ಮುಂಬೈ ಲೋಕಲ್ ರೈಲಿನಲ್ಲಿ ಎಸಿ ಕೈಕೊಟ್ಟ ಪರಿಣಾಮ ಹಲವಾರು ಮಹಿಳಾ ಪ್ರಯಾಣಿಕರು ಅಸ್ವಸ್ಥ

ಮುಂಬೈ ಲೋಕಲ್ ರೈಲಿನಲ್ಲಿ ಎಸಿ ಕೈಕೊಟ್ಟ ಪರಿಣಾಮ ಹಲವಾರು ಮಹಿಳಾ ಪ್ರಯಾಣಿಕರು ಅಸ್ವಸ್ಥ Several Women Passengers Faint After AC Fails in Mumbai Local Train at Mulund Station

ಮುಂಬೈ, ಜುಲೈ 13: ಮುಂಬೈನ ಮುಲುಂಡ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 2ರಲ್ಲಿ ಎಸಿ ಲೋಕಲ್ ರೈಲಿನ ಹವಾನಿಯಂತ್ರಣ ವ್ಯವಸ್ಥೆ ಸುಮಾರು 15 ನಿಮಿಷಗಳ ಕಾಲ ಸ್ಥಗಿತಗೊಂಡ ಪರಿಣಾಮ ಹಲವಾರು ಮಹಿಳಾ ಪ್ರಯಾಣಿಕರು ಪ್ರಜ್ಞೆ ತಪ್ಪಿದ್ದು, ಇತರರು ಉಸಿರುಗಟ್ಟುವಿಕೆಯ ಸಮಸ್ಯೆ ಎದುರಿಸಿದ ಘಟನೆ ಸೋಮವಾರ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ರೈಲು ನಿಲ್ದಾಣದಲ್ಲಿ ನಿಂತಿದ್ದ ವೇಳೆ ಎಸಿ ಘಟಕದಲ್ಲಿ ದೋಷ ಕಾಣಿಸಿಕೊಂಡಿದ್ದು, ಇದರಿಂದ ಬೋಗಿಗಳೊಳಗಿನ ತಾಪಮಾನ ಮತ್ತು ತೇವಾಂಶ ತೀವ್ರವಾಗಿ ಹೆಚ್ಚಾಯಿತು. ಗಾಳಿಯ ಹರಿವು ಕಡಿಮೆಯಾದ ಕಾರಣ, ವಿಶೇಷವಾಗಿ ಮಹಿಳಾ ಪ್ರಯಾಣಿಕರು ಉಸಿರಾಟದ ತೊಂದರೆ ಅನುಭವಿಸಿದರು.

ಕೆಲವು ಮಹಿಳೆಯರು ಬೋಗಿಯೊಳಗೇ ಪ್ರಜ್ಞೆ ತಪ್ಪಿದರು. ತಕ್ಷಣವೇ ಸಹ ಪ್ರಯಾಣಿಕರು ನೆರವಿಗೆ ಧಾವಿಸಿ, ಅಸ್ವಸ್ಥರಾದವರನ್ನು ರೈಲಿನಿಂದ ಹೊರಗೆ ಕರೆತಂದು ಪ್ಲಾಟ್‌ಫಾರ್ಮ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿದರು.

ಎಸಿ ವೈಫಲ್ಯಕ್ಕೆ ನಿಖರ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ರೈಲ್ವೆ ಇಲಾಖೆಯ ಅಧಿಕೃತ ಹೇಳಿಕೆ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.