ಬೆಳಗಾವಿ: ಶ್ರೀ. ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ(ರಿ), ಬೆಳಗಾವಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಳಗಾವಿ ಇವರ ಸಹಯೋಗದೊಂದಿಗೆ ಶ್ರೀ. ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ, ಡಬಲ್ ರೋಡ ಶ್ರೀನಗರ, ಬೆಳಗಾವಿಯಲ್ಲಿ ಹಿರಿಯ ನಾಗರಿಕರ ಹುಟ್ಟು ಹಬ್ಬ ಆಚರಣೆಯನ್ನು ಆಚರಿಸಲಾಯಿತು.
ಕೇಂದ್ರದ ಸದಸ್ಯರಾದ ಶ್ರೀ. ಪಿ. ಕೆ. ಪಾಟೀಲ 70ನೇ, ಶ್ರೀ. ಎನ್. ಎನ್. ಪಾಟೀಲ 69ನೇ ಹಾಗೂ ಶ್ರೀ. ಜಿ. ಹೆಚ್. ಪಾದಗಟ್ಟಿ 75ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಚರಿಸಲಾಯಿತು. ನಂತರ ತಮ್ಮ ಸೇವಾ ನಿವೃತ್ತಿ ಜೀವನದ ಬಗ್ಗೆ ಮತ್ತು ಶ್ರೀ. ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಅದರಂತೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ. ಶ್ರೀಕಾಂತ ಗು ಹಿರೇಮಠರವರು ಕೇಂದ್ರದಲ್ಲಿ ಸದಸ್ಯರಿಗೆ ನೀಡುತ್ತಿರುವಂತಹ ಸೌಲಭ್ಯಗಳ ಬಗ್ಗೆ ಹಾಗೂ ಹಿರಿಯ ನಾಗರಿಕರು ತಮ್ಮ ಸೇವಾ ನಿವೃತ್ತಿ ಹೊಂದಿದ ನಂತರ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದೇ ಮನೋಸ್ಥೈರ್ಯ ಹಾಗೂ ಕ್ರೀಯಾಶೀಲತೆಯಿಂದ ನಗು-ನಗುತ್ತಾ ತಮ್ಮ ಜೀವನವನ್ನು ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಕಳೆಯ ಬೇಕೆಂದು ಹೇಳಿದರು. ನಂತರ ಹಿರಿಯ ನಾಗರಿಕರಿಗಾಗಿ ಇರುವ ಸಕರ್ಾರದ ಸೌಲಭ್ಯಗಳ ಬಗ್ಗೆ, ಹಿರಿಯ ನಾಗರಿಕರಿಗಾಗಿ ಜಾರಿಗೆ ಬಂದ ಪಾಲಕರ ಪೋಷಣೆ ಹಾಗೂ ರಕ್ಷಣಾ ಕಾಯ್ದೆ-2007ರ ಬಗ್ಗೆ ಹಾಗೂ ಹಿರಿಯ ನಾಗರಿಕರಾದವರು ಇವತ್ತಿನ ಯುವ ಪೀಳಿಗೆಗೆ ಮಾರ್ಗದರ್ಶನದ ಅವಶ್ಯಕತೆಯಿದ್ದು ತಮ್ಮ ಸಲಹೆ ನೀಡಬೇಕೆಂದು ಹಾಗೂ ಎಲ್ಲರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುಬೇಕೆಂದು ಹೇಳಿದರು.
ಈ ಕಾರ್ಯಕ್ರಮವನ್ನು ಕೇಂದ್ರದ ಆಪ್ತಸಮಾಲೋಚಕರಾದ ಮಹಾವೀರ ಪಾ ಘುಳನ್ನವರ ನಿರೂಪಿಸಿದರು. ಕೇಂದ್ರದ ಸುನಿತಾ ಎಸ್ ಹಿರೇಮಠ ಸ್ವಾಗತಿಸಿದರು ಹಾಗೂ ಪರಶುರಾಮ ಗುರಪ್ಪಗೋಳ ವಂದನೆಗಳನ್ನು ಸಲ್ಲಿಸಿದರು. ಅದರಂತೆ ಶ್ರೀ. ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಸಿಬ್ಬಂದಿಗಳಾದ ಸರಿತಾ ಅಜಪ್ಪಗೋಳ, ಎಸ್. ಎಮ್. ಡೊಂಗರೆ ಹಾಗೂ ಎ. ಕೆ. ಬಂಗೆನ್ನವರ ಹಾಜರಿದ್ದರು ಮತ್ತು ಕೇಂದ್ರದ 63 ಜನ ಹಿರಿಯ ನಾಗರಿಕರು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರವೆರಿಸಲಾಯಿತು.