ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ Shahapur police seize Rs 50,550 worth of ganja, Rs 50,000 worth of bike

ಶಹಾಪೂರ ಪೊಲೀಸರಿಂದ 50,550ರೂ. ಮೌಲ್ಯದ ಗಾಂಜಾ, 50,000ರೂ. ಮೌಲ್ಯದ ಬೈಕ್ ವಶ 

ಬೆಳಗಾವಿ 25: ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಶಹಾಪೂರ ಪೊಲೀಸರು ಮಿಂಚಿನ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಶಹಾಪೂರ ಗಣೇಶಪುರ ಗಲ್ಲಿ ನಿವಾಸಿ ಪ್ರಥಮೇಶ ಮಹೇಶ ಕಣಬರಕರ ಮತ್ತು ಶಹಾಪೂರ ಜೋಶಿ ನಗರ ನಿವಾಸಿ ಅನಿಕೇತ ಜ್ಞಾನೇಶ್ವರ ಪೋಠೆ ಬಂಧಿತ ಆರೋಪಿಗಳಾಗಿದ್ದಾರೆ. 

ದಿ. 27ರಂದು ಆರೋಪಿಗಳು ವಡಗಾಂವ-ಧಾಮನೆ ರಸ್ತೆ ಸಿದ್ದಾರೂಢ ಕಾಲನಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಅಪರಾಧ ವಿಭಾಗದ ಎಸಿಪಿ ಎಸ್‌.ಆರ್‌. ಕಟ್ಟಿಮನಿ ಉಸ್ತುವಾರಿಯಲ್ಲಿ ಶಹಾಪೂರ ಪೊಲೀಸ್ ಠಾಣೆ ಪಿಎಸ್‌ಐ ಮಣಿಕಂಠ ಪೂಜಾರಿ ಬೆಳಗಾವಿ ನಗರ  ಮತ್ತು ಸಿಬ್ಬಂದಿಯವರು ತಕ್ಷಣ ಕಾರ್ಯಪ್ರವೃತ್ತರಾಗಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ 50,550ರೂ. ಮೌಲ್ಯದ 1ಕೆಜಿ 115 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 50,000 ರೂ. ಮೌಲ್ಯದ ಮೋಟರ್ ಸೈಕಲನ್ನು ವಶಪಡಿಸಿಕೊಂಡಿದ್ದಾರೆ.  

ಆರೋಪಿಗಳ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. 

ಯುವಜನತೆ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿ ದುಶ್ಚಟಕ್ಕೆ ಬೀಳದಂತೆ  ತಿಳಿಸಲಾಗಿದೆ. ದಾಳಿ ಕೈಗೊಂಡ ಸಂಬಂಧಪಟ್ಟ ಎಸಿಪಿ ಅಪರಾಧ, ಪಿಎಸ್‌ಐ ಶಹಾಪೂರ ಹಾಗೂ ಸಿಬ್ಬಂದಿಯವರ ಕಾರ್ಯವನ್ನು  ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿ ಅವರುಗಳು ಶ್ಲಾಘಿಸಿರುತ್ತಾರೆ. 

ಬೆಳಗಾವಿ ನಗರದಲ್ಲಿ ಇಂಥ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಟ್ಟು ಯುವ ಪೀಳಿಗೆ ಇಂಥ ದುಶ್ಚಟಗಳಿಗೆ ದಾಸರಾಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ಮಿಂಚಿನ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ. ಈ ಕಾರ್ಯಾಚರಣೆಗಳು ಜಾರಿಯಲ್ಲಿದ್ದು, ಇನ್ನು ಹೆಚ್ಚಿ ದಾಳಿಗಳನ್ನು ಕೈಗೊಂಡು ನಗರದಲ್ಲಿ ಅಕ್ರಮ ಚಟುವಟಿಕೆಗಳನ್ನು ಬೇರು ಸಮೇತ ಕಿತ್ತೊಗೆಯಲು ಬೆಳಗಾವಿ ನಗರ ಪೊಲೀಸರ ಅವಿರತ ಪ್ರಯತ್ನ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಗೆ ತಿಳಿಸಿದ್ದಾರೆ.