ಶಾಲಾಭಿವೃದ್ಧಿಗೆ ಹಿರಿಯ ಶಿಕ್ಷಕಿಯಿಂದ 1ಲಕ್ಷ ರೂ. ದೇಣಿಗೆ
Senior teacher donates Rs 1 lakh for school development
ಯಲಬುರ್ಗಾ 17: ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮತ್ತು ಶಾಲೆಯ ಅಭಿವೃದ್ಧಿಗಾಗಿ ತಾಲ್ಲೂಕಿನ ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಯಶ್ರೀ ಬೂದಿಹಾಳ್ ಅವರು ತಾವು ಕೆಲಸ ಮಾಡುವ ಶಾಲೆಗೆ ತಮ್ಮ ವೇತನದಲ್ಲಿ 1 ಲಕ್ಷ ದೇಣಿಗೆ ನೀಡಿದ್ದಾರೆ. ದೇಣಿಗೆ ನೀಡಿ ಮಾತನಾಡಿದ ನಲಿ ಕಲಿಯ ಹಿರಿಯ ಶಿಕ್ಷಕಿ ಜಯಶ್ರೀ ಬೂದಿಹಾಳ್ ಮಾತನಾಡಿ, ನನಗೆ ಮಕ್ಕಳಿಂದಲೇ ಅನ್ನದೊರೆಯುತ್ತದೆ, ಬದುಕಿಗೆಅನ್ನ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾದ ಮಕ್ಕಳು ಕಲಿಯುವ ಶಾಲಾ ಅಭಿವೃದ್ಧಿಗೆದೇಣಿಗೆ ನೀಡಿದ್ದೇನೆ. ಪ್ರತಿ ವರ್ಷ ಇಲಾಖೆ 15 ಸಾಂದರ್ಭಿ ಕರಜಾ ಸೌಲಭ್ಯ ನೀಡುತ್ತಿದೆ. ನಾನು ಪಡೆದೆರಜೆ ದಿನಗಳಲ್ಲಿ ಬಂದ ವೇತನ ಸೇರಿಸಿ ಶಾಲೆಗೆ ದೇಣಿಗೆ ನೀಡಿದ್ದೇನೆ. ನಾನು ಇಲಾಖೆಯ ನಿಯಮಗಳ ಪ್ರಕಾರ ಸಾಂದರ್ಭಿಕ ರಜೆ ಪಡೆದ ದಿನಗಳಲ್ಲೂ ಸರ್ಕಾರ ಸಂಬಳ ನೀಡಿದ್ದು ಆ ಸಂಬಳವನ್ನು ಮರಳಿ ಶಾಲೆಗೆ ನೀಡಿದ್ದೇನೆ ಎಂದ ಅವರು , ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು.ಅದಕ್ಕೆ ಜನಸಮುದಾಯ ಮುಂದಾಗಬೇಕು. ಅಂದಾಗ ಮಾತ್ರ ಸರ್ಕಾರಿ ಶಾಲೆ ಉಳಿಯಲು ಸಾಧ್ಯವಾಗಲಿದೆಎಂದರು.
1 ಲಕ್ಷಚೆಕ್ ಸ್ವೀಕರಿಸಿ ಶಿಕ್ಷಕಿಯನ್ನು ಗೌರವಿಸಿ ಮಾತನಾಡಿದಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ಮೂಲಿಮಣಿ,,‘ಶಾಲೆ ಹಾಗೂ ಮಕ್ಕಳ ಶೈಕ್ಷಣಿಕಅಭಿವೃದ್ಧಿ ವಿಷಯದಲ್ಲಿ ಶಿಕ್ಷಕಿ ಸುಧಾಮಣಿಅವರು ಹೊಂದಿರುವ ಮನೋಭಾವ ಉಳಿದ ಶಿಕ್ಷಕರಿಗೂ ಪ್ರೇರಣೆ ನೀಡುವಂತಿದೆ’ ಎಂದು ಹೇಳಿದರು.ಮುಖ್ಯಶಿಕ್ಷಕ ಅಖಂಡಪ್ಪ ಮಾಯಚಾರಿ ‘ಸರ್ಕಾರದೊಂದಿಗೆ ಶಿಕ್ಷಕರೂ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ’ ಎಂದರು. ಬಾಕ್ಸ್ ಸುದ್ದಿ (01) ಶಾಲಾ ಮಕ್ಕಳಿಂದಲೇ ಅನ್ನದೊರೆತಿದೆ. ಹೀಗಾಗಿ ಶಾಲೆಗೆ ದೇಣಿಗೆ ನೀಡಿದ್ದೇನೆ. ಹಳ್ಳಿಗಳ ಶಾಲೆಗಳು ಅಭಿವೃದ್ಧಿಯಾಗಬೇಕು ಸಮುದಾಯ ಕೈಜೋಡಿಸಿದರೆ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಽಽ ಜಯಶ್ರೀ ಬೂದಿಹಾಳ ದೇಣಿಗೆ ನೀಡಿದ ಶಿಕ್ಷಕಿಈ ವೇಳೆ ರಾಜಶೇಖರ್ ಶ್ಯಾಗೋಟಿ, ಶರ್ಪಗೌಡ ತೊಂಡಿಹಾಳ, ಪ್ರಕಾಶ ಮೇಟಿ, ಶರಣಪ್ಪ ಹರಿಜನ, ನಾಗ ರಾಜ ಕಂಟೆಪಾ ್ಪಗೌಡ್ರು, ಬಸವನಗೌಡ ನಾಗನ ಗೌಡ್ರು, ಬಸಮ್ಮ ಬಳಗೋಡ, ಶಬೀನಾಬೇಗಂ ನೂರ್ಬಾಸ್ ಸೇರಿ ಮತ್ತಿತ್ತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 