ಸರ್ವರ್ ಸಮಸ್ಯೆ ಗ್ರಾಹಕರಿಂದ ಆಹಾರ ಇಲಾಖೆಗೆ ಹಿಡಿಶಾಪ
Server problem: Customers slam Food Department
ಇಂಡಿ 28: ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ತಾಲ್ಲೂಕಿನಾದ್ಯಂತ ಪಡಿತರ ಪಡೆಯಲು ಜನರು ಹರಸಾಹಸ ಪಡುತ್ತಿದ್ದಾರೆ. ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಪಿಕೆಪಿಎಸ್ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವ ಅಕ್ಕಿ ಪಡೆಯಲು ಜನರು ಸಾಲುಗಳಲ್ಲಿ ಇಡೀ ದಿನ ನಿಂತರೂ ಅಕ್ಕಿ ಪಡೆಯಲು ಆಗುತ್ತಿಲ್ಲ. ಈ ತಿಂಗಳ 31ರೊಳಗೆ ಅಕ್ಕಿ ಪಡೆದುಕೊಳ್ಳದಿದ್ದರೆ ಅಕ್ಕಿ ಕೈತಪ್ಪಿ ಹೋಗುತ್ತದೆ. ಆದರೆ, ಬಿಪಿಲ್ ಕಾರ್ಡುದಾರರು ಹೆಬ್ಬೆಟ್ಟು ಕೊಡಲು ಹೋದಾಗ ಸರ್ವರ್ ಸಮಸ್ಯೆ ಆಗುತ್ತಿದೆ.
ಇದರಿಂದ ಇಡೀ ದಿನ ಸರತಿಯಲ್ಲಿ ನಿಂತರೂ ಅಕ್ಕಿ ಸಿಗದೆ ಜನರು ನಿರಾಸೆಯಿಂದ ಮನೆಗೆ ಮರಳುವಂತಾಗಿದೆ.‘ಸರ್ವರ್ ಸಮಸ್ಯೆಯಿಂದಾಗಿ ಮೂರು ದಿನಗಳಿಂದ ನಮಗೆ ಪಡಿತರ ಪಡೆಯಲು ಆಗುತ್ತಿಲ್ಲ. ತೋಟದ ಕೆಲಸಕ್ಕೆ ರಜೆ ಮಾಡಿ ರೇಷನ್ ಪಡೆಯಲು ಬರುತ್ತೇವೆ. ಬಿಸಿಲಲ್ಲಿ ಇಡೀದಿನ ಕಾದರೂ ಅಕ್ಕಿ ಸಿಗುತ್ತಿಲ್ಲ’ ಎಂದು ಜನರು ಬೇಸರ ಹೊರಹಾಕಿದ್ದಾರೆ.ತಡವಲಗಾ ಗ್ರಾಮದಲ್ಲಿ ಸುಮಾರು 2400 ಬಿಪಿಎಲ್ ಕಾರ್ಡ್ ದಾರರು ಹಾಗೂ 300 ನೂರು ಎಪಿಎಲ್ ಕಾರ್ಡ್ ದಾರರು ಇದ್ದು.ಇನ್ನು ಸುಮಾರು ಏಳುನೂರು ಕಾರ್ಡುದಾರರಿಗೆ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಆಗುತ್ತಿಲ್ಲ.
ಈ ಕುರಿತು ಇಂಡಿ ತಾಲೂಕು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದೆ ಅವರು ಪೋನ್ ತೆಗಿಯುತ್ತಿಲ್ಲ.ಇನ್ನಾದರು ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಸಮಸ್ಯೆ ಪರಿಹರಿಸಬೇಕು ಇಲ್ಲವಾದರೆ ಅನೇಕ ಕಾರ್ಡುದಾರರು ಪಡಿತರ ಪಡಿದುಕೊಳ್ಳದೆ ವಂಚಿತರಾಗಬಹುದು.ಹಾಗೂ ಪಡಿತರ ವಿತರಣೆ ಮಾಡುವ ವಿತರಕ್ಕರು ಪಡಿತರ ಪಡೆದುಕೊಳ್ಳಲು ಬಂದ ಗ್ರಾಹಕರಿಗೆ ತಂಪಾದ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 