ವಕೀಲರ ಸಂಘಗಳಿಗೆ ಮೂಲ ಸೌಕರ್ಯ ಒದಗಿಸಲು ಬದ್ಧ: ಎಸ್.ಟಿ.ಗೌಡ
Senior advocate Srinivas T. Gowda sought the vote of the State Bar Council.
ಲೋಕದರ್ಶನ ವರದಿ
ರಾಜ್ಯ ವಕೀಲರ ಪರಿಷತ್ ಮತಯಾಚಿಸಿದ ಹಿರಿಯ ವಕೀಲರ ಶ್ರೀನಿವಾಸ್ ಟಿ.ಗೌಡ
ಗಂಗಾವತಿ 05: ವಕೀಲರ ಸಂಘಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ಟೋಲ್ ವಿನಾಯಿತಿ, ಡೆತ್ ಅಂಡ್ ಅಕ್ಸಿಡೆಂಟ್ ಬೆನಿಫಿಟ್ 18 ಲಕ್ಷಕ್ಕೆ ಏರಿಸುವುದು, ನ್ಯಾಯಾಧೀಶರ ಹುದ್ದೆ ಆಕಾಂಕ್ಷಿಗಳಿಗೆ ಉಪನ್ಯಾಸ, ವಿಶ್ರಾಂತಿ ಗೃಹ ನಿರ್ಮಾಣ ಸೇರಿ ಹತ್ತು ಹಲವು ಕೆಲಸ ಮಾಡಲು ಉತ್ಸುಕನಾಗಿದ್ದು ಮುಂಬರುವ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಅದ್ಯಕ್ಷೀಯ ಸ್ಥಾನಕ್ಕೆ ಸ್ಪಧಿಸಲಿರುವ ನನಗೆ ಮತ ನೀಡಿ ಭಾರಿ ಅಂತರದಲ್ಲಿ ಗೆಲ್ಲಿಸಿ ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಶ್ರೀನಿವಾಸ್ ಟಿ.ಗೌಡ ಮನವಿ ಮಾಡಿದರು.
ಅವರು ನಗರದ ನ್ಯಾಯಾಲಯದಲ್ಲಿ ಮಾರ್ಚ್ ತಿಂಗಳಲ್ಲಿ ಜರುಗಲಿರುವ ರಾಜ್ಯ ವಕೀಲರ ಪರಿಷತ್ ಚುನಾವಣೆ ಹಿನ್ನಲೆಯಲ್ಲಿವಕೀಲರಲ್ಲಿ ಮತಯಾಚಿಸಿ ಮಾತನಾಡಿದರು. ಗ್ರಾಮೀಣ ಭಾಗದ ವಕೀಲರಿಗು ಉತ್ತಮ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುಲಾಗುವುದು, ಈಗಾಲೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಹಾಗೂ ಉತ್ತರ ಕರ್ನಾಟಕದ 80 ವಕೀಲರ ಸಂಘಗಳಿಗೆ ಭೇಟಿ ನೀಡಿ ಮತಯಾಚಿಸಿದ್ದು, ಸ್ಪಂದನೆ ಉತ್ತಮವಾಗಿದೆ, ವಕೀಲರ ಸಂಘದ ಪದಾಧೀಕಾರಿಗಳು, ಸ್ನೇಹಿತರು ನಮ್ಮ ಗೆಲವಿಗೆ ಸಹಕರಿಸಿಲು ಸಿದ್ಧರಿದ್ದು, ಎಲ್ಲರೂ ಒಕ್ಕೋರಲಿನಿಂದ ಮತ ಹಾಕಿ ಅಬೂತಪೂರ್ವ ಗೆಲುವು ದಾಖಲಿಸಲು ನೆರವಾದಲ್ಲಿ ತಮ್ಮ ಕಾರ್ಯಗಳಿಗೆ ಹಗಲಿರುಳು ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು.
ಆ ಸಂದರ್ಭದಲ್ಲಿ ಗಂಗಾವತಿ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಂ.ಮಂಜುನಾಥ್, ವಕೀಲರಾದ ವೆಂಕಟೇಶ್ ಡ್ಯಾಗಿ. ತಿಮ್ಮನಗೌಡ, ರಾಮಣ್ಣ, ಉಮಾಶಂಕರ್, ರಾಜೇಶ್, ಪರಶುರಾಮ. ವಿಜಯ. ಮಹಾಂತೇಶ. ಶಿವಕುಮಾರ್ ಉಮಾ ರಮೇಶ್ ಇಂಗಳಗಿ, ರಾಜೇಶ್ವರಿ ವಕೀಲರು, ಹನುಮಂತಪ್ಪ ವಕೀಲರು ಸೇರಿದಂತೆ ಇತರರಿದ್ದರು.
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್ 