ಮಹಿಳೆಯರ ಆರ್ಥಿಕ ಸಬಲತೆಗೆ ಸ್ವಯಂ ಉದ್ಯೋಗ ಕೌಶಲ್ಯ ಸಹಕಾರಿ - ಪ್ರಕಾಶ್ ಕೋಳಿವಾಡ
Self-employment skills help in women's economic empowerment - Prakash Koliwad
ಮಹಿಳೆಯರ ಆರ್ಥಿಕ ಸಬಲತೆಗೆ ಸ್ವಯಂ ಉದ್ಯೋಗ ಕೌಶಲ್ಯ ಸಹಕಾರಿ - ಪ್ರಕಾಶ್ ಕೋಳಿವಾಡ
ರಾಣೆಬೆನ್ನೂರು:27 ಮಹಿಳೆಯರ ಮತ್ತು ಯುವತಿಯರ ಆರ್ಥಿಕ ಸಮಾನತೆಗೆ ಕೌಶಲ್ಯ ಭರಿತ ಕರಕುಶಲ ಕಲೆಗಳ ತರಬೇತಿ ಮತ್ತು ಉದ್ಯೋಗದ ಅಗತ್ಯವಿದ್ದು, ಮಹಿಳೆಯರು ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತವಾಗಿ ಮುಂದೆ ಬಂದಾಗ ಮಾತ್ರ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುವುದು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು, ತಾಲೂಕಿನ ಇಟಗಿ ಗ್ರಾಮದಲ್ಲಿ ಸ್ವಯಂ ಉದ್ಯೋಗಸ್ಥರಿ ಗಾಗಿ ರಾಣೆಬೆನ್ನೂರಿನ ಪಿಕೆ ಕೆ ಇನಿಶಿಯೇಟಿವ್ ಆಯೋಜಿಸಿದ್ದ,ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ, ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು. ಮಹಿಳೆಯರು ಇಂದು ಸರ್ಕಾರ ಮತ್ತು ಸಮಾಜದಿಂದ ಡೊರೆಯಬಹುದಾದ ಕೌಶಲ್ಯ ತರಬೇತಿ ಪಡೆಯಲು ಮುಂದಾಗಬೇಕು ಅಲ್ಲದೆ ಯುವತಿಯರು ತಮ್ಮ ವಿದ್ಯಾರ್ಜನೆ ಜೊತೆ ಜೊತೆಗೆ, ಸಿಗಲಿರುವ ವಿಶೇಷ ತರಬೇತಿಗಳು ಬದುಕಿನಲ್ಲಿ ಅಳವಡಿಸಿಕೊಂಡು ಆರ್ಥಿಕ ಪ್ರಗತಿಗೆ ಮುಂದಾಗಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಮತ್ತು ಧರ್ಮಪತ್ನಿ ಶ್ರೀಮತಿ ಪೂರ್ಣಿಮಾ ಕೋಳಿವಾಡ ಅವರಿಗೆ ಗ್ರಾಮದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಮೈಲಾರ್ಪ ಬಿದರಿ, ಮಾರುತಿ ಗುಡಿಯವರ, ಮಂಜಪ್ಪ ಶಿವಂಗಪ್ಪನವರ, ಗುರುರಾಜ್ ಉಪ್ಪಿನ, ಹನುಮಂತಪ್ಪ, ಕೃಷ್ಣಪ್ಪ ಕಂಬಳಿ, ಸೇರಿದಂತೆ ಗ್ರಾಮದ ಮುಖಂಡರು ಗಣ್ಯರು, ತರಬೇತಿ ಮುಖ್ಯಸ್ಥರು,ಮತ್ತು ಮಹಿಳೆಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 