್ಲಿ ನಮ್ಮ ನೇತೃತ್ವದಲ್ಲಿ ಬಡವರಿಗೆ ನಿವೇಶನ ಹಕ್ಕು ಪತ್ರವನ್ನು ವಿತರಿಸಲಾಗುವುದು ಎಂದು ಶಾಸಕ ಬಸವರಾಜ್ ಶಿವಣ್ಣನವರು ಹೇಳಿದರು ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದವರು ಈಗಾಗಲೇ ಕಳೆದೆ ಬಾರಿ 814 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು ಆದರೆ ಈಗಿರುವ ಸಮಯದಲ್ಲಿ ಆಯಾ ವಾರ್ಡ್ಗಳು ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷರ ಸಮ್ಮುಖದಲ್ಲಿ ನಿವೇಶನದ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಬಡವರ್ಗದ ವರಿಗೆ ವಿತರಣೆ ಮತ್ತು ಮುಖ್ಯ ರಸ್ತೆಯ ಅಗಲೀಕರಣ ದಲ್ಲಿ ಶೇಕಡ 80 ರಿಂದ 90ರಷ್ಟು ಮನೆ ಹೋದಲ್ಲಿ ಅಂಥವರಿಗೂ ಸಹ ನಿವೇಶನವನ್ನು ಕೊಡಲಾಗುವುದೆಂದು ಹೇಳಿದರು. 

ಶೀಘ್ರದಲ್ಲಿಯೇ  ಗುಮ್ಮನಹಳ್ಳಿ ಸರ್ಕಲ್ ಬಳಿ ಹಾಗೂ ಮಲ್ಲೂರು ರಸ್ತೆಯಲ್ಲಿರು ಮೂಲ ಗಟಾರಗಳನ್ನು ನಿರ್ಮಾಣ ಮಾಡಲಾಗುತ್ತದೆ.ಎಂದರು.ಪುರಸಭೆಯ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯ ಮಂಡಿಸಿದ ವಿಷಯಗಳು ಕಳೆದ ದಿನಾಂಕ 2- 5 +2025ರ ಸಾಮಾನ್ಯ ಸಭೆಯಲ್ಲಿನ ಸ್ಥಾಯಿ ಸಮಿತಿಯ ಸಭೆಯ ಠರಾವುಗಳನ್ನು ಓದಿ ದೃಢೀಕರಿಸಲಾಯಿತು. ಪ್ರಸಕ್ತ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳುಗಳ ಜಮಾ ಖರ್ಚಿಗೆ ಮಂಜೂರಾತಿ ನೀಡಲಾಯಿತು. ಪೌರಕಾರ್ಮಿಕರಿಗೆ ಸರ್ಕಾರ ಆದೇಶದ ಸಂಖ್ಯೆ ನಅಇ 147 ಎಸ್ ಎಫ್ ಸಿ 2025ನೇ ಇಲಾಖೆ 28-05--2025 ಅನುಯ ಬಾಕಿ ಮೊತ್ತವನ್ನು ಸಾಮಾನ್ಯ ನಿಧಿಯಿಂದ ಪಾವತಿಸಲು ಸೂಚಿಸಲಾಯಿತು. 2024.25 ಮೇ ಸಾಲಿನ 15ನೇ ಹಣಕಾಸು ನಿರ್ಬಂಧಿತ ಅನುದಾನದ ಉಳಿತಾಯ ಮೊತ್ತವನ್ನು ಕಸ ವಿಲಿವಾರಿ ಘಟಕದ ಕಾಂಪೌಂಡ್ ನಿರ್ಮಾಣಕ್ಕೆ ಕಾಯ್ದಿರಿಸಿದ್ದು ಅದನ್ನು ಪುರಸಭೆಯ ಸದಸ್ಯರು ಹಾಗೂ ಅಧ್ಯಕ್ಷರು ಉಪಾಧ್ಯಕ್ಷರ ಸ್ಥಳ ವೀಕ್ಷಣೆ ಮಾಡಿ ತದನಂತರ ಯೋಜನೆ ತಯಾರಿಸಲು ಸೂಚಿಸಲಾಗುವುದು ಎಂದು ಹೇಳಿದರು. ಪಟ್ಟಣದ ಪ್ರತಿ ಮನೆಮನೆಗೆ ಆಸ್ತಿ ಗುರುತಿನ ಸಂಖ್ಯೆ ಪ್ಲೇಟನ್ನು ಅಳವಡಿಸಲು ಸೂಚನೆ ನೀಡಲಾಯಿತು. ಅಮೃತ ಮಿತ್ರ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳ ಗುಂಪುಗಳ ಮೂಲಕ ಪಟ್ಟಣದ ಖಾಲಿ ಇರುವ ಜಾಗದಲ್ಲಿ ಬಿದರಿನ ಗಿಡಗಳನ್ನು ನೆಡಿಸಿ ಅವುಗಳಿಂದ ಪುರಸಭೆಗೆ ಆದಾಯವನ್ನು ಬರುವ ಹಾಗೆ ಯೋಜನೆಯನ್ನು ಹೊಂದಿದ್ದು ಇದಕ್ಕೆ ಸಭೆಯಲ್ಲಿ ಸಮ್ಮತಿ ನೀಡಲಾಯಿತು. ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ರೂ 22 ಲಕ್ಷ ರೂಪಾಯಿಗಳಲ್ಲಿ ಟ್ಯಾಕ್ಟರ್ ಮತ್ತು ಟ್ರೇಲರ್ ಖರೀದಿಸಲು ಅನುಮೋದನೆಯನ್ನು ನೀಡಲಾಯಿತು. ಮುಖ್ಯ ರಸ್ತೆಯಲ್ಲಿನ ಶೀತಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ತೆರವು ಗೊಳಿಸಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆಯಿಂದ ವರದಿ ಆಧಾರದ ಮೇಲೆ ತೆರವನ್ನು ಮಾಡಲು ಸೂಚಿಸಲಾಯಿತು   

2025 26 ನೇ ಸಾಲಿನ ನೀರು ಸರಬರಾಜು ವಿಭಾಗಕ್ಕೆ ಹಾಗೂ ವಿವಿಧ ವಿಭಾಗಗಳ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಲು ವಾರ್ಷಿಕ ಟೆಂಡರಗೆ ಪರೀಶೀಲಿಸಿ ಮಂಜೂರಾತಿ ನೀಡಲಾಯಿತು. ಎಪಿಎಂಸಿ 2ನೇ ಗೇಟ್ ನ ಮುಂಭಾಗದಲ್ಲಿರುವ ಸರ್ಕಲ್ಗೆ ಶ್ರೀ ಕ್ರಾಂತಿಕಾರಿ ಸಂಗೋಳ್ಳಿ ರಾಯಣ್ಣ ವೃತ್ತ ಹಾಗೂ   ಬೀರೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ವಸತಿ ಪ್ರವೇಶಕ್ಕೆ ಬೀರೇಶ್ವರ ನಗರ ಎಂದು ನಾಮಕರಣ ಮಾಡುವ ಸದಸ್ಯರೆಲ್ಲರೂ ಚರ್ಚೆ ಮಾಡಿ ಮಂಜೂರಾತಿ ನೀಡಲು ಸೂಚನೆ ಕೊಡಲಾಯಿತು ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ಕಾರದ ಅಧಿಸೂಚನೆ ನಂಬರ್ ಯುಡಿಡಿ/27/ ಟಿಟಿಪಿ/2016 ಜಿ.24.05.2017. ಗಜೆಟ ಪ್ರಕಟಣೆ ಪ್ರಕಾರ ಜಿ.01.06.2017. ಸಾರ್ವಜನಿಕ ಉಪಯೋಗಕ್ಕಾಗಿ ಕಾಯ್ದಿರಿಸಿರುವ ನಿವೇಶನಗಳನ್ನು ಸರ್ಕಾರಿ ಸಂಸ್ಥೆಗಳ ಹಾಗೂ ಖಾಸಗಿ ಸಂಘ ಸಂಸ್ಥೆಗಳಿಗೆ 30 ವರ್ಷ ಲೀಸ್ ಅವಧಿಗೆ ನೀಡಲು ಸೂಚಿಸಲಾಯಿತು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಏಕನಿವೇಶನ ಹಾಗೂ ಬಹು ನಿವೇಶನ ಲೇಓಟ್ ಗಳಿಗೆ ಎಡಿಟಿಪಿ ಅವರಿಂದ ಅನುಮೋದಿತ ಹಾಗೂ ಮೇಲ್ವಿಚಾರಣೆ ಶುಲ್ಕ ಸಂಗ್ರಹಣ ಮಾಡಿಸಿಕೊಂಡು ಖಾಥಾ ದಾಖಲು ಮಾಡುವ ಕುರಿತು ಚರ್ಚೆ ಮಾಡಿ ಸೂಚನೆ ನೀಡಲಾಗುವುದು. ಬ್ಯಾಡಗಿ ಮಾಸಣಗಿ ಗ್ರಾಮ ಪಂಚಾಯಿತಿ ಹಾಗೂ ಗುಮ್ಮನ ಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಹಲವಾರು ಮೆಣಸಿನ ಕಾಯಿ ಕಾರದಪುಡಿಯ ಜೀನುಗಳು ಹಾಗೂ ಶೀತಲ ಘಟಕಗಳಿದ್ದು ಗ್ರಾಮ ಪಂಚಾಯಿತಿಗಳನ್ನು ಪುರಸಭೆಗೆ ಸೇರೆ​‍್ಡ ಮಾಡಲು ಈಗಾಗಲೇ ಮಾಸಣಗಿ ಗ್ರಾಮ ಪಂಚಾಯತಿಯವರು ಒಮ್ಮತ ನೀಡಿದ್ದು ಗುಮ್ಮನ ಹಳ್ಳಿ ಗ್ರಾಮರ ಪಂಚಾಯತಿಯವರು ಒಮ್ಮತ ಹೊಂದಿದ ಮೇಲೆ ಕೊಟ್ಟ ಮೇಲೆ ಪುರಸಭೆಗೆ ಸೇರೆ​‍್ಡ ಮಾಡಲಾಗದು ಎಂದರು. 

ಪೌರಕಾರ್ಮಿಕರಿಗೆ ಬೆಟ್ಟದ ಮಲ್ಲೇಶ್ವರ ನಗರದಲ್ಲಿ ಇರುವ 20 ಗುಂಟೆ ಜಾಗದಲ್ಲಿ 10 ಗುಂಟೆ ಜಾಗವನ್ನು ನೀಡಲು ಪ್ರಸ್ತಾವನೆಯನ್ನು ಬೆಂಗಳೂರಿಗೆ ಕಳಿಸಿದ್ದು ಬಂದ ನಂತರ ಆ ಜಾಗವನ್ನು ಪೌರ ಕಾರ್ಮಿಕರಿಗೆ ನಿವೇಶನಕ್ಕಾಗಿ ನೀಡಲಾಗುವುದು. ಹಲವು ವಾರ್ಡ್ಗಳಲ್ಲಿ ಜನರ ವಾಸಿಸುವ ಸ್ಥಳಗಳಲ್ಲಿ ಧನದ ಮಾಂಸವನ್ನು ಕಡೆಯುತ್ತಿದ್ದು  ಅಂತವರಿಗೆ ಕಾನೂನು ಪ್ರಕಾರ ಪಟ್ಟಣದ ಅರ್ಧ ಕಿಲೋಮೀಟರ್ ಹೊರವಲಯದಲ್ಲಿ ಶೀಘ್ರದಲ್ಲಿಯೇ ಕ್ವಾಟರ್ ಹೌಸ್ ನಿರ್ಮಿಸಿ ಕೊಟ್ಟ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಪ್ಪ ಗೋಳ ಹೇಳಿದರು.ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಬಾಲಚಂದ್ರ ಗೌಡ ಪಾಟೀಲ್ ಉಪಾಧ್ಯಕ್ಷ ಸುಭಾಷ್ ಮಾಳಗಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ್ ಮಾಜಿ ಪುರಸಭೆ ಅಧ್ಯಕ್ಷ ಬಸಣ್ಣ ಛತ್ರ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ ಈರಣ್ಣ ಬಣಕಾರ್ ರಫೀಕ ಮುದುಗಲ್‌. ಮೆಹಬೂಬ್ ಅಗಸನಹಳ್ಳಿ. ಹನುಮಂತಪ್ಪ ಮ್ಯಾಗೇರಿ. ರಾಜಸಾಬ್ ಕಳ್ಯಾಳ. ಶಂಕರ್ ಕುಸಗುರ. ಫಕ್ಕೀರಮ್ಮ ಚಲವಾದಿ. ಗಾಯತ್ರಿ ರಾಯ್ಕರ್‌. ಸರೋಜಮ್ಮ ಉಳ್ಳಾಗಡ್ಡಿ. ಹಾಗೂ ಪುರಸಭೆ ಎಲ್ಲಾ ಸದಸ್ಯರು.ಪುರಸಭೆಯ ಸಿಬ್ಬಂದಿಗಳು ನಾಮ ನಿರ್ದೇಶಕ ಸದಸ್ಯರು ಉಪಸ್ಥಿತರಿದ್ದರು.