ಲೂಸಿಯಾ, ನ 11 : ಹದಿಹರಿಯದ ಶೆಫಾಲಿ ವರ್ಮಾ ಸತತ ಎರಡನೇ ಅರ್ಧಶತಕ ಹಾಗೂ ದೀಪ್ತಿ ಶರ್ಮಾ ಅವರ ನಾಲ್ಕು ವಿಕೆಟ್ ಗೊಂಚಲು ನೆರವಿನಿಂದ ಭಾರತ ಮಹಿಳಾ ತಂಡ ಎರಡನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರದ್ಧ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಭಾನುವಾರ ತಡರಾತ್ರಿ (ಭಾರತ ಕಾಲಮಾನ) ಮುಕ್ತಾಯವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಿಗೆ ಏಳು ವಿಕೆಟ್ ನಷ್ಟಕ್ಕೆ 103 ರನ್ ದಾಖಲಿಸಿತು. ಬಳಿಕ ಸುಲಭ ಗುರಿ ಹಿಂಬಾಲಿಸಿದ ಭಾರತ ಕೇವಲ 10. 3 ಓವರ್ ಗಳಿಗೆ ವಿಕೆಟ್ ನಷ್ಟವಿಲ್ಲದೆ 104 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆಯಿತು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅರ್ಧ ಶತಕ ಸಿಡಿಸಿದ ಅತಿ ಕಿರಿಯ ಬ್ಯಾಟರ್ ಆಗಿರುವ ಶೆಪಾಲ್ ಎರಡನೇ ಪಂದ್ಯದಲ್ಲೂ 69 ರನ್ ಚಚ್ಚಿದ್ದರು. ಮತ್ತೊರ್ವ ಆರಂಭಿಕ ಆಟಗಾರ್ತಿಗೆ ಮಂದಾನಾ (30*) ಅವರ ಜತೆ ಮುರಿಯದ ಮೊದಲನೇ ವಿಕೆಟ್ ಗೆ 104 ರನ್ ಸಿಡಿಸಿ ತಂಡವನ್ನು 9.3 ಓವರ್ ಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ಶೆಫಾಲಿ ಅದ್ಭುತ ಇನಿಂಗ್ಸ್ ನಲ್ಲಿ ಎದುರಿಸಿದ ಕೇವಲ 35 ಎಸೆತಗಳಲ್ಲಿ 10 ಬೌಂಡರಿ ಹಾಗೂ ಎರಡು ಸಿಕ್ಸರ್ ಗಳು ಸೇರಿದ್ದವು. ಇನ್ನು, ಮಂದಾನಾ ಅವರ ಇನಿಂಗ್ಸ್ ನಲ್ಲಿ ನಾಲ್ಕು ಬೌಂಡರಿಗಳಿದ್ದವು. ಭಾರತ ಕಡಿಮೆ ಮೊತ್ತ ಗುರಿ ಬೆನ್ನತ್ತಲು ಕಾರಣರಾಗಿದ್ದು ದೀಪ್ತಿ ಶರ್ಮಾ. ಅದ್ಭುತ ಬೌಲಿಂಗ್ ಮಾಡಿದ್ದ ಅವರು ನಾಲ್ಕು ಓವರ್ ಗಳಿಗೆ 10 ರನ್ ನೀಡಿ ನಾಲ್ಕು ವಿಕೆಟ್ ಕಿತ್ತಿದ್ದರು. ಇವರ ಸ್ಪಿನ್ ಮೋಡಿಗೆ ನಲುಗಿದ್ದ ಆತಿಥೇಯರು ಮೊದಲ ಇನಿಂಗ್ಸ್ ನಲ್ಲಿ 104 ರನ್ ಗಳಿಗೆ ಸೀಮಿತರಾಗಿದ್ದರು. ಮೊದಲು ಬ್ಯಾಟಿಂಗ್ ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡದ ಪರ ಚಂಡೀನ್ ನೇಷನ್ 32 ರನ್, ಹೀಲಿ ಮ್ಯಾಥ್ಯೂಸ್ 23 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದವರು ವಿಫಲರಾದರು. ಸಂಕ್ಷಿಪ್ತ ಸ್ಕೋರ್ ವೆಸ್ಟ್ ಇಂಡೀಸ್(ಮ): 20 ಓವರ್ ಗಳಿಗೆ 103/7 (ಚಂಡೀನ್ ನೇಷನ್ 32, ಹೀಲಿ ಮ್ಯಾಥ್ಯೂಸ್ 23; ದೀಪ್ತಿ ಶರ್ಮಾ 10 ಕ್ಕೆ 4) ಭಾರತ (ಮ): 10.3 ಓವರ್ ಗಳಿಗೆ 104/0 ( ಶೆಫಾಲಿ ವರ್ಮಾ ಔಟಾಗದೆ 69, ಮಂದಾನಾ ಔಟಾಗದೆ 30).