ಸದ್ಯಕ್ಕೆ ಲಂಡನ್ ನಲ್ಲೇ ಷರೀಫ್ ಗೆ ಚಿಕಿತ್ಸೆ ಮುಂದುವರಿಕೆ

ಲಂಡನ್, ಡಿ 17  ಅನಾರೋಗ್ಯದಿಂದ ಬಳಲುತ್ತಿರುವ,  ಸದ್ಯ ಲಂಡನ್ ಆಸ್ಪತ್ರೆಯಲ್ಲೀ  ಚಿಕಿತ್ಸೆ ಪಡೆಯುತ್ತಿರುವ  ಪಾಕಿಸ್ತಾನದ  ಮಾಜಿ ಪ್ರಧಾನಿ ನವಾಜ್ ಷರೀಪ್ ಅವರನ್ನು ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದೊಯ್ಯಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ.  ಅವರ ಪ್ಲೇಟ್ಲೆಟ್ ಕೌಂಟ್ ಸುಧಾರಣೆಯಾಗುವವರೆಗೆ ಲಂಡನ್ನಿಂದ ಅಮೆರಿಕಕ್ಕೆ ಪ್ರಯಾಣಿಸಲು ವೈದ್ಯರು ಅನುಮತಿ ಕೊಡುತ್ತಿಲ್ಲ  ಎಂದು ಪುತ್ರ ಹುಸೈನ್ ನವಾಜ್ ಹೇಳಿದ್ದಾರೆ. 69 ವರ್ಷ ವಯಸ್ಸಿನ ಷರೀಪ್ ಅವರು  ಹಲವು ಗಂಬೀರ  ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಭ್ರಷ್ಟಾಚಾರ ಪ್ರಕರಣದಲ್ಲಿ ಅವರು ಜೈಲು ಶಿಕ್ಷೆಗೂ ಗುರಿಯಾಗಿದ್ದಾರೆ .