ರಾಜ್ಯ ಮಟ್ಟದ ಖೋ- ಖೋ ಕ್ರೀಡಾಕೂಟಕ್ಕೆ ಆಯ್ಕೆ
Selected for the state-level Kho-Kho Games
ತಾಳಿಕೋಟಿ 04: ಬೆಂಗಳೂರಿನಲ್ಲಿ ನವಂಬರ್ 6,7 ಹಾಗೂ 8ರಂದು ನಡೆಯಲಿರುವ ಅಂಡರ್ -14 ಮಿನಿ ಒಲಿಂಪಿಕ್ ರಾಜ್ಯಮಟ್ಟದ ಖೋ ಖೋ ಕ್ರೀಡಾಕೂಟಕ್ಕೆ ಬ್ರಿಲಿಯಂಟ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ವಿಜಯಪುರ ಜಿಲ್ಲಾ ತಂಡದಲ್ಲಿ ಬ್ರಿಲಿಯಂಟ್ ಪ್ರಾಥಮಿಕ ಶಾಲೆ ಮೈಲೇಶ್ವರದ 8ನೇ ತರಗತಿಯ ವಿದ್ಯಾರ್ಥಿಗಳಾದ ಮುತ್ತಪ್ಪ ಬಿರಾದಾರ ಹಾಗೂ ಬೀರ್ಪ ಪೂಜಾರಿ ಅವರು ಪ್ರತಿನಿಧಿಸುತ್ತಿದ್ದಾರೆ.
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ, ತಾಲೂಕಿಗೆ ಹಾಗೂ ಬ್ರಿಲಿಯಂಟ್ ಶಾಲೆಗೆ ಕೀರ್ತಿ ತರಲೆಂದು ಈರ್ವ ವಿದ್ಯಾರ್ಥಿಗಳಿಗೆ ಮಾರುತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬ್ರಿಲಿಯಂಟ್ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಸೋಮವಾರ ಸಿಹಿ ತಿನಿಸಿ ಶುಭ ಹಾರೈಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 