ಅವ್ವ ಮೌನವನ್ನು ಹೊತ್ತು ನಿಂತ ಗಟ್ಟಿ ಜೀವ : ಡಾ.ಕೆ.ಸತೀಶ್
She is a strong soul who stands firm in silence: Dr. K. Satish
ಲೋಕದರ್ಶನ ವರದಿ
ಹೂವಿನಹಡಗಲಿ 10: ಅವ್ವ ಎಂದರೆ ಕೇವಲ ಹಡೆದವಳಲ್ಲ, ಕೇವಲ ಒಬ್ಬ ವ್ಯಕ್ತಿಯಲ್ಲ ಆಕೆ ಇಡೀ ಸಂಸ್ಕೃತಿ ಮತ್ತು ಮೌಲ್ಯಗಳ ಕೊಂಡಿ, ಮೌನವನ್ನು ಹೊತ್ತು ನಿಂತ ಗಟ್ಟಿ ಜೀವ ಎಂದು ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಸತೀಶ್ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಶ್ರೀಮತಿ ರುದ್ರಮ್ಮ ಎಂ.ಪಿ. ಪ್ರಕಾಶ್ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ನವಲಿ ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಾಹಿತ್ಯ ಸಂಪದ ಕಾರ್ಯಕ್ರಮದಲ್ಲಿ ಸ್ಥಳೀಯ ಸಾಹಿತಿ ಶಿಕ್ಷಕ ರಾಮಪ್ಪ ಕೋಟಿಹಾಳರ ಕವನ ಸಂಕಲನ ’ಜಿರಾಫೆ ಕತ್ತಿನ ಅವ್ವ’ ಪುಸ್ತಕ ಕುರಿತ ’ಸಂವಾದ’ದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಕವನ ಸಂಕಲನವು 52 ಕವನಗಳನ್ನು ಒಳಗೊಂಡಿದ್ದು ಕೃತಿಯ ಶೀರ್ಷಿಕೆಯು ಧ್ವನಿ ಪೂರ್ಣವಾಗಿದೆ. ಜಿರಾಫೆಯ ಕತ್ತು ಎತ್ತರಕ್ಕೆ ಚಾಚಿದ್ದು ವಿಸ್ತಾರವಾದ ಪ್ರದೇಶವನ್ನು ಗ್ರಹಿಸುತ್ತದೆ ಅದರಂತೆ ಅವ್ವ ತನ್ನ ನೋವು,ಸಂಕಟಗಳನ್ನು ನುಂಗಿ ಮುಂದಿನ ಪೀಳಿಗೆಯ ಹಿತಕ್ಕಾಗಿ ತಾಳ್ಮೆ, ದಣಿವರಿಯದ ಶ್ರಮ,ದೂರದೃಷ್ಟಿ,ಮೌನ ಪ್ರತಿಭಟನೆಯ ರೂಪಕವನ್ನು ಶೀರ್ಷಿಕೆ ಸೂಚಿಸುವುದೆಂದರು.
ಶ್ರೀನಿವಾಸರಾಜು ಕಾವ್ಯ ಪುರಸ್ಕಾರ ಪಡೆದ ಕೃತಿಯಾಗಿದೆ. ಕವಿಯ ಚಿತ್ರಾತ್ಮಕ ಶೈಲಿ ಓದುಗರಿಗೆ ಕಣ್ಣ ಮುಂದೆ ಚಿತ್ರವನ್ನು ಕಟ್ಟಿಕೊಡುತ್ತವೆ. ವ್ಯವಸ್ಥೆಯ ವಿರುದ್ಧದ ಸೂಕ್ಷ್ಮ ಧ್ವನಿಯನ್ನು ಕೂಡ ಅವಲೋಕಿಸಬಹುದು ಎಂದರು. ಪ್ರಾರಂಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಡಾ.ಎಂ.ಪಿ.ಎಂ. ಮಂಜುನಾಥ ಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಅಭ್ಯಾಸದ ಜೊತೆ ಸಂಸ್ಕಾರವನ್ನು ರೂಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಶೈಲಜಾ ಪವಾಡಶೆಟ್ರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್, ಜಿಪಿಸಪಪೂ ಕಾಲೇಜು ಪ್ರಾಚಾರ್ಯ ಕೋರಿ ಹಾಲೇಶ್,ಪತ್ರಕರ್ತರಾದ ವೀರೇಶ ಕಲ್ಮಠ, ರಾಜಪ್ಪ, ಶಿಬಿರಾಧಿಕಾರಿಗಳಾದ ಬೂದನೂರು ಸುರೇಶ, ಜಿ.ಟಿ.ಉಮಾದೇವಿ, ಭಾಗ್ಯಮಠಪತಿ, ನವಲಿ ಗ್ರಾಮದ ಹಿರಿಯರಾದ ಚಂದ್ರಶೇಖರಯ್ಯ,ವೀರಣ್ಣ ಇದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಬಿರಾರ್ಥಿಗಳಾದ ಹೆಚ್.ಮಂಜುಳಾ ಸ್ವಾಗತಿಸಿದರು. ಹೆಚ್.ನಂದೀಶ್ ವಂದಿಸಿದರು. ಎಂ.ಮಂಜುಳಾಬಾಯಿ ಕಾರ್ಯಕ್ರಮ ನಿರ್ವಹಿಸಿದರು.
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್ 