ಸೆ.13 ಗಾನಾಂಕುರ ಧ್ವನಿಸುರಳಿ ಬಿಡುಗಡೆ ಸಮಾರಂಭ
ಲೋಕದರ್ಶನ ವರದಿ
ಬ್ಯಾಡಗಿ: 'ಗಾನಾಂಕುರ' ಧ್ವನಿಸುರಳಿ (ಆಡಿಯೋ ಸಿಡಿ) ಬಿಡುಗಡೆ ಸಮಾರಂಭವು ಸೆ.13 ರಂದು ಸಂಜೆ 6 ಗಂಟೆಗೆ ಪಟ್ಟಣದ ವಾಜಪೇಯಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಾಹಿತಿ ಜೀವರಾಜ ಛತ್ರದ ಹೇಳಿದರು.
ಈ ಕುರಿತು ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಖ್ಯಾತ ಮಹಿಳಾ ಸಾಹಿತಿ ಸಂಕಮ್ಮ ಸಂಕಣ್ಣನವರ ರಚಿಸಿದ ಕವನಗಳಿಂದ ಆಯ್ದ ಭಾಗಗಳನ್ನು ಹಾಡಿನ ರೂಪದಲ್ಲಿ ಹೊರ ತರಲಾಗುತ್ತಿದ್ದು, ಧ್ವನಿ ಸರುಳಿ ಉತ್ತಮವಾಗಿ ಮೂಡಿ ಬಂದಿದೆ ಎಂದರು.
ಸಂಕಮ್ಮ ಸಂಕಣ್ಣನವರ ಈಗಾಗಲೇ ನೂರಾರು ಕವನಗಳನ್ನು ಬರೆದು ಬಿಡುಗಡೆಗೊಳಿಸಿದ್ದು, ಹುತಾತ್ಮ ಮೈಲಾರ ಮಹದೇವ ಜೀವನ ಚರಿತ್ರೆ ಇದೀಗ ಹಿಂದಿ ಭಾಷೆಯಲ್ಲಿ ತಜರ್ುಮೆಗೊಂಡು ಪಠ್ಯಪುಸ್ತಕದಲ್ಲಿ ಪಾಠವಾಗಿ ಪ್ರಕಟಗೊಂಡಿದೆ, ಅಷ್ಟೇ ಏಕೆ ಮೈಲಾರ ಮಹದೇವ ಚಲನಚಿತ್ರವಾಗಿಯೂ ಕೂಡ ಚಿತ್ರೀಕರಣಗೊಂಡು ರಾಜ್ಯ ಎಲ್ಲ ಥಿಯೇಟರ್ಗಳಲ್ಲಿ ಪ್ರದರ್ಶನಗೊಂಡಿದೆ ಎಂದರು.
ಪ್ರಸನ್ನ ಭೋಜಶೆಟ್ಟರ ಸಂಗೀತ ಸಂಯೋಜನೆ:ರಮೇಶ ಮೋಟೆಬೆನ್ನೂರ ಮಾತನಾಡಿ, ಪತ್ರಕರ್ತ ಶಿವಕುಮಾರ ಭೋಜಶೆಟ್ಟರ ಇವರ ಪುತ್ರ ಹುಬ್ಬಳ್ಳಿಯ ಬಹುಮುಖ ಪ್ರತಿಭೆ ಎಂಜಿನಿಯರ್ ಪ್ರಸನ್ನ ಭೋಜಶೆಟ್ಟರ ಸಂಗೀತ ಸಂಯೋಜನೆ ನೀಡಿದ್ದಾರೆ ಪ್ರಥಮ ಹಂತದಲ್ಲಿ 9 ಹಾಡುಗಳನ್ನು ಹೊಂದಿರುವ ದ್ವನಿಸುರಳಿ ಬಿಡುಗಡೆಗೊಳ್ಳಲಿದೆ, ಇದರಲ್ಲಿ ಭಾವಗೀತೆಗಳೇ ಹೆಚ್ಚಾಗಿದ್ದು ಪಟ್ಟಣದ ಬ್ಯಾಡಗಿ ಮೆಣಸಿನಕಾಯಿ ಮೇಲೆ ರಚಿಸಿದ ಹಾಡೊಂದು ಮೂಡಿ ಬಂದಿದೆ ಎಂದರು.
ಖ್ಯಾತ ಗಾಯಕರು: ಹರೀಶ ಮಾಳಪ್ಪನವರ ಮಾತನಾಡಿ, ಚಲನಚಿತ್ರ ಹಿನ್ನೆಲೆ ಗಾಯಕರಾದ ಶಮಿತಾ ಮಲ್ನಾಡ್, ಅಜಯ್ ವಾರಿಯರ್, ಆರ್.ಕೆ.ಸ್ಪರ್ಶ. ಸುಪ್ರೀತ್ ಪಾಲ್ಗುಣ, ಸುಚೇತನ ರಂಗಸ್ವಾಮಿ, ಮೇಘನ ಜೋಷಿ ಸುಂದರವಾಗಿ ಹಾಡುಗಳು ಹೇಳಿದ್ದು ಸಿಡಿ ಬಿಡುಗಡೆಗೊಂಡ ಬಳಿಕ ಬಹುಶಃ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಲಿದೆ ಎಂದರು.
ಜಿಲ್ಲಾಧಿಕಾರಿಗಳಿಂದ ಬಿಡುಗಡೆ: ಚಂದ್ರು ಛತ್ರದ ಮಾತನಾಡಿ, ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಧ್ವನಿಸುರುಳಿ ಬಿಡುಗಡೆಗೊಳಿಸಲಿದ್ದು, ಖ್ಯಾತ ಸಾಹಿತಿ ಸತೀಶ ಕುಲಕಣರ್ಿ, ಹಿರಿಯ ವರದಿಗಾರ ಶಿವಕುಮಾರ ಭೋಜಶೆಟ್ಟರ, ಕಲಾವಿದ ಉಮೇಶ ಬಣಕಾರ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಾಹಿತಿ ಸಂಕಮ್ಮ ಸಂಕಣ್ಣನವರ, ಪ್ರಕಾಶ ಛತ್ರದ, ಮಹಾಂತೇಶ ಎಲಿ, ಕರಬಸಪ್ಪ ಹಿರಿಯಾಳದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 