ಹಿರಿಯ ವಿದ್ವಾಂಸ ಡಾ. ಜೆ.ಎಂ.ನಾಗಯ್ಯ ಸಾಹಿತ್ಯದ ವಿಚಾರ ಸಂಕಿರಣ: ಗ್ರಂಥಗಳ ಲೋಕಾರೆ್ಣ ಇಂದು
Senior scholar Dr. J.M. Nagaiah's literary symposium: The world of books today
ಹಿರಿಯ ವಿದ್ವಾಂಸ ಡಾ. ಜೆ.ಎಂ.ನಾಗಯ್ಯ ಸಾಹಿತ್ಯದ ವಿಚಾರ ಸಂಕಿರಣ: ಗ್ರಂಥಗಳ ಲೋಕಾರೆ್ಣ ಇಂದು
ಧಾರವಾಡ 13: ಕನ್ನಡದ ಹಿರಿಯ ವಿದ್ವಾಂಸ, ಸಂಶೋಧಕ, ವಿಶ್ರಾಂತ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ ಅವರ ಸಾಹಿತ್ಯಾವಲೋಕನ ಕುರಿತ ಒಂದು ದಿನದ ವಿಚಾರ ಸಂಕಿರಣ ಮತ್ತು ಅವರ 4 ಗ್ರಂಥಗಳ ಲೋಕಾರೆ್ಣ ಸಮಾರಂಭ ರವಿವಾರ ನಗರದ ಕ.ವಿ.ವ.ಸಂಘದ ಡಾ.ಪಾಪು ಸಭಾಭವನದಲ್ಲಿ ಜರುಗಲಿದೆ.
ಕರ್ನಾಟಕ ವಿದ್ಯಾವರ್ಧಕ ಸಂಘ, ಹುಬ್ಬಳ್ಳಿಯ ಡಾ.ಜೆ.ಎಂ.ನಾಗಯ್ಯ ಟ್ರಸ್ಟ್ ಹಾಗೂ ಹೂವಿನಹಡಗಲಿಯ ಡಾ.ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಸಮಾರಂಭವನ್ನು ಸೆ.14 ರಂದು ಮುಂಜಾನೆ 10-30 ಗಂಟೆಗೆ ಹಂಪಿ ಕನ್ನಡ ವಿ.ವಿ. ಕುಲಪತಿ ಡಾ.ಡಿ.ವ್ಹಿ.ಪರಮಶಿವಮೂರ್ತಿ ಉದ್ಘಾಟಿಸುವರು.
ಬಂಡಿವಾಡ ಗೀರೀಶ ಆಶ್ರಮದ ಡಾ.ಎ.ಸಿ.ವಾಲಿ ಗುರೂಜಿ ಸಾನ್ನಿಧ್ಯದಲ್ಲಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಮಾಜಿ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅತಿಥಿಯಾಗಿ ಪಾಲ್ಗೊಳ್ಳುವರು. ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಡಾ. ಶಾಮಸುಂದರ ಕೋಟಿ ಹಾಗೂ ಹಿರಿಯ ಸಾಹಿತಿ ಡಾ.ಜೆ.ಎಂ.ನಾಗಯ್ಯ ಭಾಗವಹಿಸುವರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆವಹಿಸುವರು.
ವಿಚಾರ ಗೋಷ್ಠಿಗಳು : ‘ಡಾ. ಜೆ.ಎಂ. ನಾಗಯ್ಯ ಅವರ ಸಂಶೋಧನೆಯ ನೆಲೆ-ಬೆಲೆ’ ಎಂಬ ವಿಷಯದ ಮೊದಲ ವಿಚಾರಗೋಷ್ಠಿಯಲ್ಲಿ ಹಂಪಿ ಕ.ವಿ.ವಿ.ಯ ಡಾ.ವೆಂಕಟಗಿರಿ ದಳವಾಯಿ, ಧಾರವಾಡ ಕ.ವಿ.ವಿ.ಯ ಡಾ. ಮಲ್ಲಪ್ಪ ಬಂಡಿ ಹಾಗೂ ಬೆಳಗಾವಿ ರಾ.ಚೆ.ವಿ.ವಿ.ಯ ಡಾ. ಎಸ್.ಎಂ.ಗಂಗಾಧರಯ್ಯ ಮಾತನಾಡುವರು. ‘ಡಾ.ಜೆ.ಎಂ.ನಾಗಯ್ಯ ಅವರ ಸಾಹಿತ್ಯದ ವಿವಿಧ ನೆಲೆಗಳು’ ಎಂಬ ಎಂಬ ವಿಷಯದ 2ನೆಯ ಗೋಷ್ಠಿಯಲ್ಲಿ ಹಂಪಿ ಕ.ವಿ.ವಿ.ಯ ಡಾ.ಅಮರೇಶ ಯತಗಲ್ಲ, ಮೈಸೂರಿನ ಎಚ್.ದೇವರೆಡ್ಡಿ, ಬಳ್ಳಾರಿಯ ಡಾ.ಸಿ.ಎಂ.ವೀರಭದ್ರಯ್ಯ, ಗಜೇಂದ್ರಗಡದ ಡಾ.ಮಲ್ಲಿಕಾರ್ಜುನ ಕುಂಬಾರ ವಿಚಾರ ಮಂಡಿಸುವರು.
ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕನಕಪುರ ದೇಗುಲಮಠದ ಡಾ.ಚೆನ್ನಬಸವ ಸ್ವಾಮೀಜಿ, ವಿ.ಪ. ಸಭಾಪತಿ ಬಸವರಾಜ ಹೊರಟ್ಟಿ, ಹಂಪಿ ಕನ್ನಡ ವಿ.ವಿ. ಕುಲಪತಿ ಡಾ.ಡಿ.ವ್ಹಿ.ಪರಮಶಿವಮೂರ್ತಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಡಾ.ಜೆ.ಎಂ. ನಾಗಯ್ಯ ಅವರ 4 ಗ್ರಂಥಗಳು ಲೋಕಾರೆ್ಣಗೊಳ್ಳಲಿವೆ. ಸಂಜೆ 6 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಾನಪದ ವಿ.ವಿ. ಕುಲಪತಿ ಡಾ.ಟಿ.ಎಂ.ಭಾಸ್ಕರ ಉದ್ಘಾಟಿಸಲಿದ್ದು, ಹೂವಿನಹಡಗಲಿಯ ಡಾ. ಕರಿಶೆಟ್ಟಿ ರುದ್ರ್ಪ ಅಧ್ಯಕ್ಷತೆವಹಿಸುವರು. ಡಾ.ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು ವಿದ್ಯಾರ್ಥಿಗಳು ‘ಗಿರಿಜಾ ಕಲ್ಯಾಣ’ ದೊಡ್ಡಾಟ ಪ್ರಸ್ತುತಪಡಿಸುವರು.
ಬ್ಲರ್ಬ : ಪ್ರೊ.ಜೆ.ಎಂ.ನಾಗಯ್ಯ
ಕನ್ನಡ ವಾಙ್ಮಯದ ಸಂಶೋಧನೆ ಮತ್ತು ಶಾಸನಶಾಸ್ತ್ರದಲ್ಲಿ ಹೆಸರು ಮಾಡಿರುವ ಪ್ರೊ.ಜೆ.ಎಂ.ನಾಗಯ್ಯ ಅವರು ಈ ತನಕ 24 ಸ್ವತಂತ್ರ ಮತ್ತು 20 ಸಂಪಾದಿಕ ಕೃತಿಗಳನ್ನು ಹೊರತಂದಿದ್ದು, ಸುಮಾರು 80ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.13 ಪಿ.ಎಚ್‌ಡಿ. ಹಾಗೂ 6 ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ 48 ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ್ದು, ಕರ್ನಾಟಕ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 