ಶರಣ ಸಂಸ್ಕೃತಿ ಉತ್ಸವ-2025: 4ನೇ ದಿನದ ಯೋಗ ಪ್ರಾತ್ಯಕ್ಷಿಕೆ

ಶರಣ ಸಂಸ್ಕೃತಿ ಉತ್ಸವ-2025:  4ನೇ ದಿನದ ಯೋಗ ಪ್ರಾತ್ಯಕ್ಷಿಕೆ Sharan Culture Festival-2025: Yoga demonstration on the 4th day

ಚಿತ್ರದುರ್ಗ  23 :   ಶರಣ ಸಂಸ್ಕೃತಿ 2025ರ ಅಂಗವಾಗಿ ಬೃಹನ್ಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಯೋಗ-ಅರೋಗ್ಯ-ಆಧ್ಯಾತ್ಮ ಕಾರ್ಯಕ್ರಮದ  4ನೇ ದಿನದ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡುತ್ತಾ ಮಾತನಾಡಿದ ವೈದ್ಯಶ್ರೀ ಶ್ರೀ.ಚನ್ನಬಸವಣ್ಣನವರು, ಮನೆಯಿಂದ ಬರುವಾಗ ಕನ್ನಡಿಯಲ್ಲಿ ಮುಖ ನೋಡಿಕೊಳ್ಳ್ಳಬೇಕು. ನಗುವಿದ್ದರೇ ಹೊರಗಡೆ ಬರಬೇಕು, ನಗುವೇ ಅತಿ ಮುಖ್ಯವಾದ ಅಂಶವಾಗಿದೆ. ಯೋಗದಿಂದ ದೇಹ ಶುದ್ದವಾಗುತ್ತದೆ. 

ಮಲ ಸ್ವಚ್ಚವಾದರೆ ದೇಹ ಸ್ವಚ್ಚವಾಗುತ್ತದೆ. ದೇಹದಲ್ಲಿನ ಕಶ್ಮಲ ಹೊರ ಹೋದರೆ ಮನಸ್ಸು ಶುದ್ದವಾಗಿರುತ್ತದೆ. ಯೋಗ ಸಮಾಧಾನ ನೀಡುತ್ತದೆ. ಪ್ರಾಣ ವಾಯು ಶುದ್ದವಾಗಿರಬೇಕು.  ದೇಹದ ಪ್ರತಿ ಕಣವೂ ಅಂದರೆ ಕೈ ಕಾಲು ಬೆರಳಿನಲ್ಲಿಯೂ ಶಕ್ತಿ ಇರುತ್ತದೆ, ಇದಕ್ಕಾಗಿ ಕೈ ಕಾಲುಗಳಿಗೆ ಯೋಗವನ್ನು ಮಾಡಬೇಕು. ಯೋಗದ ಪ್ರಮುಖ ವಿಧಾನವಾದ ನಮಸ್ಕಾರ ಸ್ಥಿತಿಯೂ ಉಸಿರಾಟವನ್ನು ಚೆನ್ನಾಗಿ ಮಾಡುತ್ತದೆ. ಉಸಿರಾಟವೇ ಮುಖ್ಯವಾಗಿರುತ್ತದೆ. ಕರ್ನಾಟಕ ಪ್ರತಿುಷ್ಠತ ಕ್ಯಾನ್ಸರ್ ಆಸ್ಪತ್ರೆಯ ವರದಿಯಂತೆ ಸಣ್ಣ ಮಕ್ಕಳಿಗೆ ಕರುಳಿನ ಕ್ಯಾನ್ಸರ್ ಹೆಚ್ಚಾಗುತ್ತದೆ. ಮಕ್ಕಳಿಗೆ ಬಡತನದ ಪಾಠ ಕಲಿಸಬೇಕು, ವಿನಃ ಬಡತನವೇ ಪಾಠವಾಗಬಾರದು. 15 ರಿಂದ 20 ನಿಮಿಷ ಸೂರ್ಯ ನಮಸ್ಕಾರ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಎರಡು ಕಿಲೋ ಮೀಟರ್ ಓಡುವುದರಿಂದ ಆಗುವಷ್ಟು ಪ್ರಯೋಜನ  ಈ ಸೂರ್ಯ ನಮಸ್ಕಾರರಿಂದ ಸಿಗುತ್ತದೆ. ತಲೆಯನ್ನು ಕೆಳಗೆ ಭಾಗಿಸಿದರೆ ಜ್ಞಾನ ಸಿಗುತ್ತದೆ. ಭಾಗಿದರೆ ನಮ್ಮ ದೇಹವೂ ಹಗುರವಾಗುತ್ತದೆ. ಬೀಗಿದರೆ ಅಹಂಕಾರ ಹೆಚ್ಚಾಗುತ್ತದೆ. 12ನೇ ಶತಮಾನದ ಬಸಣ್ಣನವರ ಚಿಂತನೆಯೂ ಜನರಲ್ಲಿ ಭಾಗುವ ಮನೋಭಾವನೆಯನ್ನು ಮೂಡಿಸುತ್ತದೆ. ಶ್ವಾಸ ಕೋಶಗಳು, ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಈ ಯೋಗವನ್ನು ಮಾಡಿದರೆ ಆರೋಗ್ಯ ಸಂಪೂರ್ಣವಾಗಿ ಗುಣಮುಖವಾಗುತ್ತಿದೆ. ಶುಗರ್ ಥೈರಾಯಿಡ್ ಸಂದಿವಾತಗಳು ಇದರಿಂದ ಸಂಪೂರ್ಣವಾಗಿ ಗುಣಮುಖವಾಗುತ್ತವೆ. ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ 3 ಕೋಟಿ ಜನರು ಡಯಾಬಿಟಸ್‌ನಿಂದ ಬಳಲುತಿದ್ದಾರೆ. ಅದಕ್ಕಾಗಿ ಒಂದು ದಿನಕ್ಕೆ ಒಬ್ಬ ವ್ಯಕ್ತಿ ಖರ್ಚುಮಾಡುವುದು 50 ರೂಪಾಯಿ ಆದರೆ ಒಟ್ಟು 1.5 ಕೋಟಿ ಖರ್ಚು ಆಗುತ್ತದೆ. ಇದನ್ನು ಆರ್ಯವೇದ ಮತ್ತು ಯೋಗದಿಂದ ನಿವಾರಿಸಿಕೊಳ್ಳಬಹುದು. ಸಾವಿರಾರು ಜನರು ಆರ್ಯವೇದ ಓಷಧಿಗಳಿಂದ ಗುಣಮುಖರಾಗಿದ್ದಾರೆ, ಇದಕ್ಕೆ ದಾಖಲೆಗಳಿವೆ. ಇದಕ್ಕೆ ಜನರು ತಮ್ಮನ್ನು ತಾವೇ ಬದಲಾಯಿಸಿಕೊಳ್ಳಬೇಕು. ಆರ್ಯವೇದದಿಂದ ಉತ್ತಮ ಪರಿಹಾರವಿದೆ, ನಾಲಿಗೆಯನ್ನು  ಹೊರಹಾಕಿ ಚೆನ್ನಾಗಿ ಉಸಿರಾಡಿದರೆ ಹೊಟ್ಟೆ ಸ್ವಚ್ಚವಾಗುತ್ತದೆ. ನಮ್ಮ ದೇಹದಲ್ಲಿ ಇರುವ ಮಲ ಮೂತ್ರ ಹೊರಹಾಕಿದರೆ ಶರೀರ ಸ್ವಚ್ಚವಾಗುತ್ತದೆ. ಯೋಗದಿಂದ ರೋಗ ಮುಕ್ತವಾಗುತ್ತದೆ. ಯೋಗವೂ ದೇಹದ ಎಲ್ಲಾ ಅಂಗಗಳನ್ನು ಸಧೃಡಗೊಳಿಸುತ್ತದೆ. ಪ್ರಾಣ ಜೀವಾಗಿರುವ ವಾಯು ಅತಿ ಅಗತ್ಯವಾದ ಅಂಶವಾಗಿದೆ. ಅದನ್ನು ಪ್ರಾಣವಾಯು ಎಂದು ಕರೆಯುತ್ತಾರೆ. ಪ್ರಾಣ ವಾಯು ದೇಹವನ್ನು ಸಮ ಸ್ಥಿತಿಯಲ್ಲಿಡುತ್ತದೆ. ಪ್ರಕೃತಿಯಲ್ಲಿನ ಉಸಿರಿಗೆ ಪ್ರಮುಖ ಶಕ್ತಿಗಳಿವೆ. ಉಸಿರಾಟ ಧೀರ್ಘವಾಗಿರಬೇಕು ಮತ್ತು ಆಳವಾಗಿರಬೇಕು, ಲಯಬದ್ದವಾಗಿರಬೇಕು, ಶಬ್ದರಹಿತವಾಗಿರಬೇಕು. ಮಹಿಳೆಯರಿಗೆ ಸರಳ ಪ್ರಸವವಾಗಲು ಯೋಗ ಅತಿ ಅಗತ್ಯ. ಹಿಂದೆ 10 ಮಕ್ಕಳನ್ನು ಹೆತ್ತರು ತಾಯಂದಿರು ಆರೋಗ್ಯವಾಗಿರುತ್ತಿದ್ದರು. ಅಡುಗೆ ಮನೆಯಲ್ಲಿ ಕುಳಿತುಕೊಂಡು ಅಡುಗೆ ಮಾಡಿದರೇ ದೇಹದ ಪ್ರಮುಖ ಅಂಗಾಂಗಗಳು ಸಡಿಲವಾಗುತ್ತದೆ ಎಂದು ನುಡಿದರು.  

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ. ಶ್ರೀ ಬಸವ ಕುಮಾರ ಸ್ವಾಮೀಜಿಯವರು ಮಾತನಾಡಿ, ಸೆಪ್ಟೆಂಬರ್ 28ನೇ ತಾರೀಖು 9.45ಕ್ಕೆ ನಡೆಯುವ ಬಸವ ಸಂಸ್ಕ್ರತಿ ಅಭಿಯಾನ, ಧ್ವಜಾರೋಹಣ ಕಾರ್ಯಕ್ರಮಗಳಿಗೆ  ಬಿಳಿ ಪಂಚೆ ಮತ್ತು ಬಿಳಿ ಅಂಗಿ ಧರಿಸಿ ಕಾರ್ಯಕ್ರಮದಲ್ಲಿ  ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ವೇಷಭೂಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ನಗದು ಪುರಸ್ಕಾರವಿರುತ್ತದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯೋಗ ಕ್ರೀಡಾ ಸಂಸ್ಥೆಯ ಬಿ.ಆರ್‌.ಪ್ರಸನ್ನಕುಮಾರ್, ಬಸವರಾಜಪ್ಪ, ಭಾರತೀ, ಯೋಗಸಾಧಕರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ವಚನಗೀತೆಗಳನ್ನು ಹಾಡಿದರು.