ತಾಲೂಕು ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳ ಆಯ್ಕೆ

ತಾಲೂಕು ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳ ಆಯ್ಕೆ Selection of students for taluk level competition

ತಾಲೂಕು ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳ ಆಯ್ಕೆ

ಧಾರವಾಡ 15  : ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಇತ್ತೀಚೆಗೆ ಏರಿ​‍್ಡಸಿದ್ದ ನಿಗದಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ದೇಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಭರತ ನಾಟ್ಯ - ಐಶ್ವರ್ಯಾ ಕಾಳಿ, ಧಾರ್ಮಿಕ ಪಠನ - ಲಕ್ಷೀ ಜೋಡಳ್ಳಿ, ಮಿಮಿಕ್ರಿಯೆ - ಬಸವರಾಜ ಜಗದಪ್ಪನವರ, ಆಶುಭಾಷಣ - ಅಪೂರ್ವಾ ದೊಡಮನಿ, ಚಿತ್ರಕಲೆ - ಆಕಾಶ ಮಡಿವಾಳರ, ಕ್ವೀಜ್ - ವಿನಯಕುಮಾರ ಮುದಕವಿ ಮತ್ತು ಪವನಕುಮಾರ ಅಂಗಡಿ, ಚರ್ಚಾ ಸ್ಪರ್ದೇ - ರಾಜೇಶ್ವರಿ ಮೇಡ್ಯಾಳ, ಇಂಗ್ಲೀಷ ಭಾಷಣ - ತಾಯಮ್ಮ ಅಂಗಡಿ, ಕನ್ನಡ ಭಾಷಣ - ಸೌಭಾಗ್ಯಾ ಕುಂದಗೋಳ, ಹಿಂದಿ ಭಾಷಣ - ಅಪ್ನಾನ ಮುಲ್ಲಾ, ಕವನ ವಾಚನ - ಶ್ರೇಯಾ ಕುಂದಗೋಳ, ಕವ್ವಾಲಿ - ಮುಸ್ಕಾನ ಧಾರವಾಡ, ಶಮಾ ಮುಲ್ಲಾ, ನಿದಾ ಮುಲ್ಲಾ, ಐಶ್ವರ್ಯಾ ಪಾಟೀಲ. ಜಾನಪದ ನೃತ್ಯ - ಮಮತಾ ಯರಗಂಬಳಿಮಠ, ಭಾವನಾ ಭಜಂತ್ರಿ, ಅನು ಹಳದುಂಡಿಮಠ, ಜ್ಯೋತಿ ಅಂಗಡಿ, ಸುಶ್ಮೀತಾ ಅವರಾದಿ, ಸುಹಾಸಿನಿ ದುಗನಿಕೇರಿ. ಬಹುಮಾನ ಪಡೆದು ತಾಲೂಕು ಮಟ್ಟದ ಸ್ಪರ್ದೇಗೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ನಾಜೀಯಾ ಮುದೋಳ, ಸಾಹಿತಿ ನಾರಾಯಣ ಭಜಂತ್ರಿ, ಶಿಕ್ಷಕರಾದ ಶಶಿಧರ ದಮ್ಮಳ್ಳಿ, ಸೋಮನಾಥ ಹಿರೇಮಠ, ಸಪ್ನಾ ಕುರಿಯವರ, ಮಂಜುಳಾ ವಿಭೂತಿ, ರೇಖಾ ಜೋಶಿ, ಶ್ರೀದೇವಿ ದೊಡಮನಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರಾಮನಗೌಡ ಪಾಟೀಲ, ಮುಂದಾದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.