ರಾಜ್ಯಕ್ಕೆ ಶಾಂತೇಶ್ವರ ಸಹಕಾರಿ ಸಂಘ ಮಾದರಿ: ಶಿವಾನಂದ ಪಾಟೀಲ
Shanteshwar Cooperative Society a model for the state: Shivananda Patil
ಇಂಡಿ 07: ರಾಜ್ಯದಲ್ಲಿ ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘ ಈಗ ರಾಜ್ಯಕ್ಕೆ ಮಾದರಿ ಸಹಕಾರಿ ಸಂಘಗಳಲ್ಲಿ ಒಂದಾಗಿದೆ ಎಂದರೇ ತಪ್ಪಾಗಲಾರದು ಎಂದು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಹೇಳಿದರು.
ಇಂದು ವಿಜಯಪೂರ ನಗರದ ಶಾಂತೇಶ್ವರ ಸಹಕಾರಿ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ಹೋರ್ತಿ ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘದ 25ನೇ ವಾರ್ಷಿಕೋತ್ಸವ ಸಾಧಾರಣ ಸಬಗೆ ಜ್ಯೋತಿ ಬೆಳಗಿಸುವ ಚಾಲನೆ ನೀಡಿ ಮಾತನಾಡಿದ ಅವರು ಸಹಕಾರಿ ಸಂಘ ಪ್ರಾರಂಭ ಮಾಡುವುದು ಸುಲಭ ಆದರೆ ಅದನ್ನು ಬೆಳೆಸುವುದು ಬಹಳ ಕಷ್ಟ, ಈ ದೇಶದಲ್ಲಿ ಸಹಕಾರಿ ಸಂಘಗಳು ಇಲ್ಲದ್ದರೆ ಸಾಮಾನ್ಯ ಜನರ ಕಷ್ಟವಾಗುತ್ತಿತ್ತು.ರೈತರ ಸುಲಭವಾಗಿ ಸಾಲ ಕೊಟ್ಟು ಅವರನ್ನು ಸ್ವಾವಲಂಬನೆ ಜೀವನ ಸಾಧಿಸಲು ಸಹಕಾರಿ ಸಂಘ ಪಾತ್ರ ಮುಖ್ಯವಾಗಿದೆ ಸಹಕಾರಿ ಸಂಘದಲ್ಲಿ ಅನೇಕ ಜನರಿಗೆ ಉದ್ಯೋಗ ಕೊಡುವಲ್ಲಿ ಸಹಕಾರಿ ಸಂಘಗಳ ಪಾತ್ರ ವಹಿಸುತ್ತದೆ ಸಹಕಾರಿ ಸಾಲ ಪಡೆದು ಅನೇಕ ತಾಯಿಯಂದಿರರು ಸಹಕಾರಿ ಬ್ಯಾಂಕ್ ನಿಂದ ಸಾಲ ಪಡೆದು ರೋಟಿ ತಯಾರಿಸಿ ಮುಂಬೈ ಹಾಗೂ ಬೆಂಗಳೂರು ವರಿಗೆ ಸರಬರಾಜು ಮಾಡುತ್ತಿರುವುದರ ಮೂಲಕ ನಮ್ಮ ಜಿಲ್ಲೆಯ ಮಹಿಳೆಯರು ನಮ್ಮ ಜಿಲ್ಲೆಯ ಹೆಸರು ತಂದಿದ್ದಾರೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ ಕಾತ್ರಾಳ -ಬಾಲಗಾಂವ ಅಮೃತಾನಂದ ಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದ ಅವರು 2000ನೇ ಸಾಲಿನಲ್ಲಿ ಪ್ರಾರಂಭವಾದ ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘ ಈಗ ರಾಜ್ಯದ ಮೂಲೆ ಮೂಲೆಗಳಲ್ಲಿ ಸುಮಾರು ಐವತ್ತು ಎಂಟು ಶಾಖೆಗಳು ಹೊಂದಿರುವ ರಾಜ್ಯ ಮಟ್ಟದಲ್ಲಿ ಮಾದರಿ ಸಹಕಾರಿ ಸಂಘವಾಗಿ ಬೆಳೆಯುತ್ತಿದೆ. ಸಹಕಾರಿ ರಂಗದಲ್ಲಿ ನಾವು ಎಲ್ಲರನ್ನೂ ಗೌರವದಿಂದ ಕಾಣಬೇಕು. ಕೇವಲ ಮೂರನೇ ತರಗತಿ ಕಲಿತ ಶ್ರೀಮಂತ ಇಂಡಿ ಅವರು ಹಿಂತಾ ಒಂದು ಸಹಕಾರಿ ಸಂಘ ಕಟ್ಟಿ ಇಪ್ಪತ್ತು ಐದು ವರ್ಷಗಳಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿ ಲಾಭ ಉಳಿಸಿದ ಶ್ರೀಮಂತ ಇಂಡಿ ಅವರು ಈ ಸಮಾಜಕ್ಕೆ ಮಾದರಿ ವ್ಯಕ್ತಿ ಎಂದು ಹೇಳಿದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮಾತನಾಡಿ ರಾಜ್ಯದಲ್ಲಿ ಸಹಕಾರಿ ಸಂಘಗಳಿಂದ ಅನೇಕರು ಸ್ವಾವಲಂಬನೆ ಜೀವನ ಸಾಧಿಸಲು ಸಹಕಾರಿ ಸಂಘದ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.ನಾಗಠಾಣ ಶಾಸಕರಾದ ವಿಠೋಲ ಕಟಕದೊಂಡ, ಮುದ್ದೇಬಿಹಾಳ ಶಾಸಕರಾದ ಅಪ್ಪಾಜಿ ನಾಡಗೌಡ ಸೇರಿದಂತೆ ಅನೇಕರು ಮಾತನಾಡಿದರು.
ಈ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಹಾಗೂ ಪ್ರಸಕ್ತ ಸಾಲಿನಲ್ಲಿ ಒಟ್ಟು 67 ಜನ ಸಹಜ ಮರಣ ಹೊಂದಿದ ಸದಸ್ಯರಿಗೆ ತಲಾ 15000 ಗಳಂತೆ ಒಟ್ಟು 10.05 ಲಕ್ಷ ರೂಪಾಯಿಗಳು ಅವರ ವಾರಸುದಾರರಿಗೆ ಮರಣ್ತೋತ್ತರ ಪರಿಹಾರ ಧನ ವಿತರಿಸಲಾಯಿತು.
ಶಾಂತೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಮಂತ ಇಂಡಿ, ಗೌರವಾಧ್ಯಕ್ಷ ಎಮ್ ಆರ್ ಪಾಟೀಲ ಉಪಾಧ್ಯಕ್ಷ ಜಿ ವ್ಹಿ ಯಡವಣ್ಣವರ, ಬಿ ಎಸ್ ಇಂಡಿ ಹಾಗೂ ಪ್ರಶಾಂತ ಎಸ್ ಶೆಟ್ಟಿ ಶಾಂತೇಶ ಕಳಸಗೊಂಡ ಸಂತೋಷ ಇಂಡಿ ಪ್ರಕಾಶಗೌಡ ಪಾಟೀಲ ಶಿವಯೋಗಪ್ಪ ಜೋತಗೊಂಡ ಶಿವಯೋಗಪ್ಪ ಚನಗೊಂಡ ಶ್ರೀಕಾಂತ್ ಕೂಡಿಗಿನೂರ ಬೀಮು ಸಾಹುಕಾರ ಬಸನಾಳ ಹಾಗೂ ವಿಜಯಪೂರ ಸಮಾಜ ಕಲ್ಯಾಣ ಇಲಾಖೆ ಸಾಹಯಕ ನಿರ್ದೇಶಕರಾದ ಬಿ ಜೆ. ಇಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಿವೃತ್ತ ಉಪನ್ಯಾಸಕ ಬಿ ಜಿ ಸಾಹುಕಾರ ಅವರು ನಿರೂಪಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಯ್ ಡಿ ಧಂದರಗಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 