ಉಪವಿಭಾಗಾಧಿಕರಿಗಳ ವಿರುದ್ಧ ಆರೋಪ ಸುಳ್ಳು ಸ್ಪಷ್ಟತೆ ನೀಡಿದ ಶಹಾಮುಜಂಮೀಲ ಖಾದ್ರಿ

ಉಪವಿಭಾಗಾಧಿಕರಿಗಳ ವಿರುದ್ಧ ಆರೋಪ ಸುಳ್ಳು ಸ್ಪಷ್ಟತೆ ನೀಡಿದ ಶಹಾಮುಜಂಮೀಲ ಖಾದ್ರಿ  Shahamuzamil Qadri clarifies that the allegations against the sub-divisional officers are false

ಲೋಕದರ್ಶನ ವರದಿ 

ಉಪವಿಭಾಗಾಧಿಕರಿಗಳ ವಿರುದ್ಧ ಆರೋಪ ಸುಳ್ಳು ಸ್ಪಷ್ಟತೆ ನೀಡಿದ ಶಹಾಮುಜಂಮೀಲ ಖಾದ್ರಿ  


ಲೋಕದರ್ಶನ ವರದಿ, 

ಜಮಖಂಡಿ 05: ತಾಲ್ಲೂಕಿನ ಆಲಗೂರ ಸಮೀಪದ ಎರಡು ಕುಟುಂಬಗಳ ಮಧ್ಯ ಜಮೀನಿನ ವಿವಾದದ ಬಗ್ಗೆ ಉಪವಿಭಾಗಾಧಿಕರಿಗಳ ವಿರುದ್ಧ ಆರೋಪ ಮಾಡುತ್ತಿರುವುದು ಸತ್ಯಕ್ಕೆ ಸುಳ್ಳು ಆಗಿರುತ್ತದೆಂದು ಸ್ಪಷ್ಟತೆಯನ್ನು ನೀಡಿದ ಶಹಾಮುಜಂಮೀಲ ಖಾದ್ರಿ ತಿಳಿಸಿದ್ದಾರೆ. 

ನಗರದ ಆಲಗೂರ ಸಮೀಪದ ಜಮೀನಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸರಿಸುಮಾರು ವರ್ಷಗಳ ಹಿಂದೆ ನಮ್ಮ ಪೂರ್ವಜರ ಆಸ್ತಿಯು ಇದ್ದು.  ಒಟ್ಟು 23 ಎಕ್ಕರೆ ಜಮೀನ ಹೊಂದಿದ್ದು ಇರುತ್ತದೆ. ಇದರಲ್ಲಿ 5 ಹಿಸ್ಸಾಗಳು ಇದ್ದು.  ಹಿಸ್ಸಾ 1) 9 ಗುಂಟೆ, 2) 3 ಎಕ್ಕರೆ 22. ಗುಂಟೆ, 3) 2 ಎಕ್ಕರೆ 37 ಗುಂಟೆ, 4) 3 ಎಕ್ಕರೆ  22 ಗುಂಟೆ, 5)  12 ಎಕ್ಕರೆ 29 ಗುಂಟೆ ವಿಸ್ತೀರ್ಣ ಹೊಂದಿದ್ದು ಇರುತ್ತದೆ. ಮೂಲ ದಾಖಲಾತಿಗಳ ಪ್ರಕಾರ ಜಮಖಂಡಿ ಉಪವಿಭಾಗಾಧಿಕಾರಿಗಳು ಸರಿಯಾದ ರೀತಿಯಲ್ಲಿ ಪರೀಸಿಲನೆ ಮಾಡಿ ದಾಖಲಾತಿಗಳನ್ನು ಮಾಡಿರುತ್ತಾರೆ. ಆದರೆ ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. 

ತಮ್ಮ ಜಮೀನನಲ್ಲಿ ದಾಖಲೆ ಪ್ರಕಾರ ಕಬ್ಜಾದಲ್ಲಿ ಇರುತ್ತಾರೆ. ಆದರೆ ಸುಖಾಸುಮ್ಮನೆ ಆರೋಪವನ್ನು ಮಾಡುತ್ತಿದ್ದಾರೆ. ನಮ್ಮ ಹತ್ತಿರ ಎಲ್ಲ ಮೂಲ ದಾಖಲಾತಿಗಳು ಇರುತ್ತವೆ. ಆದರೆ ಅವರು ತಮ್ಮಗೆ ಸೇರಬೇಕಾದ ಜಮೀನಿನಲ್ಲಿ ಕಬ್ಜಾ ಇರುತ್ತಾರೆ. ಅದು ಜಿಲ್ಲಾಧಿಕಾರಿಗಳ ಹಂತದಲ್ಲಿ ಸಹ ಪರೀಸಿಲನೆ ನಡೆಯುತ್ತಿರುತ್ತದೆ. ಇವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಇದೇ ಸಂದರ್ಭದಲ್ಲಿ ನಿಸ್ಸಾರ ಅಹ್ಮದ ಪಾರಥನಳ್ಳಿ, ತೋಸಿಫ್ ಪಾರಥನಳ್ಳಿ, ಶಾಪೈಸಲ್ ಖಾದ್ರಿ, ಶೋಹೆಲ್ ನಂಧ್ಯಾಳ, ಅಬ್ಜಲ್ ಪಾರಥನಳ್ಳಿ, ಅಮೀರ ಮೌಲಿ ಇದ್ದರು. 


ಬೈಟ್ : ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡೀಕರ, 

ಎರಡು ಕುಟುಂಬಗಳ ಮಧ್ಯ ಜಮೀನಿನ ವಿವಾದವು ಸುಮಾರು ವರ್ಷಗಳ ಕಾಲ ಇರುತ್ತದೆ. ಮೂಲ ದಾಖಲಾತಿಯ ಪ್ರಕಾರ ಹಾಗೂ ಜಮೀನಿನಲ್ಲಿ ಕಬ್ಜಾ ಇರುವ ಪ್ರಕಾರ ಎಲ್ಲವನ್ನು ಪರೀಸಿಲನೆ ಮಾಡಲಾಗಿದ್ದು. ಅದರ ಪ್ರಕಾರ ದಾಖಲಾತಿಗಳನ್ನು ಮಾಡಲಾಗಿದೆ. ಇದೊಂದು ಜಮೀನಿನ ವಿಷಯ ನ್ಯಾಯಾಲದ ಮೇಟ್ಟಿಲು ಸಹ ಏರಿದ್ದು ಇರುತ್ತದೆ. ಹಾಗೂ ಜಿಲ್ಲಾಧಿಕಾರಿಗಳ ಹಂತದಲ್ಲಿ ಪರೀಸಿಲನೆ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಯಾವ ರೀತಿ ಕ್ರಮವನ್ನು ಜರುಗಿಸುತ್ತಾರೆ ಎಂದು ಕಾದುನೋಡಬೇಕು. ನಾವುಗಳು ದಾಖಲಾತಿಗಳ ಪ್ರಕಾರ ನ್ಯಾಯ ದೊರಕಿಸಿ ಕೊಡುತ್ತೇವೆ. 



ಪೋಟೋ : ಜಮಖಂಡಿ ತಾಲ್ಲೂಕಿನ ಆಲಗೂರ ಸಮೀಪದ ಎರಡು ಕುಟುಂಬಗಳ ಮಧ್ಯ ಜಮೀನಿನ ವಿವಾದದ ಬಗ್ಗೆ ಉಪವಿಭಾಗಾಧಿಕರಿಗಳ ವಿರುದ್ಧ ಆರೋಪ ಮಾಡುತ್ತಿರುವುದು ಸತ್ಯಕ್ಕೆ ಸುಳ್ಳು ಆಗಿರುತ್ತದೆಂದು ಸ್ಪಷ್ಟತೆಯನ್ನು ನೀಡಿದ ಶಹಾಮುಜಂಮೀಲ ಖಾದ್ರಿ ಸೇರಿದಂತೆ ಅನೇಕರು ಇದ್ದರು.