ಎಐ ಯುಗದಲ್ಲಿ ವೃತ್ತಿಯನ್ನು ರೂಪಿಸುವುದು: ಉಪನ್ಯಾಸ
Shaping a Career in the Age of AI: Lecture
ಬೆಳಗಾವಿ 30: ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪಣಾ ಸಂಸ್ಥೆ (ಂಋಒ), ಬೆಳಗಾವಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗವು, ಂಋಒ ತರಬೇತಿ ಮತ್ತು ಉದ್ಯೋಗ ಕಕ್ಷಿ ಹಾಗೂ ಂಋಒ ಂಅಒ ಅಧ್ಯಾಯದ ಸಹಯೋಗದಲ್ಲಿ, ಶನಿವಾರ ದಿ. 23ರಂದು, ಎಐ ಯುಗದಲ್ಲಿ ನಿಮ್ಮ ವೃತ್ತಿಯನ್ನು ರೂಪಿಸುವುದು ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗಾಗಿ ಅತಿಥಿ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದವರು, ಚೆತನ್ ಮುತಾಲಿಕ್ ದೇಸಾಯಿ, ಪ್ರಿನ್ಸಿಪಲ್ ಪ್ರೊಡಕ್ಟ್ ಮ್ಯಾನೇಜರ್, ಮೈಕ್ರೋಸಾಫ್ಟ್, ವಾಷಿಂಗ್ಟನ್, ಯುಎಸ್‌ಎ. ಐಡೆಂಟಿಟಿ, ಸೆಕ್ಯೂರಿಟಿ ಹಾಗೂ ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಕ್ಷೇತ್ರದಲ್ಲಿ, ಇಪ್ಪತ್ತು ವರ್ಷಕ್ಕೂ ಅಧಿಕ ಅನುಭವ ಹೊಂದಿರುವ, ಚೆತನ್ ಅವರು, ಉದ್ಯೋಗದಲ್ಲಿ ಸ್ಪರ್ಧಾತ್ಮಕತೆಯನ್ನು ಹೇಗೆ ಕಾಯ್ದುಕೊಳ್ಳುವುದು, ನಿತ್ಯಕಾಲಿಕ ಕಲಿಕೆಗೆ ಹೇಗೆ ಒತ್ತು ನೀಡಬೇಕು ಮತ್ತು ಸೌಲಭ್ಯ ವಲಯದಿಂದ ಹೊರಬಂದು, ನವೀನ ಅವಕಾಶಗಳನ್ನು ಅನ್ವೇಷಿಸುವುದರ ಅಗತ್ಯತೆಯ ಬಗ್ಗೆ ಅತ್ಯಂತ ಉಪಯುಕ್ತವಾದ ಮಾಹಿತಿಯನ್ನೊದಗಿಸಿದರು.
ಕಾರ್ಯಕ್ರಮವು ನಾಡಗೀತೆ ಹಾಗೂ ದೀಪಪ್ರಜ್ವಲನೆಯೊಂದಿಗೆ ಆರಂಭವಾಯಿತು. ಅತಿಥಿಗಳನ್ನು ಸಸಿ ನೀಡುವ ಮೂಲಕ ಸ್ವಾಗತಿಸಲಾಯಿತು. ಮುಖ್ಯ ಅತಿಥಿ ಚೆತನ ಅವರಿಗೆ ಂಋಒ ನ ಪ್ರಾಚಾರ್ಯ ಹಾಗೂ ನಿರ್ದೇಶಕ ಡಾ. ಆನಂದ ಬಿ. ದೇಶಪಾಂಡೆ ಅವರು ಸ್ಮರಣಿಕೆಯನ್ನು ನೀಡಿದರು.
ಡಾ. ಆನಂದ ಬಿ. ದೇಶಪಾಂಡೆ ಅವರು ಕೃತಕ ಬುದ್ಧಿಮತ್ತೆಯು (ಎಐ) ಎಲ್ಲ ಕ್ಷೇತ್ರಗಳಲ್ಲಿಯೂ ಹೇಗೆ ಬೆಳೆಯುತ್ತಿದೆ, ಎಂಬುದರ ಬಗ್ಗೆ ವಿವರಿಸಿದರು ಮತ್ತು ವಿದ್ಯಾರ್ಥಿಗಳು ಹೊಸತನ, ಹೊಂದಿಕೊಳ್ಳುವಿಕೆ ಹಾಗೂ ನಿತ್ಯಕಾಲಿಕ ಕಲಿಕೆಯನ್ನು ಸ್ವೀಕರಿಸಬೇಕೆಂದು ಪ್ರೇರಣೆ ನೀಡಿದರು. ಇಂತಹ ಉಪನ್ಯಾಸಗಳು ಶೈಕ್ಷಣಿಕ ಜ್ಞಾನ ಹಾಗೂ ಕೈಗಾರಿಕಾ ಅಗತ್ಯತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ. ಧನಶ್ರೀ ಕುಲಕರ್ಣಿ ಹಿ ಡೀನ್ ಅಕಾಡೆಮಿಕ್ಸ್, ಮುಖ್ಯಸ್ಥರು ಹಿಅಖಇ ವಿಭಾಗ ಮತ್ತು ಎಸಿಎಮ್ ಅಧ್ಯಾಯದ ಫ್ಯಾಕಲ್ಟಿ ಸಲಹೆಗಾರರು ಮತ್ತು ಪ್ರೊ. ವಿಶಾಲಕೀರ್ತಿ ಪಾಟೀಲ ಹಿ ತರಬೇತಿ ಮತ್ತು ಉದ್ಯೋಗ ಅಧಿಕಾರಿ, ಪ್ರೊ. ಗೌತಮ್ ದೆಮಟ್ಟಿ ಹಿ ಎಸಿಎಮ್ ಸಂಯೋಜಕರು, ಎಲ್ಲ ವಿಭಾಗದ ಡೀನ್‌ಗಳು, ವಿಭಾಗದ ಮುಖ್ಯಸ್ಥರು,ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರ್ವಹಣೆಯನ್ನು ಸಹಾಯಕ ಪ್ರಾಧ್ಯಾಪಕಿ ಪ್ರೊ. ಪ್ರಿಯಾಂಕಾ ಪುಜಾರಿ ಅವರು ಮಾಡಿದರು.
ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯಗಳು ಮತ್ತು ವೃತ್ತಿ ಲಕ್ಷ್ಯಗಳನ್ನು ಎಐ ಯುಗದ ಉದಯೋನ್ಮುಖ ಅವಕಾಶಗಳೊಂದಿಗೆ ಹೊಂದಾಣಿಕೆಯಾಗಿಸುವ ಬಗ್ಗೆ ಅಮೂಲ್ಯ ಮಾರ್ಗದರ್ಶನ ನೀಡಿತು.
ಕಾರ್ಯಕ್ರಮದ ಯಶಸ್ಸಿಗೆ ಸದಾ ಸಹಕಾರ ನೀಡುತ್ತಿರುವ ಆಡಳಿತ ಮಂಡಳಿಯ ಡಾ. ಸ್ಪೂರ್ತಿ ಪಾಟೀಲ ನಿರ್ದೇಶಕರು ಹಿ ಖಂಇಈ, ಹಾಗೂ ನಿರ್ವಹಣಾಧಿಕಾರಿ ರಾಜು ಜೋಶಿ ಮತ್ತು ಪ್ರಾಚಾರ್ಯ ಹಾಗೂ ನಿರ್ದೇಶಕರಾದ ಡಾ. ಆನಂದ ಬಿ. ದೇಶಪಾಂಡೆ ಅವರಿಗೆ ವಿಭಾಗದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಅಧಿವೇಶನವು ಎಐ ಯುಗದಲ್ಲಿ ವಿದ್ಯಾರ್ಥಿಗಳ ವೃತ್ತಿ ಉದ್ದೇಶಗಳನ್ನು ಸ್ಪಷ್ಟಗೊಳಿಸಲು ಸಹಾಯ ಮಾಡುವುದಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 