ತತ್ವ ಪದಗಳಲ್ಲಿ ಶರಣ ಚಿಂತನೆ
Sharana Philosophy in *Tatva Pada* (Philosophical Songs)
ತಾಳಿಕೋಟಿ ಸೆ.11: ‘ನಾನು’ ಎಂಬ ಅಹಂಭಾವ ತೊರೆದು, ‘ಸೋಹಂ’ ಎಂದು ನಡೆದು, ದಾಸೋಹದ ಬದುಕು ಸಾಗಿಸಿದವರು ಶರಣರು ಎಂದು ಕು. ಸಿರಸಗಿ-ವಸ್ತಾರಿಯ ಸದ್ಗುರು ಭೀಮಾಶಂಕರ ಬ್ರಹ್ಮವಿದ್ಯಾಶ್ರಮದ ಶರಣ ಬಸವರಾಜ ಬೋರಗಿ ಹೇಳಿದರು.
ಪಟ್ಟಣದ ಕಾಳಿಕಾ ಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ, ಯುವ ಘಟಕ ಹಾಗೂ ಕದಳಿ ವೇದಿಕೆ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ನಡೆದ ‘ವಚನ ಶ್ರಾವಣ’ ನಾಲ್ಕನೇ ವಾರದ ಕಾರ್ಯಕ್ರಮದಲ್ಲಿ ‘ತತ್ವ ಪದಗಳಲ್ಲಿ ಶರಣ ಚಿಂತನೆ’ ವಿಷಯ ಕುರಿತು ಅವರು ಮಾತನಾಡಿದರು.
12ನೇ ಶತಮಾನದ ಶಿವಶರಣರ ವಚನಗಳ ಸಾರ ಮತ್ತು ಸಿದ್ಧಾಂತಗಳನ್ನು ಸರಳ ಜನಪದ ರೂಪದಲ್ಲಿ ಜನರಿಗೆ ತಲುಪಿಸಿದ ಕೀರ್ತಿ ತತ್ವಪದಕಾರರಿಗೆ ಸಲ್ಲುತ್ತದೆ. ತತ್ವಪದಕಾರರು ಶರಣರ ತತ್ವಗಳನ್ನು ಜನಪದ ರಾಗಗಳಿಗೆ ಅಳವಡಿಸಿ ಹಾಡುವ ಮೂಲಕ ಸಾಮಾನ್ಯರಿಗೂ ತಲುಪಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ವಿ.ಎಸ್. ಕಾರ್ಚಿ ವಹಿಸಿದ್ದರು. ತತ್ವಪದಕಾರರಾದ ಕಡಕೋಳ ಮಡಿವಾಳಪ್ಪ, ಬೋರಗಿ ಭೀಮಾಶಂಕರ, ತಿಲಗೂಳದ ಯಮನೂರೇಶ ಶರಣರು, ಖೈನೂರ ಕೃಷ್ಣಪ್ಪ, ಚನ್ನೂರ ಜಲಾಲಸಾಬ್ ಸೇರಿದಂತೆ ಹಲವರನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಪರಿಷತ್ಗೆ ದತ್ತಿ ಹೆಚ್ಚಿಸಲು ಸಹಕರಿಸುವಂತೆ ಮನವಿ ಮಾಡಲಾಯಿತು. ಮನಸ್ವಿ ಬಿರಾದಾರ ವಚನ ನೃತ್ಯ ಪ್ರದರ್ಶಿಸಿದರು. ಬಾಲಕಿ ಪ್ರಣವಿ ಸಜ್ಜನ ಪ್ರಾರ್ಥಿಸಿದರು. ಸಿದ್ಧನಗೌಡ ಚೌಧರಿ ಕಾರ್ಯಕ್ರಮ ನಿರ್ವಹಿಸಿದರು. ಸಾಹೇಬಗೌಡ ಬಿರಾದಾರ ಸ್ವಾಗತಿಸಿದರು. ಸಿದ್ದು ಕರಡಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 