ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರಯ್ಯ ಅವರಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ
Senior freedom fighter Chandrashekariah felicitated by the DC
ಧಾರವಾಡ ಆ.14: ದೇಶದ ಸ್ವಾತಂತ್ರ್ಯಕ್ಕಾಗಿ ಜೈಲು ವಾಸ ಅನುಭವಿಸಿದ್ದ ನರೇಂದ್ರ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ 97 ವರ್ಷದ ಚಂದ್ರಶೇಖರಯ್ಯ ಗುಡ್ಡದಮಠ ಅವರನ್ನು ಇಂದು (ಆ.14) ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನರೇಂದ್ರ ಗ್ರಾಮಕ್ಕೆ ತೆರಳಿ, ಗೌರವಿಸಿ ಸನ್ಮಾನಿಸಿದರು.
ಭಾರತದ ಸ್ವಾತಂತ್ರ್ಯ ಚಳವಳಿಯ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಚಂದ್ರಶೇಖರಯ್ಯ ಗುಡ್ಡದಮಠ ಅವರು ಆ ಕಾಲದಲ್ಲಿ ಬ್ರಿಟಿಷರ ದಮನ, ಜೈಲು ಜೀವನ, ಹೋರಾಟದ ತೀವ್ರ ಕ್ಷಣಗಳನ್ನು ಅನುಭವಿಸಿದ್ದ ತಮ್ಮ ನೆನಪುಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಮೆಲಕು ಹಾಕಿದರು.
ತಮ್ಮ ಹದಿನೆಳನೇಯ ವಯಸ್ಸಿನಲ್ಲಿ ಗರಗ, ನರೇಂದ್ರ, ತೇಗೂರ, ಕಿತ್ತೂರ ಭಾಗದ ಅನೇಕ ಹೋರಾಟಗಾರರೊಂದಿಗೆ ಸೇರಿ ಶಸ್ತ್ರಗಳ ರಕ್ಷಣೆ, ಹೋರಾಟಗಾರರಿಗೆ ಊಟ, ನೀರು ಕೊಡುವುದು, ಬ್ರಿಟಿಷರ ಚಲನವಲನದ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೆ, ಒಮ್ಮೆ ಧಾರವಾಡದಲ್ಲಿ ಜರುಗಿದ ಸ್ವಾತಂತ್ರ್ಯ ಹೋರಾಟದ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದಾಗ, ಬ್ರಿಟಿಷರ್ ಲಾಠಿ ಏಟಿಗೆ ಕಾಲು ಮುರಿದುಕೊಂಡೆ, ಆಗ ಬ್ರಿಟಿಷ ಪೊಲೀಸರೇ ಧಾರವಾಡ ಸಬ್ ಜೈಲಿಗೆ ಹಾಕಿದರು. ಸುಮಾರು ತಿಂಗಳ ಕಾಲ ಜೈಲಿನಲ್ಲಿ ಇದ್ದೆ ಎಂದು ಚಂದ್ರಶೇಖರಯ್ಯ ಅವರು ನೆನಪಿಸಿಕೊಂಡರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಚಂದ್ರಶೇಖರಯ್ಯ ಗುಡ್ಡದಮಠ ಅವರ ಆರೋಗ್ಯ ವಿಚಾರಿಸಿ, ಹೋರಾಟದ ಅನುಭವಗಳನ್ನು ಆಲಿಸಿ, ನಿಮ್ಮನ್ನು ನೋಡುವುದೇ ನಮಗೆ ಖುಷಿ. ನಿಮ್ಮಂತಹವರ ತ್ಯಾಗ ಮತ್ತು ದೇಶಭಕ್ತಿ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು. ಯುವಕರು ನಿಮ್ಮ ಜೀವನ ಪಾಠವನ್ನು ಕಲಿಯಬೇಕು ಎಂದು ಹೇಳಿದರು.
ಅದೇ ರೀತಿ ಸರ್ಕಾರದ ಸೌಲಭ್ಯಗಳು ದೊರಕುತ್ತಿರುವ ಬಗ್ಗೆ ವಿಚಾರಿಸಿದರು. ಸರ್ಕಾರದಿಂದ ದೊರೆಯುವ ಆರೋಗ್ಯದ ಸೌಲಭ್ಯಗಳನ್ನು ಪಡೆಯಿರಿ ಎಂದು ಹೇಳಿದರು.
ಚಂದ್ರಶೇಖರಯ್ಯ ಗುಡ್ಡದಮಠ ಅವರಿಗೆ ಸಿಹಿ ತಿನ್ನಿಸಿ, ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಡಾ. ಡಿ.ಎಚ್.ಹೂಗಾರ, ಚಂದ್ರಶೇಖರಯ್ಯ ಗುಡ್ಡದಮಠ ಅವರ ಪುತ್ರಿ ನಾಗರತ್ನ, ಪುತ್ರ ಬಸವರಾಜ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 