ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಗಳಿಗೆ 3 ವರ್ಷ ಶಿಕ್ಷೆ
Sexual assault on minor: Accused sentenced to 3 years in prison
ಲೋಕದರ್ಶನ ವರದಿ
ಬೆಳಗಾವಿ 07: ನಂದಗಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಂದಗಡ ಗ್ರಾಮದ ಭೋರಣಕಿ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗಳಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಗುರುವಾರ ತೀರ್ು ಪ್ರಕಟಿಸಿದೆ. ಭೋರಣಕಿ ಗ್ರಾಮದ ಮೋಶಿನ ಕಾಶಿಂಸಾಬ ಸಾವಕಾರ(30) ಮತ್ತು ಇರ್ಾನ ನಿಶಾರ ವಸ್ತಾದ(27) ಇವರು ಅಪರಾಧಿಗಳಾಗಿದ್ದಾರೆ.
ಘಟನೆ ವಿವರ : ದಿ. 24/07/2024ರಂದು ಅಪರಾದಿ ಮೋಶಿನ ಕಾಶಿಂಸಾಬ ಸಾವಕಾರ ಈತನು ಸೀಮ್ ಕಾರ್ಡ ನಂಬರ 7349448320 ನೇದ್ದು ಇರುವ ಮೊಬೈಲನ್ನು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕೊಡು ಅಂತಾ ಅಪರಾಧಿ ಇರ್ಾನ ನಿಶಾರ ವಸ್ತಾದ ಈತನ ಕಡೆಗೆ ಕೊಟ್ಟಿದ್ದು ಆತನು ಬಾಲಕಿಗೆ ಕೊಟ್ಟಿದ್ದು, ಅಪರಾದಿ ಮೋಶಿನ ಕಾಶಿಂಸಾಬ ಸಾವಕಾರ ಈತನು ಮಾತನಾಡಿ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಬಗ್ಗೆ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನಂದಗಡ ಠಾಣೆಯ ಆರ್.ಎಸ್.ಸಪಾಟೆ ಮಹಿಳಾ ಪಿಎಸ್.ಐ ಇವರು ತನಿಖೆ ನಡೆಸಿ, ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಎಫ್.ಟಿ.ಎಸ್.ಸಿ-1 ಬೆಳಗಾವಿ (ಪೋಕ್ಸ್ ನ್ಯಾಯಾಲಯ) ಬೆಳಗಾವಿ ಇವರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಧೀಶೆ ಸಿ.ಎಂ.ಪುಷ್ಪಲತಾ ಶಿಕ್ಷೆ ವಿಧಿಸಿ ತೀರ್ು ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 