ಖೋ ಖೋ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
Selected for the national level in the Kho Kho tournament
14 ವರ್ಷದ ವಯೋಮಿತಿ ಒಳಗಿನ ಬಾಲಕರ ಚಿಕ್ಕೋಡಿ ತಂಡ ಹಾಗೂ ಬಾಲಕಿಯರ ವಿಜಯಪುರದ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ
17 ವರ್ಷದ ವಯೋಮಿತಿಯ ಒಳಗಿನ ಬೆಳಗಾವಿ ವಿಭಾಗದ ಬಾಲಕ ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆ
ಮೂಡಲಗಿ 28: ಮೂಡಲಗಿ ತಾಲೂಕಿನ ನಾಗನೂರಿನಲ್ಲಿ ನಡೆದ ವಿಭಾಗ ಹಾಗೂ ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ತಂಡಗಳು ನೇರ ಹಣಾಹಣಿ ನಡೆಸಿ ಬೆಳಗಾವಿ ವಿಭಾಗ ಮಟ್ಟದಿಂದ 14 ವರ್ಷದ ಒಳಗಿನ ಬಾಲಕ ಬಾಲಕಿಯರ ವಿಭಾಗ ಮಟ್ಟದ ಖೋ ಖೋದಲ್ಲಿ ಚಿಕ್ಕೋಡಿಯು- ಬೆಳಗಾವಿ ತಂಡವನ್ನು 10-5 ರಿಂದ ಮಣಿಸಿ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನ ಬೆಳಗಾವಿ ಪಡೆಯಿತು.
ಬಾಲಕಿಯರ ವಿಭಾಗದಲ್ಲಿ ವಿಜಯಪುರವು- ಬಾಗಲಕೋಟೆ ತಂಡವನ್ನು 7 ಅಂಕಗಳಿಂದ ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನ ಬಾಗಲಕೋಟೆಯ ಪಾಲಾಯಿತು. ಚಿಕ್ಕೋಡಿ ಬಾಲಕರ ಹಾಗೂ ಬಾಲಕಿಯರ ವಿಜಯಪುರ ತಂಡವು ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು . 17 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಚಿಕ್ಕೋಡಿ ತಂಡವು ಧಾರವಾಡವನ್ನು 14-13 ಅಂಕ ಪಡೆಯುವುದರ ಜೊತೆಗೆ ರೋಚಕ ಘಟ್ಟ ತಲುಪಿ 1 ಅಂಕದಿಂದ ಚಿಕ್ಕೋಡಿ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಯಿತು. ಬಾಲಕಿಯರ ವಿಭಾಗದಲ್ಲಿ ಅತಿಥಿಯ ಚಿಕ್ಕೋಡಿ ತಂಡವು ಹಾವೇರಿ ತಂಡವನ್ನು 10 -9 ಅಂಕಗಳಿಂದ ಮಣಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು.
ರಾಷ್ಟ್ರಮಟ್ಟಕ್ಕೆ ಆಯ್ಕೆ14 ವರ್ಷದ ಒಳಗಿನ ಬಾಲಕ ಬಾಲಕಿಯರ ರಾಜ್ಯಮಟ್ಟದ ಖೋಖೋ ಲೀಗ್ ಕಮ್ ನಾಕ್ ಓಟ್ ಪದ್ದತಿಯಲ್ಲಿ ಬೆಳಗಾವಿ, ಬೆಂಗಳೂರು, ಮೈಸೂರು, ಕಲ್ಬುರ್ಗಿ ವಿಭಾಗದಿಂದ ಗೆದ್ದು ಬಂದ ಬಾಲಕರ ಹಾಗೂ ಬಾಲಕಿಯರ 8 ತಂಡಗಳು ಸೇಣಸಾಟ ನಡೆಸಿದವು. ಬೆಳಗಾವಿ ಬಾಲಕರ ತಂಡವು ಕಲಬುರ್ಗಿ ಮೈಸೂರು ಬೆಂಗಳೂರು 3 ತಂಡವನ್ನು ಸೋಲಿಸಿ 6 ಅಂಕ ಪಡೆದು ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನ ಬೆಂಗಳೂರು ತಂಡಕ್ಕೆ ಲಭಿಸಿದೆ. ಬೆಳಗಾವಿ ಬಾಲಕಿಯರು ಕಲ್ಬುರ್ಗಿ, ಮೈಸೂರು, ಬೆಂಗಳೂರು, ತಂಡವನ್ನು ಸೋಲಿಸುವ ಮೂಲಕ ತಲಾ 6 ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನ ಬೆಂಗಳೂರು ಪಡೆಯಿತು. ರಾಜ್ಯಮಟ್ಟದಲ್ಲಿ ಬೆಳಗಾವಿ ಬಾಲಕ ಬಾಲಕಿಯರು ಗೆಲ್ಲುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಕರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಷನ್ ಉಪಾಧ್ಯಕ್ಷ ಜಯರಾಮ್ ಮೈಸೂರು ಡಿಪಿಓ ಸುರೇಶ ಡಿ ಮಂಡ್ಯ ಎಸ್ ಕೆ ರಾಜು ಬೆಂಗಳೂರು ಕೆ ಎಸ್ ಹನುಮಂತೇಗೌಡ, ನಾಗನೂರಿನ ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ, ಪ್ರಭಾ ಶುಗರ್ ನಿರ್ದೇಶಕ ಕೆಂಚನಗೌಡ ಪಾಟೀಲ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪರಸಪ್ಪ ಬಬಲಿ, ಮಲ್ಲಪ್ಪ ಹೊಸಮನಿ, ಸುರೇಶ ಸಕ್ಕರೆಪ್ಪಗೋಳ, ಬೆಳಗಾವಿ ಜಿಲ್ಲಾ ಖೋ ಖೋ ಅಸೋಸಿಯೇಷನ ಜಿಲ್ಲಾಧ್ಯಕ್ಷ ಗಜಾನನ ಯರಗಣವಿ, ಚಿಕ್ಕೋಡಿ ಜಿಲ್ಲಾ ಡಿಪಿಓ ಜುನೇದಿ ಪಟೇಲ, ಟಿಪಿಓ ಎಸ್ ಬಿ ಹಳಿಗೌಡರ, ಗೋಕಾಕ ಟಿಪಿಓ ಎಲ್ ಕೆ ತೋರಣಗಟ್ಟಿ, ಬೆಳಗಾವಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಜು ಹಿರೇಮಠ, ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎಸ್.ಎಲ್ ಹೊಸಮನಿ, ಸಂಸ್ಥೆಯ ಕಾರ್ಯದರ್ಶಿ ಎಸ್ ಬಿ ಹೊಸಮನಿ, ನಿರ್ದೇಶಕರಾದ ಬಿ ಬಿ ಪಾಟೀಲ, ಎಲ್ ಬಿ ಸಕ್ರೆಪ್ಪಗೋಳ , ಬಿ ಎಂ ಬಂಡಿ, ಸಿ ಎ ಸಕ್ರೆಪ್ಪ ಗೋಳ, ಮುಖ್ಯ ಶಿಕ್ಷಕ ಎಸ್ ಬಿ ಕೇದಾರಿ, ಈರಣ್ಣ ಹಳಿಗೌಡರ, ಸಿ ಆರ್ ಪೂಜಾರಿ ಸಿ ಎಸ್ ಹಿರೇಮಠ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 