ಕವಲೆತ್ತು ಗ್ರಾಮದಲ್ಲಿ ವಿಜೃಂಭಿಸಿದ ಶರಣ ಸಂಸ್ಕೃತಿ ಉತ್ಸವ
Sharan Cultural Festival held in Kavalethu village
.
ರಾಣೇಬೆನ್ನೂರು 10 : ಬಸವಾದಿ ಶರಣರ ಆದರ್ಶ ಗುಣಗಳನ್ನು ಮತ್ತು ಇತಿಹಾಸ ಪುರಾಣ ಪ್ರವಚನಗಳ ಬಗ್ಗೆ ಪೋಷಕರು ಬಾಲ್ಯದಲ್ಲಿಯೇ ತಮ್ಮ ಮಕ್ಕಳಿಗೆ ತಿಳಿಸುವ ಕೆಲಸವನ್ನು ಮಾಡಬೇಕು ಅಂದಾಗ ಮಾತ್ರ ಬಸವ ತತ್ವದ ಪ್ರಚಾರ ಸಾರ್ಥಕವಾಗುತ್ತದೆ ಎಂದು ಕವಲತ್ತು ಗ್ರಾಮದ ಬಸವ ಕೇಂದ್ರದ ಪೀಠಾಧಿಪತಿ ಶರಣೆ ಮುಕ್ತಾಯಕ್ಕ ಹೇಳಿದರು.
ಅವರು ತಾಲೂಕಿನ ಕವಲತ್ತು ಗ್ರಾಮದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿಲ್ಲಿಸಿ ಶರಣರ ವಚನಗಳನ್ನು ಪಠಣ ಮಾಡುವ ಹವ್ಯಾಸಗಳನ್ನು ಕಲಿಸಬೇಕು.ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು ಎಂಬ ಗಾದೆ ಮಾತಿನಂತೆ ಗುರು ಹಿರಿಯರಲ್ಲಿ ವಿಶ್ವಾಸ, ಗೌರವ ಮನೋಭಾವನೆ ಮಕ್ಕಳಲ್ಲಿ ಬೆಳೆಯುವ ಹಾಗೆ ಪೋಷಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಭಕ್ತ ಸಮುದಾಯಕ್ಕೆ ಹೇಳಿದರು.
ಕಾರ್ಯಕ್ರಮದಲ್ಲಿ ಮಹೇಶ್ವರ ಕುಸಗೂರು, ರುದ್ರಮುನಿ ಡಿ, ಮಹೇಶ್ವರಯ್ಯ ಸಿ, ಶ್ರೀಮತಿ ಲಾವಣ್ಯ ಅಂಗಡಿ, ಸಿದ್ದಣ್ಣ ಕೊಡೆರ, ಬಸವರಾಜ್, ಕೊಟ್ರೇಶಪ್ಪ, ನಾಗರಾಜ್, ಶಂಕ್ರಮ್ಮ, ಬಸಮ್ಮ ಹಾಗೂ ಶಾಲಾ ಶಿಕ್ಷಕರು ಸಂಘ ಸಂಸ್ಥೆಯವರು ಸುತ್ತಮುತ್ತಲಿನ ಗ್ರಾಮಸ್ತರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 