ಮಹಾ ಮಂಡಳಿಯ ಸಹಯೋಗದಲ್ಲಿ ಏಳನೇ ದಿನದ ಅಲಂಕಾರಿಕ ಗಣಪತಿ ವಿಸರ್ಜನೆ

ಮಹಾ ಮಂಡಳಿಯ ಸಹಯೋಗದಲ್ಲಿ ಏಳನೇ ದಿನದ ಅಲಂಕಾರಿಕ ಗಣಪತಿ ವಿಸರ್ಜನೆ  Seventh day Ganapati immersion: Jamakhandi News

ಜಮಖಂಡಿ   03:  ನಗರದ ಹನುಮಾನ ಚೌಕದಲ್ಲಿ ನಡೆದ ಗಜಾನನ ಮಹಾ ಮಂಡಳಿಯ ಸಹಯೋಗದಲ್ಲಿ ಏಳನೇ ದಿನದ ಅಲಂಕಾರಿಕ ಗಣಪತಿ ವಿಸರ್ಜನೆಯ ಸಮಾರೋಪ ಸಮಾರಂಭ ಜರುಗಿತು.ನಗರದಲ್ಲಿ ವಿವಿಧ ಕಡೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾನ ಮಾಡಿದ ವಿವಿಧ ಬಗ್ಗೆಯ ಗಣಪತಿಗಳಿಗೆ ಅಲಂಕಾರ ಮಾಡಿದ ಮಂಡಳಿಯವರಿಗೆ ಬಹುಮಾನವನ್ನು ನೀಡಲಾಯಿತು.

ಪ್ರಥಮ ಸ್ಥಾನವನ್ನು ಮೋರೆ ಪ್ಲಾಟ ಗಣೇಶನ ಮಂಡಳಿಯವರು ಪಡೆದುಕೊಂಡರು. ದ್ವಿತೀಯ. ತೃತೀಯ ಹೀಗೆ ಹಲವಾರು ಬಹುಮಾನಗಳನ್ನು ವಿವಿಧ ಗಲ್ಲಿಯ ಮಂಡಳಿಯ ಯುವಕರು ಪಡೆದುಕೊಂಡರು.ಗಣಪತಿ ವಿಸರ್ಜನೆ ಸಮಯದಲ್ಲಿ ಪಂಢರಪುರಕ್ಕೆ ದಿಂಡಿ ಯಾತ್ರೆಗೆ ಹೋಗುವ ಹಾಗೆ ವಿಠ್ಠಲನ ಭಕ್ತರು ಪುಟ್ಟ.ಪುಟ್ಟ ಬಾಲಕರು ತಾಳವನ್ನು ಬಾರಿಸುವ ಮೂಲಕ ಹೆಜ್ಜೆಗಳನ್ನು ಹಾಕಿ ನೆರೆದಿದ್ದ ಜನರ ಗಮನವನ್ನು ಸೆಳೆದರು. ಮಹಾರಾಷ್ಟ್ರದಿಂದ ಆಗಮಿಸಿದ ಜಾಂಜ್ ಪಥದ ಮಹಿಳೆಯರು.  

ಯುವಕರು ಹೆಜ್ಜೆಯನ್ನು ಹಾಕಿದರು. ವಿವಿಧ ಬಗ್ಗೆ ಅಲಂಕಾರಿಕ ಸಾವಿರಾರು ಗಣಪತಿ ಮೂರ್ತಿಗಳನ್ನು ಯುವಕರು ಬ್ಯಾಂಜೋ ಹಾಗೂ ಡಿಜೆ. ಜಾಂಜ್ ಪಥಗಳ ಮೂಲಕ ಭವ್ಯವಾದ ಮೆರವಣಿಗೆದಿಂದ ಗಣಪತಿಗಳನ್ನು ವಿಸರ್ಜನೆ ಮಾಡಿದರು.ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯವನ್ನು ವಹಿಸಿದ ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು.ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಈಶ್ವರ ವಾಳೇನ್ನವರ.ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ. ತಹಶೀಲ್ದಾರ ಅನೀಲ ಬಡಿಗೇರ. ನಗರಸಭೆ ಪೌರಾಯುಕ್ತ ಜೋತಿ ಗೀರೀಶ. ಹೆಸ್ಕಾಂ. ಸಿಪಿಐ ಮಲ್ಲಪ್ಪ ಮಡ್ಡಿ. ಮಹಾ ಮಂಡಳ ಅಧ್ಯಕ್ಷ ಸಚೀನ ಪಟ್ಟಣಶೆಟ್ಟಿ.ಪ್ರಭು ಜನವಾಡ.ಅನೀಲ ಸಿಂಧೂರ. ಪ್ರದೀಪ ಮಾಹಾಲಿಂಗಪೂರಮಠ.ಗಣೇಶ ಶಿರಗನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ನಗರದ ಸಾವಿರಾರು ಗಣಪತಿಯ ಭವ್ಯವಾದ ಮೆರವಣಿಗೆ ಮೂಲಕ ಡಿಜೆ. ಡೊಳ್ಳು. ಬ್ಯಾಂಜ್ಯೋಗಳ ಮುಖಾಂತರ ಯುವಕರು ಹಾಗು ಮಹಿಳೆಯರು ಹೆಜ್ಜೆ ಹಾಕುವ ಜೊತೆಗೆ ಕುಣಿದು ಕುಪ್ಪಳಿಸಿ ಗಣಪತಿ ಮೂರ್ತಿಗಳನ್ನು ವಿಸರ್ಜನೆಯನ್ನು ಮಾಡಿದರು.ಪೋಟೋ : ಜಮಖಂಡಿ ನಗರದಲ್ಲಿ ಏಳನೇ ದಿನದ ಗಣಪತಿ ಮೂರ್ತಿಗಳ ವಿಸರ್ಜನೆಯಲ್ಲಿ ಮಹಾ ಮಂಡಳಿಯಿಂದ ಸಮಾರೋಪ ಸಮಾರಂಭದಲ್ಲಿ ಪಂಢರಪುರದ ವಿಠ್ಠಲ ಭಕ್ತರು ಗಣೇಶನ ವಿಸರ್ಜನೆಯಲ್ಲಿ ಹೆಜ್ಜೆ ಹಾಕಿ ಜನರ ಗಮನ ಸೆಳೆದರು.