ಆಧುನಿಕ ಕಬ್ಬಿನ ಬೆಳೆಯ ವಿಚಾರ ಸಂಕಿರಣ
Seminar on Modern Sugarcane Cropping
ಮಾಂಜರಿ 23: ಶಿವಶಕ್ತಿ ಶುಗರ್ಸ ಲಿ, ಸೌಂದತ್ತಿ, ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಹಾಗೂ ಯು.ಪಿ.ಎಲ್. ಕಂಪನಿಯ ಸಹಯೋಗದಲ್ಲಿ ಬುಧವಾರದಂದು ರೈತರ ಕಬ್ಬಿನ ಇಳುವರಿ ಹೆಚ್ಚಿಸುವ ಸಲುವಾಗಿ ರಾಯಬಾಗ ತಾಲೂಕಿನ ಸೌಂದತ್ತಿ ಗ್ರಾಮದ ಸುಗಂಧಾ ದೇವಿ ಮಂದಿರದ ಸಮುದಾಯ ಭವನದಲ್ಲಿ ಆಧುನಿಕ ಕಬ್ಬಿನ ಬೆಳೆಯ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು.
ರೈತರ ಸಭೆಯಲ್ಲಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರಖಾನೆಯ ಉಪಾಧ್ಯಕ್ಷ ತಾತ್ಯಾಸಾಬ ದಾದು ಕಾಟೆ ಮತ್ತು ಆಡಳಿತ ಮಂಡಳಿಯ ಸದಸ್ಯ ಮಲ್ಲಪ್ಪಾ ಮೈಶಾಳೆ ಇವರ ಉಪಸ್ಥಿತಿಯಲ್ಲಿ ಎರಡು ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ವಿಭಾಗದ ಮಾರ್ಗದರ್ಶನ ಹಾಗೂ ಯು.ಪಿ.ಎಲ್.ಕಂಪನಿಯ ಉತ್ಪನ್ನಗಳ ಮತ್ತು ಕಬ್ಬಿನಲ್ಲಿ ಆಧುನಿಕ ಕೃಷಿಯ ತಂತ್ರಜ್ಞಾನ ಮಾಹಿತಿಯನ್ನು ನೀಡಲಾಯಿತು.
ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಬಿ.ಖಂಡಗಾಂವೆ ಇವರು ಮಾತನಾಡಿ ರೈತರ ಕಬ್ಬಿನ ಕೃಷಿಯಲ್ಲಿ ಹೆಚ್ಚಿನ ಇಳುವರಿ ಯಾವ ರೀತಿ ಪಡೆಯಬೇಕು. ಇಳುವರಿಗಾಗಿ ಕಬ್ಬಿನ ಮರಿಗಳ ಸಂಖ್ಯೆ ನಿರ್ವಹಣೆ ಮೇಲೆ ಉತ್ಪಾದನೆ ಅವಲಂಬನೆಯಾಗಿದೆ. ಇದಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ಮತ್ತು ಕೀಟ ರೋಗಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಯು.ಪಿ.ಎಲ್. ಕಂಪನಿಯ ರಾಜ್ಯದ ಮುಖ್ಯಸ್ಥರಾದ ಶ್ರೀ ಶ್ರೀನಾಥ ಎಚ್.ಎಸ್. ಮಾತನಾಡಿ ಅವರು ತಮ್ಮ ಕಂಪನಿಯ ಉತ್ಪನ್ನಗಳ ಮಾಹಿತಿ ಮತ್ತು ಅದರ ಬಳಕೆಯಿಂದ ಕಬ್ಬಿನ ಇಳುವರಿ ಹೆಚ್ಚಿಸುವಲ್ಲಿ ಆಗುವ ಲಾಭಗಳ ಬಗ್ಗೆ ತಿಳಿಸಿ ಕೊಟ್ಟರು.
ಎರಡು ಸಕ್ಕರೆ ಕಾರಖಾನೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಹಿರೇಮಠ ಹಾಗೂ ಶಿವಶಕ್ತಿ ಕಾರಖಾನೆಯ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ಮೂಡಲಗಿ ಅವರು ಮಾತನಾಡಿ ಎರಡು ಸಕ್ಕರೆ ಕಾರಖಾನೆಗಳಿಂದ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಕಬ್ಬು ಅಭಿವೃದ್ಧಿ ಯೋಜನೆಗಳು ಮತ್ತು ಸೌಲಭ್ಯಗಳನ್ನು ರೈತರಿಗೆ ನೀಡಲಾಗುತ್ತಿದೆ. ಹಾಗೂ ಸಕ್ಕರೆ ಕಾರಖಾನೆಯ ಕಿಸಾನ ಬಜಾರ ಮುಖಾಂತರ ಉತ್ತಮ ಗುಣಮಟ್ಟದ ಕಡಿಮೆ ದರದಲ್ಲಿ ರಸಗೊಬ್ಬರ, ಕಬ್ಬಿನ ಬೀಜ ಮತ್ತು ಕಬ್ಬು ಸಸಿ ನೀಡಲಾಗುತ್ತಿದ್ದು, ಯೋಜನೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಕಾರ್ಖಾನೆ ಕಿಸಾನ ಬಜಾರ ವ್ಯವಸ್ಥಾಪಕ ರಾಹುಲ ಇಚಲಕರಂಜೆ, ಕಬ್ಬು ಅಭಿವೃದ್ಧಿ ಮೇಲ್ವಿಚಾರಕ ಸಚಿನ ಮೋಪಗಾರ, ಚಿದಾನಂದ, ಜಕಾತೆ ಕಬ್ಬು ಮೇಲ್ವಿಚಾರಕ ಎ.ಆರ್.ಪಾಟೀಲ, ಎಸ್.ಎಸ್.ಗುಂಡಕಲ್ಲೆ, ರಾಹುಲ ಬಸ್ತವಾಡೆ, ಎಸ್.ಎಸ್.ಬಾಪಕರ ಹಾಗೂ ಎರಡು ಸಕ್ಕರೆ ಕಾರಖಾನೆಯ ಸಿಬ್ಬಂದಿಯವರು ಗ್ರಾಮದ ರೈತರಾದ ಬಾಜಿರಾವ ಜನಾಜ, ದಶರಥ ಕಾಟೆ, ಚಂದ್ರಕಾಂತ ಸಾಂಗ್ಲೆ, ಶಾಂತಿನಾಥ ಎಮ್. ಪಾಟೀಲ, ಪ್ರಕಾಶ ಮಿರ್ಜೆ, ಅಪ್ಪಾಸಾಬ ಮೈಶಾಳೆ ಹಾಗೂ ಇನ್ನಿತರ ಗ್ರಾಮದ ಹಿರಿಯರು ಹಾಜರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 