ಸಿನಿಮಾ, ಕಿರುತೆರೆಯ ಹಿರಿಯ ನಟ ಶಿವಕುಮಾರ್ ಆರಾಧ್ಯ ಸಿ.
Senior film and television actor Shivakumar Aradhya C
ಲೋಕದರ್ಶನ ವರದಿ
ತುಮಕೂರು 05 : ಕನ್ನಡ ಸಿನೇಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟ ಶಿವಕುಮಾರ್ ಆರಾಧ್ಯ ಸಿ. ಹಾಸ್ಯ ಪಾತ್ರಗಳಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಅವರು ಇಂದಿಗೂ ತಮ್ಮ ಕಲಾ ಸೇವೆಯನ್ನು ಸಲ್ಲಿಸುತ್ತಾ ಕನ್ನಡಿಗರ ಮನ ಗೆದ್ದಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಹೊಸಹಳ್ಳಿ ಚಂದ್ರಶೇಖರ ಆರಾದ್ಯ ಹಾಗೂ ಶಿವಮ್ಮ ದಂಪತಿಗಳ ಮಗನಾಗಿ 13 ಜೂನ್ 1960ರಲ್ಲಿ ಜನಿಸಿದರು. ಯಲಹಂಕ ಎಸ್ಕಾರ್ಟ್ ಕಾರ್ಖಾನೆಯಲ್ಲಿ 1978ರಿಂದ 2000 ತನಕ ಉದ್ಯೋಗ ಮಾಡಿ, ಸ್ವಯಂ ನಿವೃತ್ತಿ 2000ದಲ್ಲಿ ಪಡೆದುಕೊಂಡರು.
ಬಳಿಕ ಕಳೆದ 40 ವರ್ಷಗಳಿಂದ ರಂಗಭೂಮಿ, ಕಿರುತೆರೆ, ಸಿನಿಮಾಗಳಲ್ಲಿ ನಿರಂತರ ಅಭಿನಯಿಸುತ್ತಾ ಬಂದಿದ್ದಾರೆ. ಹಲವಾರು ನಾಟಕಗಳಲ್ಲಿ, 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ, ಟಿವಿ ದಾರಾವಾಹಿಯ ಸಾವಿರಕ್ಕೂ ಮಿಕ್ಕಿ ಎಪಿಸೋಡ್‌ಗಳಲ್ಲಿ ಪಾತ್ರ ಮಾಡಿ ಜನ ಮನ್ನಣೆ ಗಳಿಸಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳ ವಿವಿಧ ಪಾತ್ರಗಳಲ್ಲಿ ಡಾ.ರಾಜಕುಮಾರ್, ಕಲ್ಯಾಣ ಕುಮಾರ್, ಎಂ.ಪಿ. ಶಂಕರ್, ರಾಜೇಶ್, ಲೋಕೇಶ್, ಲೋಕನಾಥ್, ಶ್ರೀನಿವಾಸಮೂರ್ತಿ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಶಿವರಾಮಣ್ಣ, ಉಮೇಶಣ್ಣ, ರಮೇಶ್ ಭಟ್, ಭಾರತಿ ವಿಷ್ಣುವರ್ಧನ್, ಜಯಂತಿ, ಗಿರಿಜಾಲೋಕೇಶ್,
ಮುಂತಾದ ಖ್ಯಾತ ನಟರಲ್ಲದೆ ಶಿವರಾಜ್ ಕುಮಾರ್, ದರ್ಶನ್, ಉಪೇಂದ್ರ, ಗಣೇಶ್, ಶರಣ್, ದುನಿಯಾ ವಿಜಯ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ಶ್ರೀನಗರ ಕಿಟ್ಟಿ, ಯೋಗಿ ಮುಂತಾದ ನಾಯಕ ನಟರೊಡನೆ ಅಭಿನಯಿಸಿರುವುದು ಇವರ ಹೆಗ್ಗಳಿಕೆಯನ್ನು ತೋರಿಸುತ್ತದೆ. ದಿಗ್ವಿಜಯ, ಪ್ರಜಾರಾಜ್ಯ, ಹಳ್ಳಿಮುಖ, ಚೇರ್ಮನ್, ದೂರದರ್ಶನ, ಲೇಡಿಸ್ ಬಾರ್, ಮೂರ್ಖತೆ ನಂಜುಂಡಿ, ವಿಕ್ಟರಿ-2, ನಾವಿಕ, ಪರಾರಿ ಗಾಡ್‌ಫಾದರ್, ಸೂಪರ್ ರಂಗ, ಆಟೋ ಶಂಕರ್, ಸಾರಥಿ, ವಂಶೋದ್ಧಾರಕ, ಅಮರಾವತಿ, ಜಟ್ಟಿ, ಬ್ಯೂಟಿಫುಲ್ ಮನಸುಗಳು, ತಿರುಪತಿ ಎಕ್ಸ್‌ಪ್ರೆಸ್, ಶಿವಲಿಂಗ, ಮೈದ್ರಿ ಶಶಿಕಲಾ, ವೈಫ್ ಆಫ್ ಪುಟ್ಟರಾಜು, ಅಮ್ಮಾ ಐ ಲವ್ ಯೂ,
ಸಿದ್ದಗಂಗಾ, ಜ್ಞಾನಜ್ಯೋತಿ ಸಿದ್ಧಗಂಗಾ, ಮಹಾಶಕ್ತಿ ಮಹಾಮಾಯೆ, ಸಚ್ಚಿ, ನಟ ಶಕ್ತಿ, ಟೈಗರ್ ಪದ್ಮನಿ, ಮನಸುಗಳ ಮಾತು, ಮಧರು ಕೈವಾರ, ತಾತಯ್ಯ, ಅಂಬೇಡ್ಕರ್, ಗುರುಕುಲ, ಪರಾರಿ ಆದ್ಯ, ಕಾಲಜ್ಞಾನ, ಲಕ್ಷ್ಯ, ಸಿದ್ಧ ಲಿಂಗು, ಅರಳಿದ ಹೂವುಗಳು, ಹಳ್ಳಿ ಹೈಕಳ ಪ್ಯಾಟೆ, ಲೈಫು, ಧೀರಂ ಸರ್ಕಾರಿ ಶಾಲೆ, ಅಮಾಸ, ಆಚಾರ್ಯ, ಶ್ರೀಶಂಕರ, ಪ್ರೇಮವ್ಯೂಹ, ಅವನೊಬ್ಬನೇ, ಕಾಳಿದಾಸ, ಕನ್ನಡ ಮೇಷ್ಟ್ರು, ವಜ್ರಾಸ್ತ್ರ, ತ್ಯಾಗಮಯಿ, ನಮ್ಮೂರಲ್ಲಿ ರಾಜ ರಾಣಿ, ಅಭಿಮನ್ಯು ಇನ್ನೂ ಅನೇಕ ಸಿನೇಮಾಗಳಲ್ಲಿ ನಟಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಕಾವೇರಿ ಧಾರಾವಾಹಿಯ ಪೊಲೀಸ್ ಆಗಿ, ವಠಾರ ಧಾರಾವಾಹಿಯ ಕ್ಯಾಸ್ಸೆಟ್ ಕೃಷ್ಣಯ್ಯ ಆಗಿ,
ಚಿ. ಸೌ, ಸಾವಿತ್ರಿ ಧಾರಾವಾಹಿಯಲ್ಲಿ ಸಾವಿತ್ರಿಯ ತಂದೆ ಸೂರ್ಪನಾಗಿ, ದೇವಿ ಧಾರಾವಾಹಿಯಲ್ಲಿ ಚೆನ್ನಿಯ ತಂದೆ ಕುಡುಕ ಬಸಯ್ಯನಾಗಿ, ಉಘೇ ಉಘೇ ಮಾದೇಶ್ವರ ಧಾರವಾಹಿಯಲ್ಲಿ ಕುರುಡಿ ಗೌರಿಯ ತಂದೆ ಬಿದರಯ್ಯನಾಗಿ, ಜೀವನದಿ ಯಲ್ಲಿ ಪತ್ರಕರ್ತನಾಗಿ, ಕಾದಂಬರಿ ಕಣಜ ಮತ್ತು ಸರಿಗಮಪದನಿ ಗಳಲ್ಲಿ ನಾಯಕಿಯ ತಂದೆಯಾಗಿ, ಹಲವಾರು ವಿವಿಧ ಪಾತ್ರಗಳಲ್ಲಿ ಮಿಂಚಿದ್ದಾರೆ. ಇವರು ಕರ್ನಾಟಕ ವೀರಶೈವ ಅರ್ಚಕರು ಮತ್ತು ಪುರೋಹಿತರ ಸಂಘದ ರಾಜ್ಯ ನಿರ್ದೇಶಕರು, ಚಲನಚಿತ್ರ ಸೆನ್ಸಾರ್ ಮಂಡಳಿಯ ಮಾಜಿ ಸದಸ್ಯರಾಗಿದ್ದಾರೆ. ಇವರ ಸಾಧನೆಗೆ ಪ್ರತಿಷ್ಠಿತ ಆರ್ಯಭಟ, ಪುನೀತ್ ಸೇವಾರತ್ನ, ಕಲಾಕಿರಣ, ಕಾಯಕಶ್ರೀ, ಕರ್ನಾಟಕ ವಿಕಾಸ ರತ್ನ, ಪಂಪ ಸದ್ಭವನಾ ಪ್ರಶಸ್ತಿಗಳು ಲಭಿಸಿವೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 