ದೈಹಿಕ ಶಕ್ತಿ ಅನುಗುಣವಾಗಿ ಸ್ವ ಉದ್ಯೋಗ ಮಾಡಬಹುದು: ಸಿದ್ದು ಮಸಳಿ
Self-employment is possible depending on physical strength: Siddu Masali
ಶಿಗ್ಗಾವಿ 21ಃ- ವಿಕಲಚೇತನರ ಜೀವನೋಪಾಯದ ಸ್ವ ಉದ್ಯೋಗಗಳಿಗೆ ಸೌರಶಕ್ತಿ ಚಾಲಿತ ಉಪಕರಣಗಳು ಉದ್ಯೋಗಸ್ತರಿಗೆ ಕ್ರಾಂತಿಕಾರಿ ಪರಿಹಾರ ನೀಡಲಿದೆ ಎಂದು ವಿಕಲಚೇತರ ವಿವಿದ್ದೋದ್ದೇಶ ಪುನರ್ ವಸತಿ ಕಾರ್ಯಕರ್ತರ ಕೇಂದ್ರ ಅಧಿಕಾರಿ ಸಿದ್ಧು ವಾಯ್ ಮಸಳಿ ಹೇಳಿದರು.
ಪಟ್ಟಣದ ಶಾಸಕರ ಸಭಾಭವನದಲ್ಲಿ ಸೆಲ್ಕೋ ಸಂಸ್ಥೆ, ರೋಶನೀ ಸಂಸ್ಥೆ ಹಾಗೂ ತಾಲೂಕು ವಿಕಲಚೇತರ ಜೀವನೋಪಾಯಕ್ಕೆ ಸೌರಶಕ್ತಿ ಚಾಲಿತ ಉಪಕರಣಗಳ ಬಳಕೆ ಬಗ್ಗೆ ಶಿಭಿರ ಆಯೋಜಿಸಿ ಮಾತನಾಡಿ ದೈಹಿಕ ಶಕ್ತಿ ಅನುಗುಣವಾಗಿ ಸ್ವ ಉದ್ಯೋಗ ಜೀವನೋಪಾಯ ಉಳಿಸಿಕೊಳ್ಳಬಹುದು ಇದರಿಂದಾಗಿ ದೈಹಿಕ ಅಂಗವಿಕಲತೆಯಲ್ಲೂ ಸ್ವಾವಲಂಭನೆ ಜೀವನ ಕಟ್ಟಿಕೊಳ್ಳಬುಹುದಾಗಿದೆ. ನೀವು ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಅರ್ಜಿ ನೊಂದಾಯಿಸಿ ನೂರು ದಿನಗಳ ಖಾತ್ರಿ ಪಡೆಯಬಹುದು.
ಧಾರವಾಡ ಸೆಲ್ಕೋ ಪೌಂಡೀಶನ್ ನಿರ್ವಾಹಕ ಸಿದ್ದಾರ್ಥ ಪಾಟೀಲ ಮಾತನಾಡಿ ಸೌರಶಕ್ತಿ ಚಾಲಿತ ಯಂತ್ರೋಪಕರಣಗಳ ಬಳಕೆಯಲ್ಲಿ ಕಾಂ್ರತಿಕಾರಿ ಅವಿಸ್ಕಾರವಾಗಿದ್ದುಸೌರಶಕ್ತಿ ಜೀವನೋಪಾಯಕ್ಕೆ ಕಡಿಮೆ ಖರ್ಚಿನಲ್ಲಿ ಆದಾರವಾಗುತ್ತದೆ.ಪೌಂಡಿಶನ್ ಈ ಮೂಲಕ ಸಿಎಸ್‌ಆರ್ ಫಂಡಗಳ ಸಹಾಯದಿಂದ ಯಂತ್ರೋಪಕರಣಗಳ ಅನುಷ್ಠಾನಗೊಳಿಸಿ ವಿಕಲಚೇತರಿಗೆ ಸ್ವುದ್ಯೋಗಕ್ಕೆ ಸಯಹಕಾರ ನೀಡಲಿದೆ. ಆಸಕ್ತರು ಸರಳ ತಂತ್ರಜ್ಞಾನದಿಂದ ನಿರಾಂತಕವಾಗಿ ವೃತ್ತಿ ಮಾಡಬಹುದಾಗಿದೆ. ಅರ್ಥಿಕ ಬ್ಯಾಂಕ್ ಸಾಲ ಸರಳಿಕರಣದಿಂದ ಕೆಲಸಗಾರರ ಕೊರತೆ ನೀಗಿಸಬಹುದಾಗಿದೆ ಎಂದರು.
ಹಾನಗಲ್ ರೋಶನಿ ಸಂಸ್ಥೆಯ ಮೇಲ್ವಿಚಾರಕ ಜಾನೀಟ್ ಪಿಂಟೋ ಮಾತನಾಡಿ ವಿಕಲಚೇತನ ಮಕ್ಕಳ ಪಾಲಕರು ಉದ್ಯೋಗ ವೃತ್ತಿಯ ಸಹಾಯ ಸಹಕಾರದ ಜೊತೆಗೆ ಮಕ್ಕಳಲ್ಲಿ ಪೌಷ್ಠಿಕ ಆಹಾರ ಪದ್ದತಿ ಅನುಸರಿಸಿ ಪಾಲನೆ ಮಾಡಬೇಕು. ಉತ್ತಮ ಆಹಾರ ಸೇವನೆ ಕುಟುಂಭ ಜೀವನೋಪಾಯ ಸದೃಡ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಸಿಸ್ಟರ್ ಬೆಂಟಿಕ್ ಡಿಸೋಜಾ, ಸಚಿನ್, ನಾಗರಾಜ ಅಲ್ಲದೇ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ವಿಕಲಚೇತರು, ಪಾಲಕರು, ಕುಟುಂಬಸ್ಥರು ಶಿಬಿರದಲ್ಲಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 