ಸಮಾಜದಲ್ಲಿ ಸೌಹಾರ್ದತೆ ಬೆಳೆಸಿದ ಶಂಕರ ಶಿವಾಚಾರ್ಯರರು : ಬಸಯ್ಯ ಹಿರೇಮಠ

 ಸಮಾಜದಲ್ಲಿ ಸೌಹಾರ್ದತೆ ಬೆಳೆಸಿದ ಶಂಕರ ಶಿವಾಚಾರ್ಯರರು : ಬಸಯ್ಯ ಹಿರೇಮಠ Shankara Shivacharya fostered harmony in society: Basaiah Hiremath

ಲೋಕದರ್ಶನ ವರದಿ 

ಸಮಾಜದಲ್ಲಿ ಸೌಹಾರ್ದತೆ ಬೆಳೆಸಿದ ಶಂಕರ ಶಿವಾಚಾರ್ಯರರು : ಬಸಯ್ಯ ಹಿರೇಮಠ 


ರಬಕವಿ-ಬನಹಟ್ಟಿ  03: ಕುರುಹಿನಶೆಟ್ಟಿ ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಜಗದ್ಗುರು   ಶಂಕರ ಶಿವಾಚಾರ್ಯರ ತಮ್ಮ ಸರಳ ನಡೆ, ಆಚಾರಗಳಿಂದ ಶಿಷ್ಯ ವತ್ಸಲರಾಗಿ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯೊಡನೆ ಸಮಾಜದಲ್ಲಿ ಸೌಹಾರ್ದತೆಯರಳಿಸಿದ ಮಹಾನ್ ಸಂತರಾಗಿದ್ದರೆಂದು ಖ್ಯಾತ ಪ್ರವಚನಕಾರ ಬಸಯ್ಯ ಹಿರೇಮಠ ನುಡಿದರು. 

ತಾಲೂಕಿನ ನಾವಲಗಿ ಗ್ರಾಮದ   ನೀಲಕಂಠೇಶ್ವರ ಮಠದಲ್ಲಿ ಪೀಠದ ಜಗದ್ಗುರು, ಯೋಗಾಚಾರ್ಯ   ಶಿವಶಂಕರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಜರುಗುತ್ತಿರುವ ಮೂರನೇ ವರ್ಷದ ಶಿವರಾತ್ರಿ ಜಾತ್ರೆಯ ಪ್ರವಚನ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ   ಶಂಕರ ಭಗವತ್ಪಾದರು ತಮ್ಮ ಜೀವಿತವೀಡೀ ಧರ್ಮಪ್ರಚಾರ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ, ಒಳಿತಿಗಾಗಿ ಶ್ರಮಿಸಿದರು. ಅವರು ಸಾರಿದ ಮಾನವೀಯ ಮೌಲ್ಯಗಳು, ಧಾರ್ಮಿಕ ತತ್ವಗಳು ಹಾಗೂ ಶಿಸ್ತು ಬದ್ಧ ಜೀವನಶೈಲಿ ಸರ್ವರಿಗೂ ಅನುಕರಣಾರ್ಹ. ಇಂದಿನ ಯಾಂತ್ರಿಕ ಯುಗದಲ್ಲಿ ಮಾನವೀಯ ಮೌಲ್ಯಗಳು ಕುಂಠಿತವಾಗುತ್ತಿದ್ದು, ಶ್ರೀಗಳ ಆದರ್ಶ, ಸಂಸ್ಕಾರ, ಸಂಸ್ಕೃತಿ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮುಂದಿನ ಪೀಳಿಗೆಗೂ ಹಸ್ತಾಂತರಿಸಿದಂತಾಗುತ್ತದೆಂದರು. 

ಅರ್ಚಕ ಸೋಮಯ್ಯ ಕಾಂತಿಮಠ, ಬಸಪ್ಪ ಎಂಟೆತ್ತಿನವರ, ಸುಭಾಸ ಕಂಪು, ಮಹಾಲಿಂಗ ಯಡಪ್ಪನವರ, ಚಿನ್ನಪ್ಪ ಹಳ್ಳಿ, ಮಂಜು ಕಂಪು, ಮಹೇಶ ಚಿಂಚಖಂಡಿ, ದುಂಡಪ್ಪ ಹಳ್ಳಿ, ಅಪ್ಪಾಸಿ ಕಾಂತಿ, ಕಲ್ಲಪ್ಪ ಹೂಗಾರ, ಮಲ್ಲಪ್ಪ ಹೂಗಾರ, ಬಸವರಾಜ ಜನವಾಡ, ಮಹಾಂತೇಶ ಅಮ್ಮಲಜೇರಿ ಸೇರಿದಂತೆ ಅನೇಕರಿದ್ದರು.