ಹಿರಿಯ ನಾಗರಿಕರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು-ಎಸಿ ಶುಭಂ ಶುಕ್ಲಾ

ಹಿರಿಯ ನಾಗರಿಕರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು-ಎಸಿ ಶುಭಂ ಶುಕ್ಲಾ Senior citizens should be treated with respect - AC Shubham Shukla


ಹಾವೇರಿ 11: ಹಿರಿಯ ನಾಗರಿಕರೊಂದಿಗೆ ಗೌರದಿಂದ ನಡೆದುಕೊಳ್ಳಬೇಕು. ಹಿರಿಯ ನಾಗರಿಕರಿಗೆ ಪ್ರತ್ಯೇಕ ಕಾನೂನು ಇದ್ದು, ಹಿರಿಯ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸವಣೂರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಅವರು ಹೇಳಿದರು. 

ಸವಣೂರ ಪಟ್ಟಣದ  ವಿ.ಕೃ.ಗೋಕಾಕ ಭವನದಲ್ಲಿ ಸೋಮವಾರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸವಣೂರು ತಾಲೂಕು ಆಡಳಿತ, ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸವಣೂರು ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ರಾಜ್ಯ ಕ್ರಿಯಾ ಯೋಜನೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ತಹಶೀಲ್ದಾರ ರವಿ ಕೊರವರ ಅವರು ಮಾತನಾಡಿ, ಸಮಾಜದಲ್ಲಿ ಗುರು-ಹಿರಿಯರಿಗೆ ಗೌರವ ಕೊಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.  

  ಡಾ.ಲಕ್ಷ್ಮಣ ಶಿವಳ್ಳಿ  ಅವರು  ಹಿರಿಯ ನಾಗರಿಕರಲ್ಲಿ ಕಂಡುಬರುವ ವಯೋಸಹಜ ಕಾಯಿಲೆ ಮತ್ತು ಚಿಕಿತ್ಸೆ ಬಗ್ಗೆ ಹಾಗೂ ಯೋಗ, ದ್ಯಾನ, ಯೋಗಮುದ್ರೆ, ಪ್ರಾಣಾಯಾಮಗಳ ಕುರಿತು ಮಾಹಿತಿ ನೀಡಿದರು.     

ಪಿಎಸ್‌ಐ ರಂಗನಾಥ್  ಅವರು ಸೈಬರ್ ಕ್ರೈಂ, ಡಿಜಿಟಲ್ ಅರೆಸ್ಟ್‌ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.   ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಆಶು ನದಾಫ್  ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  

ಕಾರ್ಯಕ್ರಮದಲ್ಲಿ ಜೆ.ಕೆ.ಪಮ್ಮಾರ, ಶ್ರೀಮತಿ ಉಮಾ, ಪರಶುರಾಮ ಈಳಿಗೇರ, ಪಿಎಂ.ಅರಗೋಳ, ರಾಮಣ್ಣ ಅಗಸರ, ಸಿ.ಬಿ.ಪಾಟೀಲ, ಆರ್‌.ಆರ್‌.ಅರ್ಕಸಾಲಿ, ಎಸ್‌.ಬಿ.ಬಿಷ್ಠನಗೌಡ್ರ, ಕೆರಿಯವರ  ಇತರರು ಉಪಸ್ಥಿತರಿದ್ದರು.