ತಾಳಿಕೋಟೆ 25: ತಾಲೂಕಿನ ಸರೂರ ಗ್ರಾಮದಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಲಿಂಗದಳ್ಳಿಯ ಸಕರ್ಾರಿ ಪ್ರೌಢ ಶಾಲೆಯ ಬಾಲಕ ಹಾಗೂ ಬಾಲಕೀಯರು ಗುಂಪು ಆಟದ ವ್ಹಾಲಿಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪಂಚಾಯತ್ ವಿಜಯಪುರ, ಸಾರ್ವಜನಿಕ ಶಿಕ್ಷಣ ಇಲಾಖೆ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ಏರ್ಪಡಿಸಲಾದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಲಿಂಗದಳ್ಳಿಯ ಸಕರ್ಾರಿ ಪ್ರೌಢ ಶಾಲೆಯ ಬಾಲಕ ಹಾಗೂ ಬಾಲಕೀರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಬಾಲಕೀಯರ ತಂಡವು ಸತತ ಮೂರನೇ ಭಾರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವದು ಶಾಲಾ ಸಿಬ್ಬಂದಿಗಳ ಸಂತಸಕ್ಕೆ ಕಾರಣವಾಗಿದೆ.
ಈ ವಿಧ್ಯಾಥರ್ಿಗಳ ಸಾಧನೆಗೆ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಮಲ್ಲಣ್ಣ ನಾಡಗೌಡ, ಮುಖ್ಯಗುರುಗಳಾದ ಎನ್.ಎಸ್.ನಾಯಕ, ದೈಹಿಕ ಶಿಕ್ಷಕ ಎಸ್.ಟಿ.ಸಜ್ಜನ ಅವರು ಅಭಿನಂದಿಸಿದ್ದಾರೆ.