ಹಿರಿಯ ನ್ಯಾಯವಾದಿ ಗವಿಸಿದ್ದಪ್ಪ.ವಿ.ಕೋರಿ ಹಾಗೂ ಅನುಸೂಯಾ.ಗ.ಕೋರಿ ಅವರಿಗೆ ಕರ್ನಾಟಕ ಭೂಷಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
Senior advocates Gavisiddappa.V. Kori and Anusuya.G. Kori were presented with the Karnataka Bhushan
ಲೋಕದರ್ಶನ ವರದಿ
ವಿಜಯಪುರ 27 : ಜಿಲ್ಲೆಯ ಖ್ಯಾತ ಹಿರಿಯ ನ್ಯಾಯವಾದಿ.ನಿವೃತ ಡಿಸಿಸಿ ಬ್ಯಾಂಕ್ ವ್ಯಸ್ಥಾಪಕರಾದ ಗವಿಸಿದ್ದಪ್ಪ.ವಿ.ಕೋರಿ ಹಾಗೂ ಅವರ ಧರ್ಮ ಪತ್ನಿ ಅನಸೂಯಾ.ಗ.ಕೋರಿ ಅವರಿಗೆ ಬೆಂಗಳೂರಿನ ಸರ್ವೇಜನ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ (ರಿ) ಬೆಂಗಳೂರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವಿಜಯಪುರ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಜರುಗಿದ ಸಾಂಸ್ಕೃತಿಕ ಜನಪದ ವೈಭವ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅದ್ದೂರಿ ವೇದಿಕೆಯಲ್ಲಿ ಖ್ಯಾತ ಹಿರಿಯ ನ್ಯಾಯವಾದಿ. ಕೊಪ್ಪಳ ಜಿಲ್ಲಾ ನಿವೃತ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಗವಿಸಿದ್ದಪ್ಪ. ವಿ.ಕೋರಿ ಹಾಗೂ ಅವರ ಧರ್ಮ ಪತ್ನಿ ಅನುಸೂಯಾ.ಗ.ಕೋರಿ ಅವರನ್ನು ಸಾಮಜಿಕ.ಸಹಕಾರಿ. ಧಾರ್ಮಿಕ. ನ್ಯಾಯಾಂಗ ಕ್ಷೇತ್ರದ ಅಪಾರ ಸೇವೆ ಪರಿಗಣಿಸಿ ದಂಪತಿಗಳನ್ನು "ಕರ್ನಾಟಕ ಭೂಷಣ" ರಾಷ್ಟ್ರೀಯ ಪ್ರಶಸ್ತಿಯನ್ನು. ವಿಶ್ವಗುರು ಬಸವಣ್ಣ ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮಳ ಸ್ಮರಣಿಕೆ. ಪ್ರಶಸ್ತಿ ಪತ್ರ ಶಾಲು ಹೊದಿಸಿ ಫಲಪುಷ್ಪ ವಿತರಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸರ್ವೇಜನ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ನಾ ಅಧ್ಯಕ್ಷೆ ಲಕ್ಷ್ಮಿತಾ ಗಂಗಾವತಿ.ಯುವ ಧುರೀಣ ರಾಜು ಕಂಕಣವಾಡಿ. ನ್ಯಾಯವಾದಿ ದಾನೇಶ್ ಅವಟಿ ಮುಂತಾದವರು ಉಪಸ್ಥಿತರಿದ್ದು ಪ್ರಶಸ್ತಿ ಪುರಸ್ಕೃತ ದಂಪತಿಗಳನ್ನು ಅಭಿನಂದಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 