ಸಮಾಜ ಸೇವಾ ಕಾರ್ಯಕರ್ತರ ಆಯ್ಕೆ
Selection of social service workers
ಕಂಪ್ಲಿ 08 : ಪಟ್ಟಣದ ಅತಿಥಿ ಗೃಹದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ಸಂಘಟನಾ ಸಭೆ ಹಾಗೂ ತಾಲೂಕು ಘಟಕದ ಆಯ್ಕೆ ಸಮಾರಂಭ ನಡೆಯಿತು.
ವೇದಿಕೆಯ ರಾಜ್ಯ ಕಾರ್ಯದರ್ಶಿ ಡಾ.ರಾಜಕುಮಾರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸ್ವಾತಂತ್ರ್ಯ, ಸಹೋದರತೆ, ಸಮಾನತೆಗಾಗಿ ಮತ್ತು ಜನರ ಧ್ವನಿಯಾಗಿ ಕೆಲಸ ಮಾಡುವ ಧ್ಯೇಯ ಹೊಂದಿದೆ. ನೂತನ ಪದಾಧಿಕಾರಿಗಳು ವೇದಿಕೆಯ ಏಳಿಗೆಗೆ ಹಾಗೂ ಜನಪರ ಸೇವಾ ಕಾರ್ಯ ಮಾಡಲು ಮುಂದಾಗಬೇಕು ಎಂದರು.
ನಂತರ ಮುಖಂಡ ವೀರಭದ್ರಗೌಡ ಮಾತನಾಡಿ, ಹುಟ್ಟು ಸಾವಿನ ಮಧ್ಯದಲ್ಲಿರುವ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಿದರೆ ಮಾತ್ರ ಸಾಧನೆಗಳು ಅವಿಸ್ಮರಣೆಯಾಗಿ ಉಳಿಯಲು ಸಾಧ್ಯ. ವೇದಿಕೆಯ ಧ್ಯೇಯ ಉದ್ದೇಶಗಳು ಕಟ್ಟಕಡೆಯ ಮನುಷ್ಯನಿಗೆ ಸೌಲಭ್ಯಗಳೊಂದಿಗೆ ಒದಗಿಸಿ ಕೊಡುವ ಜೊತೆಗೆ ಜನರ ಸಂಕಷ್ಟವನ್ನು ಆಲಿಸಿ, ಹೋರಾಟದ ಮೂಲಕ ಪರಿಸರಿಸಬೇಕಾಗಿದೆ. ಎಲ್ಲರು ಒಗ್ಗೂಡಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಮಾಜಕ್ಕೆ ನ್ಯಾಯ ಒದಗಿಸಿಕೊಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಪಿಎಸ್‌ಐ ಬಸವರಾಜ, ಮುಖಂಡರಾದ ಬಿ.ರಮೇಶ ಉಪ್ಪಾರ, ಷಣ್ಮುಕಪ್ಪ, ಎನ್.ಬಸವರಾಜ ಸೇರಿದಂತೆ ಇತರರು ಇದ್ದರು. ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ಕಂಪ್ಲಿ ತಾಲೂಕು ಘಟಕಕ್ಕೆ ಆಯ್ಕೆಗೊಂಡ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು, ಹೆಚ್.ಮರಿಯಪ್ಪ(ಅಧ್ಯಕ್ಷ), ಹೆಚ್.ಗೋಪಾಲ(ಪ್ರಧಾನ ಕಾರ್ಯದರ್ಶಿ), ರಿಯಾಜ್ ಅಹ್ಮದ್(ಕಾರ್ಯದರ್ಶಿ) ಇವರು ಆಯ್ಕೆಗೊಂಡರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 