ಗುರ್ಲಾಪೂರದಲ್ಲಿ ಕಳ್ಳರ ಹಾವಳಿ: ಒಂದೇ ದಿನ ಏಳು ಮನೆಗೆ ಕನ್ನ
Seven houses robbed in one day in Gurlapur
ಗುರ್ಲಾಪೂರ 24: ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿರುವ ಗುರ್ಲಾಪೂರದಲ್ಲಿ ಒಂದೆ ದಿನ ಸುಮಾರು (7) ಎಳು ಮನೆಗಳಿಗೆ ಕಳ್ಳರು ಕಣ್ಣ ಹಾಕಿ ಮನೆಗಳ ಕೀಲಿ ಮುರಿದು ಕಳ್ಳತನ ಮಾಡಿರುವದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮದ ಯುವ ಧುರೀಣ ಅಶೋಕ ಗಾಣಿಗೇರ ಅವರು ಕಳ್ಳತನದ ಕುರಿತು ಮೂಡಲಗಿ ಪೂಲೀಸ ಠಾಣೆಗೆ ಸುದ್ದಿ ತಿಳಿಸಿದರು. ನಂತರ ಗ್ರಾಮಕ್ಕೆ ಕ್ರೈಮ ವಿಭಾಗದ ಅಧಿಕಾರಿಗಳು ಆಗಮಿಸಿ ಕಳ್ಳತನವಾದ ಮನೆೆಗಳ ಮಾಲಿಕರರಾದ ಮಹಾದೇವಿ ಕೌಜಲಗಿ, ಬಸವರಾಜ ಯರಜರವಿ(ಬಳೆಗಾರ), ಮಹಾಲಿಂಗಯ್ಯಾ ಜಡಿ, ಬದ್ರಿನಾಥ ಕಂಬಾರ, ಶಿವಲಿಂಗಪ್ಪ ಮುಗಳಖೋಡ, ಪ್ರಸನ್ನ ಹಿರೇಮಠ ಅವರನ್ನು ಭೆಟ್ಟಿ ಮಾಡಿ ಕಳುವಾದ ವಸ್ತುಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ತನಿಖೆ ಮಾಡಲಾಗುವದು ಹಾಗೆ ಗ್ರಾಮಕ್ಕೆ ಅಪರಿಚಿತರು ಆಗಮಸಿದರೆ ಅವರ ಮಾಹಿತಿಯನ್ನು ನಮ್ಮ ಇಲಾಖೆಗೆ ತಿಳಿಸಬೇಕು ಎಂದು ತಿಳಿಸಿದರು.
ಡಾ. ಪಿ ಎಮ್ ಹಿರೇಮಠ, ಅಶೋಕ ಗಾಣಿಗೇರ, ಈರಯ್ಯಾ ಜಡಿ, ಬಸವರಾಜ ಬಳೆಗಾರ, ಮಹಾತೆಂಶ ಜಕಾತಿ, ಜಯಪ್ರಾಶ ಗಾಣಿಗೇರ, ರಮೇಶ ನೇಮಗೌಡರ, ಶಂಕರ ಮುಗಳಖೊಡ, ಶಿವಾನಂದ ಮರಾಠೆ, ಹಾಗೂ ಮಹಿಳೆಯರು ಪೊಲೀಸ್ ಅಧಿಕಾರಿಗಳಿಗೆ ರಾತ್ರಿ ವೇಳೆ ಪೊಲೀಸರು ಗಸ್ತು ಹಾಕುವದರಿಂದ ಕಳ್ಳಕಾಕರ ಹಾವಳಿ ಆಗುವದನ್ನು ತಡೆಯಬಹುದು ಎಂದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 