ಶಂಕರಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ:

ಶಿರಹಟ್ಟಿ : ತೆರೆದ ವಾಹನದಲ್ಲಿ ಜಗದ್ಗುರು ಶಂಕರಾಚಾರ್ಯರ ಬೃಹತ ಫಲಕವನ್ನಿಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಮಾಡುವದರೊಂದಿಗೆ ಇಂದು ವಿಪ್ರ ಸಮಾಜದವರು ಶಂಕರಾಚಾರ್ಯರ ಜಯಂತ್ಯೋತ್ಸವವನ್ನು ಆಚರಿಸಿದರು.

  ರಾಘವೇಂದ್ರ ಮಠದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಮಠಕ್ಕೆ ಬಂದ ನಂತರ ಗಾಯತ್ರಿ ಮಹಿಳಾ ಮಂಡಳ ಸದಸ್ಯರು ಹಾಗೂ ಸಮಾಜದ ಗುರು-ಹಿರಿಯರು ಸೇರಿ ಪೂಜೆ ಪುನಸ್ಕಾರಗಳು ಹಾಗೂ ಆರತಿಯೊಂದಿಗೆ ಶಂಕರಚಾರ್ಯರನ್ನು ತೊಟ್ಟಿಲಲ್ಲಿ ಹಾಕಿ ತೂಗುವದರೊಂದಿಗೆ ಭಕ್ತಿ ಸಮರ್ಪಣೆ ಅಪರ್ಿಸಿದರು. ನಂತರ ರಾಯರ ಮಠದಲ್ಲಿ ಭಕ್ತ ಸಮೂಹಕ್ಕೆ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

 ಶಂಕರ ಜಯಂತಿ ನಿಮಿತ್ಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪಟಾಂಗಣದಲ್ಲಿ ಶಂಕರ ಸಂದೇಶ ಉಪನ್ಯಾಸ ಕಾರ್ಯಕ್ರಮವನ್ನು ಡಾ|| ಜಿ.ಎಸ್.ವೈಧ್ಯ ನಡೆಸಿಕೊಟ್ಟರು. ಈ ವೇಳೆ ಅವರು ಆದಿ ಶಂಕರರು ಆದ್ವೈತದ ತಾಕರ್ಿಕ ಶಿಕ್ಷಣವನ್ನು ನಿಮರ್ಿಸಿದ್ದಲ್ಲದೇ ಆತ್ಮ, ಬ್ರಹ್ಮ, ವೈರಾಗ್ಯಗಳ ಬಗ್ಗೆ ಸ್ಪಟ್ಟ ಪಡಿದವರು.  ಶಂಕರಾಚಾರ್ಯರು ಆದ್ವೈತ ವೇದಾನಾಠದ ಸಂಪ್ರದಾಯವನ್ನು ಸಂಯೋಜಿಸಿದರು ಮತ್ತು ಹಿಂದು ಸಂಸ್ಕೃತಿಯು ವಿನಾಶದ ಅಂಚಿನಲ್ಲಿದ್ದಾಗ ಅದನ್ನು ಪುನರುಜ್ಜೀವನಗೊಳಿಸಿದ ಕೀತರ್ಿ ಆದಿಶಂಕರರಿಗೆ ಸಲ್ಲುತ್ತದೆ ಎಂದು ಹೇಳಿದರು.

 ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಿಶಾಲಾಕ್ಷಿ ದೇಶಪಾಂಡೆ ವಹಿಸಿದ್ದರು. ಶಶಿಕಾಂತ ಪಾಶ್ಚಾಪೂರ, ವಿನಾಯಕ ಸದರಜೋಶಿ, ಎನ್.ಆರ್.ಕುಲಕಣರ್ಿ, ಡಾ|| ವಿಜಯದತ್ತ ಮಂಗಸೂಳಿ, ಪ್ರಾಕಾಶ ನರಗುಂದೆ, ಗುರುನಾಥ ಪಾಟೀಲ್, ವನಪಾಲರಾವ್ ಮಂಗಸೂಳಿ, ವಿಲಾಸ ಸೊರಟೂರ, ಪ್ರಹ್ಲಾದ ಕುಲಕಣರ್ಿ, ಗೋಟಾಚಾರ ಮಹೀಶಿ, ಶ್ರೀನಿವಾಸ ಶಿರಹಟ್ಟಿ, ಸಂಜೀವ ಪದಕಿ ಮುಂತಾದವರು ಇದ್ದರು. ರೂಪಾ ಕುಲಕಣರ್ಿ ಪ್ರಾಥರ್ೀಸಿದರು ಹಾಗೂ ಪ್ರೀತಿ ಕುಲಕಣರ್ಿ ನಿರೂಪಿಸಿದರು.