ಇಂದಿ ನಿಂದ ಕಾಶಿ ಪೀಠದಲ್ಲಿ ಶರನ್ನವರಾತ್ರಿ ಆಚರಣೆ
Sharanavaratri celebrations at Kashi Peeth from today
ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶ್ರೀಚಕ್ರ ಸಹಿತ ಆದಿಶಕ್ತಿ ಮಾತೆಗೆ ನಿತ್ಯವೂ ವಿಶೇಷ ಪೂಜೆ
ಧಾರವಾಡ 21: ಶ್ರೀ ಆದಿಶಕ್ತಿ ಮಹಾಮಾತೆಯ ಅರ್ಚನೆ, ಆರಾಧನೆಯ ವಿಶೇಷ ಪರ್ವಕಾಲವಾದ ಶರನ್ನವರಾತ್ರಿ ಆಚರಣೆ ವೀರಶೈವ-ಲಿಂಗಾಯತ ಧರ್ಮದ ಪಂಚಪೀಠಗಳಲ್ಲಿ ಒಂದಾದ ಉತ್ತರ್ರದೇಶದ ಕಾಶಿ ಜ್ಞಾನ ಪೀಠದಲ್ಲಿ ಸೆ.22 ರಿಂದ ಅ.2 ರವರೆಗೆ 10 ದಿನಗಳ ಕಾಲ ವಿಶೇಷವಾಗಿ ನಡೆಯಲಿದೆ.
ಕನ್ನಡಿಗರಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನಿತ್ಯ ಪ್ರಾತಃಕಾಲ 8 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಮಾಡುವರು. ಮುಂಜಾನೆ 10 ಗಂಟೆಗೆ ಕಾಶಿ ಪೀಠದ ಮೂಲ ಆಚಾರ್ಯರಾದ ಶ್ರೀಜಗದ್ಗುರು ವಿಶ್ವಾರಾಧ್ಯರ ಲಿಂಗೋದ್ಭವ ಮೂರ್ತಿಗೆ ಬಿಲ್ವಾರ್ಚನೆ, ವಿಶೇಷ ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿ ನಡೆದು ನಂತರ ಮಹಾಪ್ರಸಾದ ವಿತರಣೆ ಜರುಗಲಿದೆ.
ಸಂಜೆ 5 ಗಂಟೆಗೆ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಮಂಗಲ ಸಾನ್ನಿಧ್ಯದಲ್ಲಿ ಶ್ರೀಕಾಶಿ ಪೀಠದಲ್ಲಿರುವ ಶ್ರೀಚಕ್ರಸಹಿತ ಆದಿಶಕ್ತಿ ಮಾತೆಯ ವಿಗ್ರಹಕ್ಕೆ ಲಲಿತಾ ಸಹಸ್ರನಾಮ ಪಠಣಪೂರ್ವಕ ಕುಂಕುಮಾರ್ಚನೆಯ ವಿಶೇಷ ಪೂಜೆ ನಡೆಯಲಿದೆ. ನಂತರ ಕಾಶಿ ಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ಶ್ರೀದುರ್ಗಾ ಸಪ್ತಶತಿಯ ಪಾರಾಯಣ ಜರುಗಲಿದೆ.
ಶರನ್ನವರಾತ್ರಿ ಆಚರಣೆಯ ಅಂಗವಾಗಿ ನಿತ್ಯವೂ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರಿಂದ ಆಶೀರ್ವಚನ ನಡೆಯಲಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಶಿವಾಚಾರ್ಯ ಶ್ರೀಗಳು, ಗಣ್ಯರು ಹಾಗೂ ಭಕ್ತರು ಪಾಲ್ಗೊಳ್ಳುವರೆಂದು ಶ್ರೀಕಾಶಿ ಪೀಠದ ಕಾರ್ಯಕ್ರಮ ಸಂಯೋಜಕ ಶಿವಾನಂದ ಹಿರೇಮಠ ಹಾಗೂ ಶಿವಮೂರ್ತಿ ಅವರು ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 