ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ
Sharan Culture Festival Program
ಲೋಕದರ್ಶನ ವರದಿ
ಶಿಗ್ಗಾವಿ 24: ಮಠಗಳಲ್ಲಿನ ದಾಸೋಹ ಪರಂಪರೆಯು ಅನ್ನ ಮತ್ತು ಜ್ಞಾನ ನೀಡುವ ಶರಣರ ಸಂಸ್ಕೃತಿಯನ್ನು ಶಿಗ್ಗಾವಿ ವಿರಕ್ತಮಠದಲ್ಲಿಯೂ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಯಶಸ್ವಿ ಹಿನ್ನೆಲೆಯಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ಪ್ರಸಾದ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಅನ್ನ ದಾಸೋಹವು ಬರುವ ಭಕ್ತರಿಗೆ, ನಿರಂತರ ಉಚಿತ ಆಹಾರ ಒದಗಿಸುವುದಾಗಿದೆ, ಜ್ಞಾನ ದಾಸೋಹವು ಪ್ರವಚನ, ಧಾರ್ಮಿಕ ವಿಚಾರಗಳ ಮೂಲಕ ಜ್ಞಾನಾರ್ಜನೆ ಮಾಡುವುದಾಗಿದೆ, ಮಠಗಳು, ಜನರ ಸೇವೆಗೆ ತಮ್ಮನ್ನು ಸಮರ್ಿಸಿಕೊಳ್ಳಬೇಕು, ಶರಣರ ಕಾಯಕ ಸಂಸ್ಕೃತಿಯು ಈ ಪರಂಪರೆಯ ಮೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿರಕ್ತಮಠದ ಬಸವಲಿಂಗ ದೇವರು, ಈರಣ್ಣ ಅಂಕಲಕೋಟಿ, ಬಸಯ್ಯ ಹಿರೇಮಠ, ರವಿ ವಿರಕ್ತಮಠ, ಸಿ ಡಿ ಯತ್ನಳ್ಳಿ, ವಿಶ್ವನಾಥ ವಾಲಿಶೆಟ್ಟರ, ಯಲ್ಲಪ್ಪ ಸಾಳೋಂಕೆ, ರಾಮಣ್ಣ ಹೊಟ್ಟೂರ, ಡಾ. ಎಂ ಎಂ ತಿರ್ಲಾಪೂರ, ಶಿವಾನಂದ ಮ್ಯಾಗೇರಿ, ನಾಗಪ್ಪ ಬೆಂತೂರ ಸೇರಿದಂತೆ ಮಠದ ಭಕ್ತರು ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 