ಸಿಡಿಲಿಗೆ ಕುರಿಗಳು ಬಲಿ: ಪರಿಹಾರಕ್ಕೆ ಬಂಗಾರೇಮ್ಮ ಒತ್ತಾಯ

ಸಿಡಿಲಿಗೆ ಕುರಿಗಳು ಬಲಿ: ಪರಿಹಾರಕ್ಕೆ ಬಂಗಾರೇಮ್ಮ ಒತ್ತಾಯ Sheep killed by lightning: Bangaremma demands compensation

ಲೋಕದರ್ಶನ ವರದಿ 

ದೇವರ ಹಿಪ್ಪರಗಿ 20 : ಅಕಾಲಿಕ ಮಳೆಯಿಂದ ಆಲಗೂರ ಗ್ರಾಮದ ಬಸವರಾಜ ಮಾಕೊಂಡ ಎನ್ನುವ ರೈತರ 15ಕ್ಕೂ ಹೆಚ್ಚು ಕುರಿಗಳು ಸಿಡಿಲಿಗೆ ಬಲಿಯಾಗಿವೆ, ತಾಲೂಕಾಡಳಿತ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಹುಣಶ್ಯಾಳ ಗ್ರಾಪಂ ಮಾಜಿ ಅಧ್ಯಕ್ಷೆ ಬಂಗಾರೇಮ್ಮ ಮಾನಪ್ಪ ದೊಡಮನಿ ಒತ್ತಾಯಿಸಿದ್ದಾರೆ. ಕಳೆದ ವರ್ಷವೂ ಇದೇ ಗ್ರಾಮದ ರೈತರಾದ ಹಯ್ಯಾಳದಪ್ಪ ಯಂಕಂಚಿ, ಭೀಮಣ್ಣ ಜನ್ನಪ್ಪಗೊಳ ರವರ 55ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ. 

ಹಾಗೆಯೇ ಸಲಾದಹಳ್ಳಿ ಗ್ರಾಮದ ಮಹಾಂತಪ್ಪ ಚೌಡಕಿಯವರ 15ಕ್ಕೂ ಹೆಚ್ಚು ಕುರಿ ಹಾಗೂ ಹುಣಶ್ಯಾಳ ಗ್ರಾಮದ ಬಡ ಕುಟುಂಬದ 1 ಹೆಮ್ಮೆ ಮೃತಪಟ್ಟಿದೆ. ಪದೇಪದೇ ಈ ಭಾಗದಲ್ಲಿ ಅಪ್ಪಳಿಸುವ ಸಿಡಿಲು ತಡೆಗೆ ಅಧಿಕಾರಿಗಳು ವೈಜ್ಞಾನಿಕ ಕಾರ್ಯ ಕೈಗೊಳ್ಳಬೇಕು. 

ಹುಣಶ್ಯಾಳ ಕಲಕೇರಿ ಭಾಗದ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಿಂದ ಹಲವೆಡೆ ವಿವಿಧ ಬೆಳೆಗೆ ಹಾನಿ ಹಾಗೂ ಜಾನುವಾರಗಳ ಜೀವಹಾನಿಗೆ ತಾಲೂಕಾಡಳಿತ, ಗ್ರಾಮಲೆಕ್ಕಾಧಿಕಾರಿಗಳಿಂದ ವರದಿ ಪಡೆದು ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದರು. 

ಮಳೆ ಸಂದರ್ಭದಲ್ಲಿ, ಮರಗಳ ಕೆಳಗೆ, ನೀರಿನ ಹತ್ತಿರ, ಹೊಲಗದ್ದೆಗಳ ಬಯಲು ಜಾಗಗಳಲ್ಲಿ, ಎತ್ತರದ ಸ್ಥಳಗಳಲ್ಲಿ ಮತ್ತು ವಿದ್ಯುತ್ ಉಪಕರಣ, ಫೋನ್, ಕಂಪ್ಯೂಟರ್, ಟಿವಿ, ಬಳಸದಿರುವುದು, ಸಿಡಿಲು ಬಡಿದ ವ್ಯಕ್ತಿಗೆ ಕೃತಕ ಉಸಿರಾಟ ನೀಡಿ, ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು ಎಂದು ರೈತರಲ್ಲಿ ಅವರು ಮನವಿ ಮಾಡಿದ್ದಾರೆ.