ದುಷ್ಟರಿಂದ ರಕ್ಷಿಸಿಕೊಳ್ಳಲು ಕರಾಟೆಯಂತಹ ಆತ್ಮರಕ್ಷಣಾ ಮಹಿಳೆಯರಿಗೆ ಅತೀ ಅವಶ್ಯವಿದೆ: ಓಲೇಕಾರ
ಲೋಕದರ್ಶನ
ವರದಿ
ಬ್ಯಾಡಗಿ 11:
ವಿಕೃತ ಮನಸ್ಸಿನ ವ್ಯಕ್ತಿಗಳಿಂದ ರಕ್ಷಿಸಿಕೊಳ್ಳಲು ಕರಾಟೆಯಂತಹ ಆತ್ಮರಕ್ಷಣಾ ಮಹಿಳೆಯರಿಗೆ ಅತೀ ಅವಶ್ಯವಿದೆ, ಆದರೆ
ಅದನ್ನು ವಿದ್ಯಾಥರ್ಿ ಜೀವನದಲ್ಲಿಯೇ ರೂಢಿಸಿಕೊಳ್ಳುವುದು ಹೆಚ್ಚು ಸೂಕ್ತವೆಂದು ಹಾವೇರಿ ಶಾಸಕ ನೆಹರು ಓಲೇಕಾರ
ಅಭಿಪ್ರಾಯ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯು ಇತ್ತೀಚೆಗೆ ಹಾವೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕರಾಟೆ ಸ್ಫಧರ್ೆಗಳಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಾಲೆಯ ಕ್ರೀಡಾಪಟುಗಳಿಗಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ
ಮಹಿಳೆಯರು ಎಷ್ಟು ಸುರಕ್ಷಿತ ಎಂಬುದನ್ನು ನಾವು ಹೇಳಿ ಕೊಡಬೇಕಾಗಿಲ್ಲ
ಆದರೆ ಕರಾಟೆಯಂತಹ ಆತ್ಮರಕ್ಷಣಾ ಕಲೆಯನ್ನು ಕಲಿತಿದ್ದೇ ಆದಲ್ಲಿ ಸ್ವಲ್ಪಮಟ್ಟಿನ ಪ್ರತಿತೋಧವನ್ನು ತೋರಲು ಸಾಧ್ಯವಾಗುತ್ತದೆ ಎಂದರು.
ಕ್ರೀಡಾಸಕ್ತಿ ಬೆಳೆಸಿಕೊಳ್ಳಿ: ಪ್ರಸ್ತುತ ದಿನಗಳಲ್ಲಿ ಆರೋಗ್ಯ ಎಂಬುದೇ ಹೆಚ್ಚು ಚಚರ್ಿತ ವಿಷಯಯವಾಗಿದ್ದು ವಿದ್ಯಾಥರ್ಿ ಜೀವನ ದಲ್ಲಿ ಮಕ್ಕಳು
ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು, ಇದರಿಂದ ಮಾತ್ರ ಆರೋಗ್ಯವಂತ ಸಮಾಜ ಕಾಣಲು ಸಾಧ್ಯ,
ಇಲ್ಲದೇ ಹೋದಲ್ಲಿ ಜೀವನದುದ್ದಕ್ಕೂ ಅನಾರೋಗ್ಯ ಪೀಡಿತರಾಗಿ ಬಳಲಬೇಕಾಗುತ್ತದೆ, ಇಂದಿನಿಂದಲೇ ತಮ್ಮ ಜೀವನ ಶೈಲಿಯನ್ನು
ಬದಲಾಯಿಸಿಕೊಳ್ಳುವಂತೆ ಕರೆ ನೀಡಿದರು.
ಅಭಿನಂದನೆ: ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಐಶ್ವರ್ಯ ಪಾಟೀಲ,
ಅಕ್ಷಯ ಪಾಟೀಲ, ಲಿಖಿತ ಹೆಸರೂರ, ಸುದೀಪ ಬಳ್ಳಾರಿ, ಹರೀಶ ಪಾಟೀಲ, ಮಹ್ಮದಸಾದಿಕ್
ಚೋಪದಾರ, ದ್ವಿತೀಯ ಸ್ಥಾನ ಪಡೆದ ಲಿಂಗರಾಜ ಹೆಸರೂರ,
ತೌಸೀಫ್ ಮುಲ್ಲಾ ಹಾಗೂ ತೃತೀಯ ಸ್ಥಾನ
ಪಡೆದ ಕಾತರ್ಿಕ ಬುರಡೀಕಟ್ಟಿ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ
ಗೌರವಿಸಲಾಯಿತು.
ವೇದಿಕೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ವಿರೇಂದ್ರ ಶೆಟ್ಟರ, ಮುಖ್ಯ ಶಿಕ್ಷಕಿ ಶೋಭಾ ಸುಣಗಾರ ತರಬೇತುದಾರರಾದ
ಸುಧಾರಾಣಿ ಎನ್. ಕಳ್ಳಿಮನಿ ಸೇರಿದಂತೆ
ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿಗಳು
ಉಪಸ್ಥಿತರಿದ್ದರು.
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 