ಶಂಕರಾನಂದರ ಚಿಂತನೆಗಳು ಇಂದಿಗೂ ಪ್ರೇರಣಾದಾಯಕ: ಸಾಬೀರ ಜಮಾದಾರ
Shankarananda's thoughts are still inspiring today: Sabir Jamadar
ಶಂಕರಾನಂದರ ಚಿಂತನೆಗಳು ಇಂದಿಗೂ ಪ್ರೇರಣಾದಾಯಕ: ಸಾಬೀರ ಜಮಾದಾರ
ಚಿಕ್ಕೋಡಿ 23: ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದರು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಪಕ್ಷ ಸಂಘಟನೆಗೆ ಬುನಾದಿ ಹಾಕಿದ ನಾಯಕರು. ದೇಶ, ರಾಜ್ಯ ಮತ್ತು ಈ ಭಾಗದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಜನಪರತೆ, ನಿಷ್ಠೆ ಮತ್ತು ತ್ಯಾಗ ಅವರ ಜೀವನದ ಗುರುತುಗಳು. ಇಂದಿನ ಪೀಳಿಗೆಗೆ ಅವರ ಚಿಂತನೆಗಳು ಮಾರ್ಗದರ್ಶಕವಾಗಿವೆ. ಅವರ ಪರಂಪರೆಯನ್ನು ಮುಂದುವರೆಸುವುದು ನಮ್ಮೆಲ್ಲರ ಕರ್ತವ್ಯ ಪುರಸಭೆ ಸದಸ್ಯ ಸಾಬೀರ ಜಮಾದಾರ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಬಿ. ಶಂಕರಾನಂದ ಅವರ ಶತಮಾನೋತ್ಸವದ ಅಂಗವಾಗಿ ಚಿಕ್ಕೋಡಿಯಲ್ಲಿ ಜರುಗಿದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ದಿವಂಗತ ಶಂಕರಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರ ಜೀವನ ಚರಿತ್ರೆ ಹಾಗೂ ಸೇವಾ ಪಥವನ್ನು ಸ್ಮರಿಸಲಾಯಿತು. ಶಂಕರಾನಂದರು ರಾಜಕೀಯದಲ್ಲಿ ಶುದ್ಧತೆ ಮತ್ತು ನೈತಿಕತೆಯ ಮೌಲ್ಯಗಳನ್ನು ಉಳಿಸಿಕೊಂಡು ಜನಸೇವೆಯನ್ನು ಧ್ಯೇಯವನ್ನಾಗಿಸಿದ್ದರು. ಜನರ ಅಸ್ತಿತ್ವ, ಹಕ್ಕು ಮತ್ತು ಅಭಿವೃದ್ಧಿಯ ಹೋರಾಟದಲ್ಲಿ ಅವರ ಪಾತ್ರ ಅಸಾಧಾರಣವಾಗಿತ್ತು. ಇಂತಹ ನಾಯಕರ ನೆನಪಿನಲ್ಲಿ ನಡೆಯುವ ಶತಮಾನೋತ್ಸವಗಳು ಸಮಾಜಕ್ಕೆ ಪ್ರೇರಣೆ ನೀಡುತ್ತವೆ ಎಂದರು.
ರವಿ ದರ್ಜೆ, ವಸಂತ ಟಿಂಗಳೆ, ಸಚಿನ್ ಇರಬಾಳೆ, ಮಂಜು ಜಮಾದಾರ, ಕಫಿಲ್ ನಸಲಾಪೂರ, ಸುಧೀರ ಮಾಯಪ್ಪಗೋಳ, ಮನೋಜ ಗಾಡ್ಡಿವಡ್ಡರ, ಅಮೀತ ಮಾಳಗೆ, ಸಚಿನ್ ಕಾಮಕರ ಹಾಗೂ ಅರಬಾಜ್ ಪಿರಜಾದೇ ಉಪಸ್ಥಿತರಿದ್ದರು.
ಸಾಮಾಜಿಕ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಹಿರಿಮೆಯ ನಾಯಕರು ಹಾಗೂ ನಾಗರಿಕರು ಭಾಗವಹಿಸಿ ಶಂಕರಾನಂದರ ಸ್ಮರಣಾರ್ಥ ಪುಷ್ಪಾರ್ಚನೆ ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 