ತಳಕಲ್ ಗ್ರಾಮದಲ್ಲಿ ಶರಣಬಸವೇಶ್ವರ ಪುರಾಣ ಪ್ರಾರಂಭ.ಧರ್ಮದ ಕಾರ್ಯಕ್ಕೆ ಭಕ್ತರ ಸಹಕಾರ ಅವಶ್ಯ- ಮಹಾದೇವ

ತಳಕಲ್ ಗ್ರಾಮದಲ್ಲಿ ಶರಣಬಸವೇಶ್ವರ ಪುರಾಣ ಪ್ರಾರಂಭ.ಧರ್ಮದ ಕಾರ್ಯಕ್ಕೆ ಭಕ್ತರ ಸಹಕಾರ ಅವಶ್ಯ- ಮಹಾದೇವ  Sharanabasaveshwara Purana begins in Talakal village. Cooperation of devotees is essential for relig

ತಳಕಲ್ ಗ್ರಾಮದಲ್ಲಿ ಶರಣಬಸವೇಶ್ವರ ಪುರಾಣ ಪ್ರಾರಂಭ.ಧರ್ಮದ ಕಾರ್ಯಕ್ಕೆ ಭಕ್ತರ ಸಹಕಾರ ಅವಶ್ಯ- ಮಹಾದೇವ  

ಕುಕನೂರ  02: ಸರ್ವ ಜನರ ಕಲ್ಯಾಣಕ್ಕಾಗಿ ಶರಣಬಸವೇಶ್ವರು ತಮ್ಮ ಜೀವನವನ್ನು ನಡೆಸಿದರು ಎಂದು ತಳಕಲ್ ಕುಕನೂರ ಶ್ರೀಮಠದ ಪೂಜ್ಯ ಮಹದೇವ ಸ್ವಾಮೀಜಿ ಹೇಳಿದರು. ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನಿಶ್ವರ ಶಾಖಮಠದ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಹಮ್ಮಿಕೊಂಡ ಕಲ್ಬುರ್ಗಿ ಶರಣಬಸವೇಶ್ವರ ಪುರಾಣವನ್ನ ಉದ್ಘಾಟಿಸಿ ಮಾತನಾಡುತ್ತಾ   ಶರಣರ ನಡೆ-ನುಡಿಗಳು ಮಾನವ ಜೀವನಕ್ಕೆ ಮಾರ್ಗದರ್ಶನ ಶಕ್ತಿಯಾಗಿದೆ. ಗುರುತತ್ವ, ಸತ್ಯ, ತಾಳ್ಮೆ, ಪ್ರೀತಿ, ಸಹನೆ, ಸಮಾನತೆ, ದೈವಭಕ್ತಿ ಇವುಗಳ ಸಮ್ಮಿಶ್ರಣವೇ ಶರಣರ ಬದುಕಿನ ಮೂಲಾಧಾರ. ಶರಣರು ತಮ್ಮ ಜೀವನವನ್ನು ಕೇವಲ ತ್ಯಾಗಮಯವನ್ನಾಗಿಸದೆ, ಸಮಾಜಮುಖಿ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿನ ಮಾದರಿಯನ್ನು ತೋರಿಸಿದ್ದಾರೆ ಎಂದರು. ಬೆಟಗೇರಿ ಯುವ ಮುಖಂಡ ಬಸವರೆಡ್ಡಿ ಮಾತನಾಡಿ ತಳಕಲ ಗ್ರಾಮದ ಜನರು ಧರ್ಮವಂತರು, ಅನ್ನದಾನಿಶ್ವರ ಮಠದ ಅಭಿವೃದ್ಧಿಯನ್ನು ಕೇವಲ ಒಂದೇ ವರ್ಷದಲ್ಲಿ ಅತ್ಯಂತ ಭಕ್ತಿಯಿಂದ ಮಾಡಿದ ಭಕ್ತರ ಕಾರ್ಯ ಶ್ಲಾಘನೀಯ,  

ನಾವು ಧರ್ಮ ಮತ್ತು ಸದಾಚಾರವನ್ನು ಅನುಸರಿಸಿದರೆ, ಅದು ನಮ್ಮನ್ನು ಸಂಕಷ್ಟಗಳಿಂದ ರಕ್ಷಿಸುತ್ತದೆ ಎಂದರು. ಪುರಾಣ ಪ್ರವಚನಕಾರ ಕುಮಾರ ಶಾಸ್ತ್ರಿ ತೊಳಲಿ ಮಾತನಾಡಿ ತಳಕಲ್ ಗ್ರಾಮದ ಸದ್ಭಕ್ತರು ಶರಣಬಸವೇಶ್ವರರ ಪುರಾಣವನ್ನ ಪ್ರಾರಂಭ ಮಾಡಿದ್ದು ತುಂಬಾ ಸಂತೋಷ ಸಂಗತಿ ಈ ಗ್ರಾಮದಲ್ಲಿ  ಹಲವಾರು ಪುರಾಣಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದಂತ ಶಕ್ತಿ ಗ್ರಾಮಕ್ಕಿದೆ, ಶರಣರ ಪುರಾಣವನ್ನ ಕೇಳುವುದರಿಂದ ಮಾನಸಿಕ ನೆಮ್ಮದಿ ಸಿಗಲು ಸಾಧ್ಯ, ಭಕ್ತರು 21 ದಿನಗಳ ಕಾಲ ನಡೆಯುವ ಈ ಪುರಾಣದಲ್ಲಿ ಪ್ರತಿನಿತ್ಯ ಭಾಗವಹಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಶಶಿಧರಯ್ಯ ಅರಲೆಲೆಮಠ,  ಹಂಚ್ಯಾಲಪ್ಪ ಚಿಲವಾಡಿಗಿ, ಪಕ್ಕಪ್ಪ ಮುರಿಗಿ, ಮುದಿಯಪ್ಪ ಯೊಗೇಮ್ಮನವರ, ಮಲ್ಲಪ್ಪ ಬಂಗಾರಿ, ಶಿವಪ್ಪ ಬ್ಯಾಳಿ, ಶೇಖಪ್ಪ ಕರ್ಜಗಿ, ಪಕ್ಕಪ್ಪ ಅಳವಂಡಿ, ಮಲ್ಲಯ್ಯ,  ರಾಮಣ್ಣ ನಿಟ್ಟಾಲಿ, ಬೆಟಗೇರಿ ಗ್ರಾಮದ ಮುತ್ತಯ್ಯ ಹಿರೇಮಠ, ಸೋಮಪ್ಪ ಮತ್ತೂರು, ಪ್ರಭು ಶಿವಸಿಂಪರ, ಬಸವರಾಜ ಕುರಹಟ್ಟಿ, ವೆಂಕರಡ್ಡಿ ಕವಲೂರ ಮತ್ತು ಇತರರು ಇದ್ದರು.  

ಪೋಟೋ ಪೈಲ್ : ಕುಕನೂರ ತಾಲೂಕಿನ ತಳಕಲ್ ಗ್ರಾಮದ ಅನ್ನದಾನೀಶ್ವರ ಶಾಖಾಮಠದಲ್ಲಿ ಕಲ್ಬುರ್ಗಿ ಶರಣಬಸವೇಶ್ವರ ಪುರಾಣ ಉದ್ಘಾಟಿಸಿದ ಗಣ್ಯರು.