ಶರಣ ಸಂಸ್ಕೃತಿ ಉತ್ಸವ-2025
Sharan Culture Festival-2025
ಚಿತ್ರದುರ್ಗ: 20 ಸೆಪ್ಟಂಬರ್ 2025, ಅರಿವಿನ ಕುರುಹಾಗಿ ಬಸವಣ್ಣನವರು ಕರದಲ್ಲಿ ಇಷ್ಟಲಿಂಗವಿರಿಸಿ ಆರಾಧಿಸುವ ಸಾಧನವನ್ನು ನೀಡಿದರು. ಅದು ವಿಶ್ವಾತ್ಮನ ಸ್ವರೂಪವು ಹೌದು ಎಂದು ಶಿರಸಂಗಿಯ.ಬಸವಮಹಾಂತ ಸ್ವಾಮೀಜಿಯವರು ಇಷ್ಟಲಿಂಗದ ಮಹತ್ವವನ್ನು ತಿಳಿಸಿದರು.
ಶ್ರೀಗಳವರು ಶರಣ ಸಂಸ್ಕೃತಿ ಉತ್ಸವ-2025 ಅಂಗವಾಗಿ ಶ್ರೀ.ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠದಲ್ಲಿ ಮುರುಗಿಯ ಶಾಂತವೀರಸ್ವಾಮಿಗಳ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಲಾಗಿದ್ದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುತ್ತ ಇಷ್ಟಲಿಂಗದ ಮೂಲಕ ಮಹತ್ ಸಾಧನೆ ಮಾಡಿದ ಮಹನೀಯರ ದೊಡ್ಡ ಪರಂಪರೆಯೇ ಚರಿತ್ರೆಯಲ್ಲಿ ಆಗಿ ಹೋಗಿದೆ. ಅಥಣಿ ಶಿವಯೋಗಿಗಳು, ಹರ್ಡೇಕರ್ ಮಂಜಪ್ಪನವರು. ಬಿ.ಡಿ.ಜತ್ತಿಯವರು ಸೇರಿದಂತೆ ಸಾವಿರಾರು ಮಹನೀಯರನ್ನು ಉಲ್ಲೇಖಿಸಬಹುದು. ಸರಳ ಸಹಜ ಬದುಕಿನ ನಿರ್ವಹಣೆಗೆ ಸಹಜ ಶಿವಯೋಗ ಸಹಾಯಕಾರಿ ಆಗಬಲ್ಲದು ಎಂದು ನುಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ವಹಿಸಿದ್ದರು. ಗುರುಮಠಕಲ್‌ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಸಿದ್ಧಬಸವ ಕಬೀರ ಸ್ವಾಮಿಗಳು, ಬಸವ ಮಹಾಂತ ಸ್ವಾಮಿಗಳು, ಕೊಲ್ಲಾಪುರದ ಶಿವಾನಂದ ಸ್ವಾಮಿಗಳು, ಬಸವಲಿಂಗಮೂರ್ತಿ ಶರಣರು, ಉಳವಿ ಬಸವಕೇಂದ್ರದ ಲಿಂಗಮೂರ್ತಿ ಸ್ವಾಮೀಜಿ ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 