ಶರಣಬಸವೇಶ್ವರ ಪುರಾಣಮಂಗಲ:ಅದ್ಧೂರಿ ಮೆರವಣಿಗೆ

ಶರಣಬಸವೇಶ್ವರ ಪುರಾಣಮಂಗಲ:ಅದ್ಧೂರಿ ಮೆರವಣಿಗೆ  Sharanabasaveshwara Puranamangala: A grand procession

ದೇವರಹಿಪ್ಪರಗಿ 09 : ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ತ್ರಿವಿಧ ದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ರವಿವಾರ ಸಂಜೆ ಮುಕ್ತಾಯಗೊಂಡಿತು. ಸೋಮವಾರ ಬೆಳಿಗ್ಗೆ  ನಾನಾ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಭಜನಾ ಮೇಳ, ಡೊಳ್ಳು ಕುಣಿತ, ವಿವಿಧ ಕಲಾತಂಡಗಳ ಮೆರುಗು, ಮಹಿಳೆಯರು ಕುಂಭ, ಕಳಶದೊಂದಿಗೆ ಬೋರಗಿ- ಪುರದಾಳದ ಶ್ರೀ ತಪೋರತ್ನ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ದಾಸೋಹಿ ಶರಣಬಸವೇಶ್ವರ ಭಾವಚಿತ್ರವನ್ನು ಒಂಟಿಯ ಮೇಲೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಗ್ರಾಮದ ಸರ್ವಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಂಗಾ ಸ್ಥಾನಕ್ಕೆ ಹೋಗಿ ಬಂದ ನಂತರ ಎಲ್ಲಾ ಭಕ್ತಾಧಿಗಳಿಗೆ ಅನ್ನ ಸಂತರೆ​‍್ಣ ನಡೆಸಲಾಯಿತು.ಇದೇ ಮೊದಲ ಬಾರಿಗೆ ದಿ.15.02.2025ರಿಂದ 08.03.2026ರ ದಿನಗಳ ಕಾಲ ನಡೆದ ದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಗ್ರಾಮದ ಸಾವಿರಾರು ಜನ ಭಕ್ತರು ಭಾಗವಹಿಸುವ ಮೂಲಕ ಅದ್ದೂರಿನಿಂದ ನಡೆಯುತು.

ಮಹಾಮಂಗಲೋತ್ಸವದ ಪ್ರಯುಕ್ತ ಗಂಗೆ ಸ್ಥಳಕ್ಕೆ ಹೋಗಿ ಬರುವ ಮೆರವಣಿಗೆ ನಿರಂತರ ಐದು ಗಂಟೆಗಳ ತನಕ ಅದ್ದೂರಿಯಾಗಿ ಸಾಗಿ ಬಂದು ಪುನಃ ಪೂಜೆ ಧಾರ್ಮಿಕ ವಿಧಾನಗಳನ್ನು ಪೂರೈಸುವ ಮೂಲಕ ಸಂಪನ್ನಗೊಂಡಿತು. ನೂರಾರು ಯುವತಿಯರು, ಮಹಿಳೆಯರು ಕುಂಭ ಕಳಸದೊಂದಿಗೆ ಪೂರ್ಣ ಕುಂಭ, ಸಕಲವಾದ್ಯ, ನಂದಿಕೋಲು, ಡೊಳ್ಳು ಝಾಂಜ್ ಮೇಳ ಹಾಗೂ ಬೋರಗಿ-ಪುರದಾಳ ತಪೋರತ್ನ ಮಹಾಲಿಂಗೇಶ್ವರ ಮಹಾಸ್ವಾಮಿಗಳು,

ಪ್ರವಚನಕಾರ ವೇ.ಮೂ ಮಹಾಂತಯ್ಯ ಸ್ವಾಮೀಜಿ ಹಾಗೂ ಶ್ರೀ ಶರಣಬಸವೇಶ್ವರ ಫೋಟೋ ಒಂಟಿಗಳ ಮೇಲೆ  ಮೆರವಣಿಗೆಯನ್ನು ಸುಮಾರು ಐದು ಗಂಟೆಗಳ ತನಕ ಡೊಳ್ಳಿನ ಕಲಾತಂಡ, ಜಾನಪದ ಗಾರುಡಿ ಗೊಂಬೆಗಳು ಈ ಬಾರಿಯ ಮೆರವಣಿಗೆಯ ಆಕರ್ಷಣೆಯಾಗಿದ್ದವು. ಮಹಿಳೆಯರು ಬಾರಿಸಿದ ಡೊಳ್ಳು ಎಲ್ಲರನ್ನೂ ಗಮನ ಸೆಳೆಯಿತು. ಡೊಳ್ಳು ಕುಣಿತದ ಜೊತೆ ಸಕಲವಾದ್ಯಗಳ ಮೇಳ ಮುಗಿಲ ಮುಟ್ಟಿತ್ತು. ಕುಂಭಮೇಳ ಕಳಸದೊಂದಿಗೆ ಮಹಿಳೆಯರ ಹಾಡು ಹಾಗೂ ನೂರಾರು ಯುವಕರು ಕುಣಿದು ಕುಪ್ಪಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಸರ್ವಸಮದಾಯದ ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.